ETV Bharat / state

ಕಾವೇರಿ ನದಿ ಪ್ರವಾಹ ದಾಟಿ ಮಹಿಳೆಯ ಅಂತ್ಯಕ್ರಿಯೆ.. ವಿಡಿಯೋ

author img

By

Published : Aug 8, 2022, 1:46 PM IST

ಸ್ಮಶಾನಕ್ಕೆ ತೆರಳುವ ರಸ್ತೆ ಜಲಾವೃತ: ಗ್ರಾಮಸ್ಥರು ಜೀವದ ಹಂಗು ತೊರೆದು ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಮಹಿಳೆಯ ಮೃತದೇಹ ಹೊತ್ತು ಸಾಗಿದ ಮನಕುಲಕುವ ಘಟನೆ ಶ್ರೀರಂಗಪಟ್ಟಣದ ಮಹದೇಪುರ ಗ್ರಾಮದಲ್ಲಿ ನಡೆದಿದೆ.

ನದಿಯಲ್ಲಿ ಶವ ಹೊತ್ತು ಸಾಗಿದ ಗ್ರಾಮಸ್ಥರು
Villagers carrying dead bodies in the overflowing river

ಮಂಡ್ಯ: ಶ್ರೀರಂಗಪಟ್ಟಣದ ಮಹದೇಪುರದಲ್ಲಿ ಮನಕುಲಕುವ ಘಟನೆಯೊಂದು ನಡೆದಿದೆ. ಕಾವೇರಿ ಜಲಾಶಯದಿಂದ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್​ ನೀರು ಹೊರ ಬಿಟ್ಟಿರುವುದರಿಂದ ನದಿಯ ಪಕ್ಕದಲ್ಲೇ ಇದ್ದ ಸ್ಮಶಾನ ರಸ್ತೆ ಜಲಾವೃತವಾಗಿದ್ದು, ಗ್ರಾಮಸ್ಥರು ಪ್ರವಾಹದಲ್ಲೇ ಮೃತದೇಹ ಹೊತ್ತೊದ್ದಿದ್ದಾರೆ.

ನೀರಿನಲ್ಲೇ ಶವ ಹೊತ್ತು ಸಾಗಿದ ಗ್ರಾಮಸ್ಥರು: ನಿನ್ನೆ ಸಂಜೆ ಮಹದೇಪುರ ಗ್ರಾಮದ ಸುಮಲೋಚನ ಎಂಬ ಮಹಿಳೆ ಮೃತಪಟ್ಟಿದ್ದರು. ಏಕಾಏಕಿ ಕಾವೇರಿ ನದಿಯಲ್ಲಿ ಪ್ರವಾಹ ಬಂದು ಸ್ಮಶಾನದ ರಸ್ತೆ ಮುಳುಗಡೆ ಆಗಿರುವ ಕಾರಣ ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸಲು ಬೇರೆ ದಾರಿಯಿಲ್ಲದೆ ಪ್ರವಾಹದ ನೀರಿನಲ್ಲಿ ಹೊತ್ತೊಯ್ಯಲಾಗಿದೆ.

ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಶವ ಹೊತ್ತು ಸಾಗಿದ ಗ್ರಾಮಸ್ಥರು

ಪ್ರವಾಹದ ಕಾರಣದಿಂದ ಕೆಲ ಕುಟುಂಬ ಸದಸ್ಯರು ಮಾತ್ರ ಅಂತ್ಯಕ್ರಿಯೆ ಮುಗಿಸಿ ವಾಪಸ್​ ಬಂದಿದ್ದಾರೆ. ಜೀವದ ಹಂಗು ತೊರೆದು ಗ್ರಾಮಸ್ಥರು ಅಂತ್ಯಕ್ರಿಯೆ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನೊಂದೆಡೆ, ಸ್ಮಶಾನ ರಸ್ತೆಗೆ ಸೇತುವೆ‌ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಸ್ಮಶಾನಕ್ಕೆ ತೆರಳಲು ರಸ್ತೆಯಿಲ್ಲ, ನೀರಿನಲ್ಲೇ ಶವ ಹೊತ್ತು ಸಾಗಿದ ಗ್ರಾಮಸ್ಥರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.