ETV Bharat / state

'ಬೊಮ್ಮಾಯಿ ಸರ್ಕಾರ ಆರಂಭದಲ್ಲೇ ಒಳ್ಳೆಯ ರೀತಿ ನಡೆಯುತ್ತಿದೆ': ಹೆಚ್​ ವಿಶ್ವನಾಥ್

author img

By

Published : Aug 6, 2021, 8:37 PM IST

ಪ್ರಸ್ತುತ ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಆರಂಭದಲ್ಲೇ‌ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ.‌ ಇವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮೂಲಕ ಉತ್ತಮ ಆಡಳಿತ ನೀಡುವ ಕಡೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ತಿಳಿಸಿದ್ದಾರೆ.

h-vishwanath
ಹೆಚ್. ವಿಶ್ವನಾಥ್

ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರಂಭದಲ್ಲೇ ಎಲ್ಲ ರೀತಿಯಲ್ಲೂ "ಗುಡ್ ಬಿಗಿನಿಂಗ್ " ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡಲಿ‌ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಸಿ‌ಎಂ‌ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಮಾತನಾಡಿದರು

ಈ ಟಿವಿ ಭಾರತ್ ಜೊತೆ ಅವರು ಮಾತನಾಡಿದರು. ಪ್ರಸ್ತುತ ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಆರಂಭದಲ್ಲೇ‌ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ.‌ ಇವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮೂಲಕ ಉತ್ತಮ ಆಡಳಿತ ನೀಡುವ ಕಡೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಅವರು ನರೇಂದ್ರ ಮೋದಿ ಅವರ ಸಂದೇಶದಂತೆ ಭ್ರಷ್ಟಾಚಾರ ಮುಕ್ತ‌ ಆಡಳಿತವನ್ನು ನಡೆಸುವ ಕಡೆ ಪ್ರಯತ್ನ ಆರಂಭಿಸಿದ್ದಾರೆ ಎಂದರು.

ಇದಕ್ಕೆ ಉದಾಹರಣೆಯಂತೆ ರಾಜಕೀಯ ಮುತ್ಸದಿ ಹೆಚ್.ಡಿ ದೇವೇಗೌಡ ಅವರನ್ನು ಭೇಟಿಯಾಗಿ ಆರ್ಶೀವಾದ ಪಡೆದಿದ್ದಾರೆ. ಈ ಹಿಂದೆ ಏನಾಗಿತ್ತು ಎಂಬ ಬಗ್ಗೆ ಈಗ ಮಾತನಾಡಬಾರದು. ಮುಂದೆ ಒಳ್ಳೆಯ ಆಡಳಿತ ನೀಡುವ ಕಡೆ ಪ್ರಯತ್ನ ಮಾಡಬೇಕಾಗಿದೆ. ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅಸಮಾಧಾನ ಸಹಜ. ಆದರೆ, ಒಳ್ಳೆಯ ಆಡಳಿತ ನೀಡಲು ಪ್ರಯತ್ನಿಸಿದಾಗ ಎಲ್ಲರೂ ಸಹಕಾರ ನೀಡುತ್ತಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ನೈಟ್ ಕರ್ಪ್ಯೂ ಹಾಗೂ ಗಡಿ ಜಿಲ್ಲೆಗಳಲ್ಲಿ ವೀಕೆಂಡ್​ ಕರ್ಫ್ಯೂ ಜಾರಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದರು. 3ನೇ ಅಲೆ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಎಂಬ ಬಗ್ಗೆ ಡಬ್ಲ್ಯೂಹೆಚ್​ಒ ಹೇಳಿದೆ. ಇದರ ಬಗ್ಗೆ ಎಚ್ಚರಿಕೆ, ಕಾಳಜಿ‌ ಇರಬೇಕು. ಆ ಹಿನ್ನೆಲೆಯಲ್ಲಿ ವೀಕೆಂಡ್​ ಕರ್ಫ್ಯೂ ಸರಿಯಿದೆ ಎಂದರು.

ಓದಿ: Covid ನಿಯಂತ್ರಣ ಸಂಬಂಧ ಸಭೆ ನಡೆಸಿದ ನಾರಾಯಣಗೌಡ: ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಸಚಿವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.