ETV Bharat / state

ಧಮ್, ತಾಕತ್ತು ಇದ್ರೆ ಯಾರು ರಾಜಧನ ವಂಚಿಸಿದ್ದಾರೆ ಅನ್ನೋದನ್ನು ಹೇಳಬೇಕು: ಶಾಸಕ ಪುಟ್ಟರಾಜು

author img

By

Published : Jan 26, 2023, 2:32 PM IST

ರಾಜಧನ ಕುರಿತು ಸಂಸದೆ ಸುಮಲತಾ ನೀಡಿದ್ದ ಹೇಳಿಕೆಯ ಕುರಿತು ಶಾಸಕ ಪುಟ್ಟರಾಜು ಪ್ರತಿಕ್ರಿಯಿಸಿದ್ದಾರೆ.

MLA Putraju
ಶಾಸಕ ಪುಟ್ಟರಾಜು ಸಂಸದೆ ಸುಮಲತಾ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು.

ಶಾಸಕ ಪುಟ್ಟರಾಜು ಸಂಸದೆ ಸುಮಲತಾ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು.

ಮಂಡ್ಯ: ಧಮ್-ತಾಕತ್ತು ಇದ್ರೆ ರಾಜಧನ ಯಾರು ವಂಚಿಸಿದ್ದಾರೆ ಎನ್ನುವುದನ್ನು ಹೇಳಬೇಕು ಎಂದು ಸಂಸದೆ ಸುಮಲತಾ ವಿರುದ್ಧ ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್ ಪುಟ್ಟರಾಜು ವಾಗ್ದಾಳಿ ನಡೆಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಗಣಿಗಾರಿಕೆಯಲ್ಲಿ ಸರ್ಕಾರಕ್ಕೆ ವಂಚನೆ ಮಾಡಲಾಗಿದೆ ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರ ಮೇಲೆ ಆರೋಪ ಮಾಡಿದ್ದ ಸುಮಲತಾ ಮಾತಿಗೆ ಖಾರವಾಗಿ ಶಾಸಕಪ್ರತಿಕ್ರಿಯೆ ನೀಡಿದ್ದಾರೆ.

ಜನ ಮೆಚ್ಚಿಸಲು ಮಾತನಾಡುವ ಮಾತನ್ನು ಇವರಿಂದ ಕಲಿಯುವ ಅವಶ್ಯಕತೆ ಇಲ್ಲ. ನಾನು 40 ವರ್ಷದಿಂದ ಒಂದು ಕಪ್ಪು ಚುಕ್ಕಿ ಇರದ ಹಾಗೆ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನಾವು ಕೆಲಸದಲ್ಲಿ, ಅಭಿವೃದ್ಧಿಯಲ್ಲಿ ಮೋಡಿ ಮಾಡುತ್ತೇವಾ ಮಾತಾಲ್ಲಿ ಮೋಡಿ ಮಾಡುತ್ತೇವಾ ಎಂದು ಜನರಿಗೆ ಗೊತ್ತಿದೆ.

ಗಣಿಗಾರಿಕೆಯನ್ನು ಸುಮಲತಾ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರಿಗೆ ಅದೊಂದೇ ಅಸ್ತ್ರ ಇರೋದು. ಮೈಸೂರು-ಬೆಂಗಳೂರು ರಸ್ತೆ ವಿಚಾರದಲ್ಲಿ ಅವರು ಕೈ ಹಾಕಿದ್ದಾರೆ, ಅದರಲ್ಲಿ ಏನು ಆಗಿದೆ ಎನ್ನುವುದು ಎಲ್ಲರಿಗೂ ಗೊತ್ತು. ನಾವು ಅವರನ್ನು ಟಾರ್ಗೆಟ್ ಮಾಡುತ್ತಿಲ್ಲ. ಜನರೇ ಅವರನ್ನು ಟಾರ್ಗೆಟ್ ಮಾಡುತ್ತಾರೆ. ಚುನಾವಣೆ ಬರಲಿ ಯಾರು ಯಾರನ್ನು ಟಾರ್ಗೆಟ್‌ ಮಾಡುತ್ತಾರೆ ಎಂದು ಗೊತ್ತಾಗುತ್ತದೆ ಎಂದರು.

ಇದನ್ನೂ ಓದಿ: ರಾಜಕೀಯ ಮಾಡುವುದಿದ್ರೆ ಮಂಡ್ಯದಲ್ಲೆ, ಮಂಡ್ಯ ಬಿಡುವ ಪ್ರಶ್ನೆಯೇ ಇಲ್ಲ: ಸುಮಲತಾ ಅಂಬರೀಶ್

ಸಂಸದೆ ಸುಮಲತಾ ಹೇಳಿಕೆ ಏನು?: ಮೇಲುಕೋಟೆಯ ಮಾಡರಹಳ್ಳಿಯಯಲ್ಲಿ ಸರ್ಕಾರಿ ಶಾಲೆಯ ಕೊಠಡಿ ನಿರ್ಮಾಣಕ್ಕೆ ಹಂಚಿಕೆಯಾಗಿದ್ದ 11 ಲಕ್ಷ ಅನುದಾನ ಕಾಮಗಾರಿಗೆ ಚಾಲನೆ ನೀಡಿದ್ದರು. ಈ ವೇಳೆ ಶಾಸಕ ಪುಟ್ಟ ರಾಜು ಅವರ ಹೆಸರನ್ನು ಪ್ರಸ್ತಾಪಿಸದೆ ಪರೋಕ್ಷವಾಗಿ ಹೇಳಿಕೆ ನೀಡಿದ್ದರು. ಅದೇನೆಂದರೆ ಕ್ಷೇತ್ರದ ಜನ ಗಣಿಗಾರಿಕೆಯಿಂದ ಬರುತ್ತಿದ್ದ ರಾಜಧನ ವಂಚಿಸುವವರ ವಿರುದ್ಧ ಜಾಗೃತರಾಗಿ ಮುಂದಿನ ಚುನಾವಣೆ ಎದುರಿಸಿ ಎಂದಿದ್ದರು. ಇದೀಗ ಆ ಕುರಿತು ಶಾಸಕರು ಖಂಡಿಸಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಪಕ್ಷ ಸೇರ್ಪಡೆ ಬಗ್ಗೆ ನಾನು ಯಾವುದೇ ನಿರ್ಧಾರ ಮಾಡಿಲ್ಲ: ಸಂಸದೆ ಸುಮಲತಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.