ETV Bharat / state

ಪ್ರಖ್ಯಾತ ಆರ್ಗ್ಯಾನಿಕ್ ಸಂಸ್ಥೆಯಿಂದ ಸಾವಯವ ಕೃಷಿ ತರಬೇತಿ ಶಿಬಿರ

author img

By

Published : Feb 2, 2021, 2:03 PM IST

ಆರ್ಗ್ಯಾನಿಕ್ ಮಂಡ್ಯ ಸಂಸ್ಥೆಯವರು ಪ್ರಗತಿಪರ ರೈತರಿಗಾಗಿ ಸಾವಯವ ಕೃಷಿ ತರಬೇತಿ ನೀಡುತ್ತಿದ್ದಾರೆ. ಈ ಹಿನ್ನೆಲೆ ಈ ತರಬೇತಿಗೆ ರಾಜ್ಯ ಮತ್ತು ಹೊರ ರಾಜ್ಯದಿಂದ ನೂರಾರು ಜನರು ಬರುತ್ತಿದ್ದಾರೆ.

Training Camp on Prakyata Organic Farming by Organic Organization
ಪ್ರಖ್ಯಾತ ಆರ್ಗ್ಯಾನಿಕ್ ಸಂಸ್ಥೆಯಿಂದ ಸಾವಯವ ಕೃಷಿ ಬಗ್ಗೆ ತರಬೇತಿ ಶಿಬಿರ

ಮಂಡ್ಯ: ಜಿಲ್ಲೆಯ ಮದ್ದೂರಿನ ಗಡಿ ಭಾಗ ಮುತ್ತೆಗೆರೆ ಸಮೀಪವಿರುವ ಪ್ರಖ್ಯಾತ ಆರ್ಗ್ಯಾನಿಕ್ ಸಂಸ್ಥೆ, ಮಾರಾಟ ಮಳಿಗೆಯ ಆವರಣದಲ್ಲಿ ತಿಂಗಳಿಗೆ ಒಂದು ದಿನ ಸಾವಯವ ಕೃಷಿ ತರಬೇತಿ ನೀಡುತ್ತಿದೆ. ಸಾವಯವ ಕೃಷಿ ಬಗ್ಗೆ ಆಸಕ್ತಿಯುಳ್ಳವರಿಗೆ ಉಚಿತವಾಗಿ ತರಬೇತಿ ನೀಡುವ ಕೆಲಸ ಈ ಆರ್ಗ್ಯಾನಿಕ್ ಸಂಸ್ಥೆ ಮಾಡುತ್ತಿದೆ. ಸಾವಯವ ಕೃಷಿ ಬಗ್ಗೆ ತಿಳಿಯಲು ನೂರಾರು ನಗರವಾಸಿಗಳು ಆಗಮಿಸುತ್ತಿದ್ದು, ಈ ತರಬೇತಿಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರಖ್ಯಾತ ಆರ್ಗ್ಯಾನಿಕ್ ಸಂಸ್ಥೆಯಿಂದ ಸಾವಯವ ಕೃಷಿ ಬಗ್ಗೆ ತರಬೇತಿ ಶಿಬಿರ

ಇಲ್ಲಿನ ಪ್ರಖ್ಯಾತ ಆರ್ಗ್ಯಾನಿಕ್ ಮಂಡ್ಯ ಸಂಸ್ಥೆಯವರು ಪ್ರಗತಿಪರ ರೈತರಿಗಾಗಿ ಸಾವಯವ ಕೃಷಿ ತರಬೇತಿ ನೀಡುತ್ತಿದ್ದಾರೆ. ಈ ಹಿನ್ನೆಲೆ ಈ ತರಬೇತಿಗೆ ರಾಜ್ಯ ಮತ್ತು ಹೊರ ರಾಜ್ಯದಿಂದ ನೂರಾರು ಜನರು ಬರುತ್ತಿದ್ದಾರೆ. ಒಂದು ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮೂಲಕ ಬೇಸಾಯ ಮಾಡುತ್ತಾ ತಿಂಗಳಿಗೆ ಒಂದು ಲಕ್ಷ ಆದಾಯ ಗಳಿಸುವ ಬಗ್ಗೆ ಸವಿಸ್ತಾರವಾಗಿ ತಿಳಿಸುತ್ತಿದ್ದಾರೆ.

ವಿದೇಶದಲ್ಲಿ ಕೈ ತುಂಬಾ ಸಂಬಳವಿದ್ದ ಐ.ಟಿ ಕಂಪನಿ ತೊರೆದು ಸಾವಯುವ ಕೃಷಿಯಲ್ಲಿ ತೊಡಗಿಸಿಕೊಂಡು ಇದರ ಮೂಲಕವೇ ರೈತರ ಸಹಯೋಗದೊಂದಿಗೆ ಮಂಡ್ಯ ಆರ್ಗ್ಯಾನಿಕ್ ಸಂಸ್ಥೆ ಕಟ್ಟಿದ್ದೇನೆ. ಕೃಷಿ ಕ್ಷೇತ್ರದ ಸಾಧನೆಗಾಗಿ ಇತ್ತೀಚೆಗೆ ಕೇಂದ್ರ ಸರ್ಕಾರವು ನಮ್ಮ ಸಂಸ್ಥೆಗೆ ‘ಸ್ಟಾಟರ್ಪ್ ಅವಾರ್ಡ್’ ನೀಡಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಆರ್ಗ್ಯಾನಿಕ್ ಸಂಸ್ಥೆಯ ಸಂಸ್ಥಾಪಕ ಮಧು ಚಂದನ್.

ಓದಿ : ಆದಾಯ ಮೀರಿದ ಆಸ್ತಿ ಸಂಪಾದನೆ: 7 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.