ಸ್ವಚ್ಛತೆಯಲ್ಲಿ ಗಮನ ಸೆಳೆದ ನಾಗಮಂಗಲ ಪುರಸಭೆ: ರಾಜ್ಯಕ್ಕೇ 5ನೇ ಸ್ಥಾನ

author img

By

Published : Aug 27, 2020, 8:23 PM IST

Nagamangala

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರಾಜ್ಯ ಮಟ್ಟದಲ್ಲಿ 5ನೇ ಸ್ಥಾನ, ರಾಷ್ಟ್ರಮಟ್ಟದ ದಕ್ಷಿಣ ಭಾಗ ರಾಜ್ಯಗಳ ಫಲಿತಾಂಶದಲ್ಲಿ 6ನೇ ಸ್ಥಾನವನ್ನು ತನ್ನದಾಗಿಸಿಗೊಂಡಿದೆ.

ಮಂಡ್ಯ: ಕೇಂದ್ರ ಸರ್ಕಾರದ 2020ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ಸ್ಪರ್ಧೆಯಲ್ಲಿ ನಾಗಮಂಗಲ ಪುರಸಭೆ ಈ ಬಾರಿ ಉತ್ತಮ ಸಾಧನೆ ಮಾಡಿದೆ. ಪಟ್ಟಣದ ಸ್ವಚ್ಚತಾ ಕಾರ್ಯದಲ್ಲಿ ರಾಜ್ಯದ ಗಮನ ಸೆಳೆದಿದೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರಾಜ್ಯ ಮಟ್ಟದಲ್ಲಿ 5ನೇ ಸ್ಥಾನ, ರಾಷ್ಟ್ರಮಟ್ಟದ ದಕ್ಷಿಣ ಭಾಗ ರಾಜ್ಯಗಳ ಫಲಿತಾಂಶದಲ್ಲಿ 6ನೇ ಸ್ಥಾನವನ್ನು ತನ್ನದಾಗಿಸಿಗೊಂಡಿದೆ.

ನಾಗಮಂಗಲ ಪುರಸಭೆ ಬಗ್ಗೆ ಮಾತನಾಡಿದ ಮುಖ್ಯಾಧಿಕಾರಿ ಕೃಷ್ಣಪ್ರಸಾದ್

ಪುರಸಭೆ ವ್ಯಾಪ್ತಿಯ 23 ವಾರ್ಡ್‍ಗಳಲ್ಲಿಯೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವ ಜೊತೆಗೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಿಸಾಡದಂತೆ ಪ್ರತಿನಿತ್ಯ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಕಳೆದ ಸಾಲಿನಲ್ಲಿ ಸ್ವಚ್ಛ ಸರ್ವೇಕ್ಷಣ್ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ 46ನೇ ಸ್ಥಾನ ಹಾಗೂ ರಾಷ್ಟ್ರಮಟ್ಟದ ದಕ್ಷಿಣ ಭಾಗಗಳ ರಾಜ್ಯಗಳ ಪೈಕಿ 217ನೇ ಸ್ಥಾನ ಲಭಿಸಿತ್ತು. ಈ ಬಾರಿ ಉತ್ತಮ ಫಲಿತಾಂಶದ ಗುರಿಯೊಂದಿಗೆ ಅಧಿಕಾರಿಗಳ ಇಚ್ಚಾಶಕ್ತಿ ಸಾಧನೆಗೆ ದಾರಿಯಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ಹಾನಿಯಾಗದಂತೆ ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‍ಗಳಲ್ಲಿಯೂ ಉತ್ತಮ ಪರಿಸರ ಸೃಷ್ಟಿಸಬೇಕೆಂಬುದೇ ನಮ್ಮ ಉದ್ದೇಶವಾಗಿದೆ. ಇದಕ್ಕೆ ಪೂರಕವಾಗಿ ಸ್ವಚ್ಛ ಸರ್ವೇಕ್ಷಣ್ ಸೇರಿದಂತೆ ಸರ್ಕಾರಗಳ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸಾರ್ವಜನಿಕರು ಪುರಸಭೆಯೊಂದಿಗೆ ಕೈಜೋಡಿಸಿದರೆ ಮುಂದಿನ ಬಾರಿ ನಡೆಯುವ ಸ್ವಚ್ಛ ಸರ್ವೇಕ್ಷಣ್ ಸ್ಪರ್ಧೆಯಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ ಎಂಬ ವಿಶ್ವಾಸವಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.