ETV Bharat / state

ಕಳಪೆ ಸ್ಯಾನಿಟೈಸರ್ ಮೇಲೆ ಹದ್ದಿನ ಕಣ್ಣಿಟ್ಟಿರುವ ಮೈಸೂರು ಪಾಲಿಕೆ ಅಧಿಕಾರಿಗಳು

author img

By

Published : Sep 11, 2020, 3:12 PM IST

ಕಳಪೆ ಮತ್ತು ನಕಲಿ ಸ್ಯಾನಿಟೈಸರ್​​ ತಯಾರಿಕೆಯಲ್ಲಿ ತೊಡಗಿರುವ ಕಂಪನಿಗಳ ಮೇಲೆ ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಹೆಚ್ಚಿನ ನಿಗಾ ಇರಿಸಿದ್ದಾರೆ.

SANITIZER
ಸ್ಯಾನಿಟೈಸರ್

ಮೈಸೂರು: ಕೋವಿಡ್ ಸಂದರ್ಭದಲ್ಲಿ ಸ್ಯಾನಿಟೈಸರ್​​ಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಅದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಕಂಪನಿಗಳು ಕಳಪೆ ಗುಣಮಟ್ಟದ ಸ್ಯಾನಿಟೈಸರ್​​ ತಯಾರಿಕೆಯಲ್ಲಿ ತೊಡಗಿವೆ. ಅಂತಹ ಕಂಪನಿಗಳ ಮೇಲೆ ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಹದ್ದಿನ ‌ಕಣ್ಣಿಟ್ಟಿದ್ದಾರೆ.

ಆರೋಗ್ಯ ಅಧಿಕಾರಿ ನಾಗರಾಜ್

ಐಎಸ್ಐ ಮಾರ್ಕ್ ಇಲ್ಲದ ಸ್ಯಾನಿಟೈಸರ್​ ಕಂಪನಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಸೀಜ್ ಮಾಡಲಾಗುತ್ತದೆ. ಶೇ.70ರಷ್ಟು ಈಥೆನಾಲ್ ಆಲ್ಕೋಹಾಲ್, ಗ್ಲಿಸರಿನ್ ಹೈಡ್ರೋಜನ್ ಪೆರಾಕ್ಸೈಡ್ ಇರುವ ಸ್ಯಾನಿಟೈಸರ್​​​ ಅನ್ನು ಬಳಸಬಹುದು. ಆದರೆ, ಕಳಪೆ ಸ್ಯಾನಿಟೈಸರ್ ಬಳಸುವುದರಿಂದ ಚರ್ಮ ರೋಗ ಬರುವ ಸಾಧ್ಯತೆ ಇದೆ. ಹೀಗಾಗಿ, ಐಎಸ್ಐ ಮಾರ್ಕ್ ಇರುವ ಸ್ಯಾನಿಟೈಸರ್​​​ ಬಳಸಬೇಕು ಎಂದು ಪಾಲಿಕೆ ಆರೋಗ್ಯ ಅಧಿಕಾರಿ ನಾಗರಾಜ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.