ETV Bharat / state

ವಿವಾಹೇತರ ಸಂಬಂಧ ಶಂಕೆ: ಶ್ರೀರಂಗಪಟ್ಟಣದಲ್ಲಿ ಅಡುಗೆ ಭಟ್ಟನ ಬರ್ಬರ ಕೊಲೆ

author img

By

Published : Dec 24, 2019, 7:31 AM IST

ವಿವಾಹೇತರ ಸಂಬಂಧದ ಶಂಕೆ ಹಿನ್ನಲೆ ಮನೆಗೆ ನುಗ್ಗಿದ್ದ ಮೂವರು ದುಷ್ಕರ್ಮಿಗಳು ಅಡುಗೆ ಭಟ್ಟನನ್ನು ಕೊಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ‌ ಮೊಗರಳ್ಳಿ ಮಂಟಿ ಗ್ರಾಮದಲ್ಲಿ ನಡೆದಿದೆ.

crime
crime

ಮಂಡ್ಯ: ವಿವಾಹೇತರ ಸಂಬಂಧದ ಶಂಕೆ ಹಿನ್ನಲೆ ಮನೆಗೆ ನುಗ್ಗಿದ್ದ ಮೂವರು ದುಷ್ಕರ್ಮಿಗಳು ಅಡುಗೆ ಭಟ್ಟನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ‌ ಮೊಗರಳ್ಳಿ ಮಂಟಿ ಗ್ರಾಮದಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ಹುರ ಗ್ರಾಮದ ಉದಯ್ (39) ಕೊಲೆಗೀಡಾಗಿರುವ ಅಡುಗೆ ಭಟ್ಟ. ಚಾಕು ಇರಿತಕ್ಕೊಳಗಾಗಿದ್ದ ಉದಯ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದ್ರೆ ​ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವಿಗೀಡಾಗಿದ್ದಾನೆ.

ಅಡುಗೆ ಭಟ್ಟನ ಕೆಲಸ ಮಾಡಿಕೊಂಡು ವಾಸವಿದ್ದ ಉದಯ್ ಮನೆಗೆ ಏಕಾಏಕಿ ಮೂವರು ದುಷ್ಕರ್ಮಿಗಳು ನುಗ್ಗಿ, ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಕೆ.ಆರ್.ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Intro:ಮಂಡ್ಯ: ಅನೈತಿಕ ಸಂಶಯಾಸ್ಪದ ಹಿನ್ನಲೆ ಮನೆಗೆ ನುಗ್ಗಿ ಮೂವರು ದುಷ್ಕರ್ಮಿಗಳು ಅಡುಗೆ ಭಟ್ಟನನ್ನು ಕೊಲೆ ಮಾಡಿದ ಶ್ರೀರಂಗಪಟ್ಟಣ ತಾಲೂಕಿನ‌ ಮೊಗರಳ್ಳಿ ಮಂಟಿ ಗ್ರಾಮದಲ್ಲಿ ರಾತ್ರಿ ನಡೆದಿದೆ.
ನಂಜನಗೂಡು ತಾಲೂಕಿನ ಹುರ ಗ್ರಾಮದ ಉದಯ್ (39) ಮೃತ ವ್ಯಕ್ತಿಯಾಗಿದ್ದು, ಚಾಕು ಇರಿತಕ್ಕೆ ಒಳಗಾಗಿದ್ದ ಉದಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ.
ಅಡುಗೆಭಟ್ಟ ಕೆಲಸ ಮಾಡಿಕೊಂಡು ವಾಸವಿದ್ದ ಉದಯ್ ಮನೆಗೆ ಏಕಾಏಕಿ ಮೂವರು ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.
ಕೆ.ಆರ್.ಎಸ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಲಾಗಿದೆ.

( ಇನ್ನೂ ಪೋಟೋ ಸಿಕ್ಕಿಲ್ಲ ಸರ್. ಬಂದ ತಕ್ಷಣ ಕಳುಹಿಸಲಾಗುವುದು ಸರ್)Body:Yathisha babu k hConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.