ETV Bharat / state

ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಬಿಜೆಪಿ ಬಡವರಿಗೆ ಮನೆ ಹಕ್ಕುಪತ್ರ ನೀಡುತ್ತಿದೆ: ಸಚಿವ ವಿ.ಸೋಮಣ್ಣ

author img

By

Published : Oct 5, 2021, 9:02 PM IST

ಜಿ+3 ಮನೆಗಳಿಗೆ ಇಂದು ಚಾಲನೆ ನೀಡುತ್ತಿದ್ದೇವೆ. 2200ಕ್ಕೂ ಹೆಚ್ಚು ಮೇಲ್ಪಟ್ಟು ಮನೆಗಳನ್ನು ಕಟ್ಟುತ್ತಿದ್ದು, ರಾಜ್ಯಾದ್ಯಂತ 3 ಲಕ್ಷದ 27 ಸಾವಿರ ಮನೆಗಳಿಗೆ ಈಗಾಗಲೇ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮಕ್ಕೆ ಹುಬ್ಬಳ್ಳಿ, ಬೆಂಗಳೂರಿನಲ್ಲಿ ಚಾಲನೆ ನೀಡಿದ್ದೇವೆ. ಬಡವರಿಗೆ ಬಿಜೆಪಿ ಪಕ್ಷ ಹಕ್ಕುಪತ್ರ ನೀಡುವ ಕೆಲಸ ಮಾಡುತ್ತಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.

ಮೈಸೂರು: ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ಬಡವರಿಗೆ ಬಿಜೆಪಿ ಪಕ್ಷ ಹಕ್ಕುಪತ್ರ ನೀಡುವ ಕೆಲಸ ಮಾಡುತ್ತಿದೆ ಎಂದು ಸಚಿವ ವಿ. ಸೋಮಣ್ಣ ಹೇಳಿದರು.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಗರಕ್ಕಿಂದು ಆಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿ+3 ಮನೆಗಳಿಗೆ ಇಂದು ಚಾಲನೆ ನೀಡುತ್ತಿದ್ದೇವೆ. 2200ಕ್ಕೂ ಹೆಚ್ಚು ಮೇಲ್ಪಟ್ಟು ಮನೆಗಳನ್ನು ಕಟ್ಟುತ್ತಿದ್ದು, ರಾಜ್ಯಾದ್ಯಂತ 3ಲಕ್ಷದ 27 ಸಾವಿರ ಮನೆಗಳಿಗೆ ಈಗಾಗಲೇ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮಕ್ಕೆ ಹುಬ್ಬಳ್ಳಿ, ಬೆಂಗಳೂರಿನಲ್ಲಿ ಚಾಲನೆ ನೀಡಿದ್ದೇವೆ. ಹಂತಹಂತವಾಗಿ ತಾಲೂಕು ಮಟ್ಟಕ್ಕೆ ವಿಸ್ತರಿಸಲಿದ್ದೇವೆ. ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ಬಡವರಿಗೆ ಬಿಜೆಪಿ ಪಕ್ಷ ಹಕ್ಕುಪತ್ರ ನೀಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಸಬ್ ರಿಜಿಸ್ಟ್ರಾರ್ ವ್ಯಾಲ್ಯೂವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ 1 ಸಾವಿರ ಹಾಗೂ ಇತರರಿಗೆ 2 ಸಾವಿರ ನಿಗದಿಪಡಿಸಲಾಗಿದ್ದು, ಅದಕ್ಕೆ ವ್ಯಾಲ್ಯೂಯೇಷನ್ ಮಾಡಲಾಗುವುದು. ಅದರ ಜೊತೆಗೆ 220 ರೂ. ಶುಲ್ಕ ಕಟ್ಟಿದರೆ ಕ್ರಯಪತ್ರ ಮಾಡಿ, ಹಕ್ಕನ್ನು ನೀಡಲು ಸರ್ಕಾರ ವಿನೂತನ ಯೋಜನೆ ರೂಪಿಸಿದ್ದು, ಇದರಿಂದ 40 ಲಕ್ಷಕ್ಕೂ ಹೆಚ್ಚು ಬಡವರಿಗೆ ಅನುಕೂಲವಾಗಲಿದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು.

ನೆರೆಯಿಂದ ಮನೆ ಕಳೆದುಕೊಂಡವರಿಗೆ ಬಿ.ಎಸ್.ಯಡಿಯೂರಪ್ಪ ಅವರು‌ ಮುಖ್ಯಮಂತ್ರಿಗಳಾಗಿದ್ದಾಗ 5 ಲಕ್ಷ ರೂ. ಘೋಷಿಸಿದ್ದು. ಈಗಾಗಲೇ 1 ಲಕ್ಷ ರೂ.‌ವಿತರಿಸಲಾಗಿದ್ದು, ಮನೆಗಳ ಫೌಂಡೇಶನ್ ಆಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಮುಖಾಂತರ ವರದಿ ತರಿಸಿಕೊಂಡು ನಮ್ಮ ಇಲಾಖೆಯಿಂದ 150 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೇವೆ. ಇದರ ಎಲ್ಲಾ ಮುತುವರ್ಜಿಯನ್ನು ಕಂದಾಯ ಇಲಾಖೆ ವಹಿಸಿಕೊಂಡಿದೆ ಎಂದು ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು.

ಮಕ್ಕಳ ಬಗ್ಗೆ ಪೋಷಕರು ಮುತುವರ್ಜಿವಹಿಸಬೇಕು: ಬೆಂಗಳೂರಿನಲ್ಲಿ ಡ್ರಗ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಡ್ರಗ್ಸ್ ದಂಧೆಗಳನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. 14 ರಿಂದ 30 ವರ್ಷದೊಳಗಿನ ಯುವಕರು ಡ್ರಗ್ಸ್ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ಇದನ್ನು ತೊಡೆದು ಹಾಕಲು ಸರ್ಕಾರ ಪ್ರಯತ್ನ ಪಡುತ್ತಿದೆ. ಇದರ ಜೊತೆಗೆ ಕುಟುಂಬದವರು ಮತ್ತು ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿವಹಿಸಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.