ETV Bharat / state

ರಾಹುಲ್‌ಗೆ ಇಡಿ ವಿಚಾರಣೆ​: ಮೈಸೂರಿನಲ್ಲಿ ಕಾಂಗ್ರೆಸ್​ ಮುಖಂಡರಿಂದ ಪ್ರತಿಭಟನೆ

author img

By

Published : Jun 17, 2022, 3:47 PM IST

ಮೈಸೂರಿನ ಪುರಭವನದಿಂದ ನಜರ್ಬಾದ್ ತೆರಿಗೆ ಕಚೇರಿವರೆಗೆ ಮೆರವಣಿಗೆ ಹೊರಡಲು ಮುಂದಾದ ಕಾಂಗ್ರೆಸ್​ ಮುಖಂಡರನ್ನು ಪೊಲೀಸರು ತಡೆದರು.

ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು
ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು

ಮೈಸೂರು: ರಾಹುಲ್ ಗಾಂಧಿಯನ್ನು ಜಾರಿ ನಿರ್ದೇಶನಾಲಯ(ಇಡಿ) ವಿಚಾರಣೆಗೆ ಒಳಪಡಿಸಿರುವುದನ್ನು ವಿರೋಧಿಸಿ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.


ಪುರಭವನದಿಂದ ನಜರ್ಬಾದ್ ತೆರಿಗೆ ಕಚೇರಿವರೆಗೆ ಮೆರವಣಿಗೆ ಹೊರಡಲು ಮುಂದಾದ ಕಾಂಗ್ರೆಸ್​ ಮುಖಂಡರನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪ್ರತಿಭಟನಾನಿರತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ದ್ರುವನಾರಾಯಣ್, ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್, ತನ್ವಿರ್ ಸೇಠ್, ಅನಿಲ್ ಚಿಕ್ಕಮಾದು ಸೇರಿದಂತೆ ಇತರರು ಭಾಗಿಯಾಗಿದ್ದರು.

ಇದನ್ನೂ ಓದಿ: ಚಾಮರಾಜನಗರ : ಮತ್ತೆ ಆನೆ ದಾದಾಗಿರಿ ಪ್ರಾರಂಭ, ಲಾರಿ ತಡೆಗಟ್ಟಿ ಕಬ್ಬು ವಸೂಲಿ!!

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.