ETV Bharat / state

ಉದ್ಯೋಗ: ಚೆಸ್ಕಾಂನಲ್ಲಿ 200 ಅಪ್ರೆಂಟಿಸ್​​ ಹುದ್ದೆಗಳು

author img

By ETV Bharat Karnataka Team

Published : Jan 2, 2024, 2:01 PM IST

ಪದವೀಧರ, ಟೆಕ್ನಿಷಿಯನ್​, ನಾನ್​ ಟೆಕ್ನಿಷಿಯನ್​ ಅಪ್ರೆಂಟಿಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Apprentice Job notification from Chamundeshwari Electricity Supply Corporation Limited
Apprentice Job notification from Chamundeshwari Electricity Supply Corporation Limited

ಬೆಂಗಳೂರು: ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್​ ಸರಬರಾಜು ನಿಗಮ ನಿಯಮಿತದಿಂದ ಅಪ್ರೆಂಟಿಸ್​​ ಟ್ರೈನಿಂಗ್​ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಪದವೀಧರ ಮತ್ತು ಡಿಪ್ಲೊಮಾ ಇಂಜಿನಿಯರಿಂಗ್​ 200 ಅಪ್ರೆಂಟಿಸ್​ ಹುದ್ದೆಗಳು ಇವಾಗಿವೆ. ಈ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ಮಾತ್ರ ಆಯ್ಕೆ ಮಾಡಲಾಗುತ್ತದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆಗಳ ವಿವರ:

  • ಪದವೀಧರ ಅಪ್ರೆಂಟಿಸ್​​ - 80
  • ಟೆಕ್ನಿಶಿಯನ್​​ (ಡಿಪ್ಲೊಮಾ) ಅಪ್ರೆಂಟಿಸ್​​ - 55
  • ನಾನ್​ ಇಂಜಿನಿಯರಿಂಗ್​ ಅಪ್ರೆಂಟಿಸ್​ - 65

ವಿದ್ಯಾರ್ಹತೆ: ಪದವೀಧರ ಅಪ್ರೆಂಟಿಸ್​​ ಹುದ್ದೆಗಳಿಗೆ ಅಭ್ಯರ್ಥಿಗಳು ಎಲೆಕ್ಟ್ರಿಕಲ್ ಆ್ಯಂಡ್​ ಎಲೆಕ್ಟ್ರಾನಿಕ್ಸ್​​ ಇಂಜಿನಿಯರಿಂಗ್​ ಮತ್ತು ಸಿವಿಲ್​ ಇಂಜಿನಿಯರಿಂಗ್​ ಪದವಿ ಹೊಂದಿರಬೇಕು. ಟೆಕ್ನಿಶಿಯನ್​ (ಡಿಪ್ಲೊಮಾ) ಅಪ್ರೆಂಟಿಸ್​ ಹುದ್ದೆಗೆ ಅಭ್ಯರ್ಥಿಗಳು ಎಲೆಕ್ಟ್ರಿಕಲ್ ಆ್ಯಂಡ್​ ಎಲೆಕ್ಟ್ರಾನಿಕ್ಸ್​​ ಇಂಜಿನಿಯರಿಂಗ್​ ಮತ್ತು ಸಿವಿಲ್​ ಇಂಜಿನಿಯರಿಂಗ್​​ನಲ್ಲಿ ಡಿಪ್ಲೊಮಾ ಪೂರೈಸಿರಬೇಕು. ನಾನ್​ ಇಂಜಿನಿಯರಿಂಗ್​ ಅಪ್ರೆಂಟಿಸ್​​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಕಾಂ, ಬಿಬಿಎ, ಬಿಸಿಎ, ಬಿಎ, ಬಿಎಸ್ಸಿ ಪೂರ್ಣಗೊಳಿಸಿರಬೇಕು.

ವಯೋಮಿತಿ: 2019, 2020, 2021, 2022 ಮತ್ತು 2023ರಲ್ಲಿ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಕೆಗೆ ಅರ್ಹರು. ಈಗಾಗಲೇ ನಿಗಮದಲ್ಲಿ ಒಂದು ವರ್ಷ ಅಪ್ರೆಂಟಿಸ್​ ಆಗಿ ಸೇವೆ ಸಲ್ಲಿಸಿದವರು ಅರ್ಜಿ ಸಲ್ಲಿಕೆಗೆ ಅರ್ಹರಾಗಿರುವುದಿಲ್ಲ.

ವೇತನ:

  • ಪದವೀಧರ ಅಪ್ರೆಂಟಿಸ್​​ - 9,000
  • ಟೆಕ್ನಿಶಿಯನ್​​ (ಡಿಪ್ಲೊಮಾ) ಅಪ್ರೆಂಟಿಸ್ - 8,000
  • ನಾನ್​ ಇಂಜಿನಿಯರಿಂಗ್​ ಅಪ್ರೆಂಟಿಸ್​ - 9,000

ಆಯ್ಕೆ ಪ್ರಕ್ರಿಯೆ: ಮೆರಿಟ್​ ಮತ್ತು ದಾಖಲಾತಿ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಡಿಸೆಂಬರ್​ 30ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಜನವರಿ 19 ಕಡೇಯ ದಿನ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಶಾರ್ಟ್​ಲಿಸ್ಟ್​​ ಅನ್ನು ಜನವರಿಗೆ 24ರಂದು ಬಿಡುಗಡೆ ಮಾಡಲಾಗುವುದು.

ಈ ಕುರಿತ ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಇನ್ನಿತರ ಮಾಹಿತಿಗೆ ಅಭ್ಯರ್ಥಿಗಳು cescmysore.karnataka.gov.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ದಾವಣಗೆರೆ ಮಹಾನಗರ ಪಾಲಿಕೆಯಿಂದ 119 ಪೌರ ಕಾರ್ಮಿಕ ಹುದ್ದೆಗೆ ಅರ್ಜಿ ಆಹ್ವಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.