ETV Bharat / state

ಶಿಕ್ಷಣ ಸಚಿವರ ಎಡಬಿಡಂಗಿ ನಿರ್ಧಾರಗಳೇ ಈ ಕ್ಷೇತ್ರದ ಅವ್ಯವಸ್ಥೆಗೆ ಕಾರಣ: ಎಲ್.ಆರ್. ಶಿವರಾಮೇಗೌಡ !

author img

By

Published : Jun 26, 2021, 3:50 PM IST

Updated : Jun 26, 2021, 4:02 PM IST

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ನನ್ನ ಸ್ನೇಹಿತ. ಆದರೆ ಅವರಿಗೆ ಈ ಖಾತೆ ಸರಿ ಹೊಂದುವುದಿಲ್ಲ. ಅವರ ಎಡಬಿಡಂಗಿ ನಿರ್ಧಾರಗಳೇ ಇಂದಿನ ಶಿಕ್ಷಣ ಕ್ಷೇತ್ರದ ಅವ್ಯವಸ್ಥೆಗೆ ಕಾರಣ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

l r shivaramegowda
ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ

ಮಂಡ್ಯ: ಶಿಕ್ಷಣ ಸಚಿವರಾಗಿ ಸುರೇಶ್ ಕುಮಾರ್ ಇರೋವರೆಗೂ ಶಾಲೆಗಳು ಉದ್ಧಾರವಾಗಲ್ಲ. ಸುರೇಶ್ ಕುಮಾರ್ ಅವರ ಎಡಬಿಡಂಗಿ ನಿರ್ಧಾರಗಳೇ ಇಂದಿನ ಶಿಕ್ಷಣ ಕ್ಷೇತ್ರದ ಅವ್ಯವಸ್ಥೆಗೆ ಕಾರಣ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ

ನಾಗಮಂಗಲದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ನನ್ನ ಸ್ನೇಹಿತ. ಆದರೆ, ಅವರಿಗೆ ಈ ಖಾತೆ ಸರಿ ಹೊಂದುವುದಿಲ್ಲ. ಸರ್ಕಾರ ಖಾಸಗಿ ಶಾಲೆಗಳಿಗೆ ಯಾವುದೇ ಸವಲತ್ತು ನೀಡದೇ ಗದಾ ಪ್ರಹಾರ ಮಾಡುವುದು ಸರಿಯಲ್ಲ. ಟ್ಯಾಕ್ಸ್ ವಿನಾಯಿತಿ, ಇನ್ಸುರೆನ್ಸ್ ವಿನಾಯಿತಿ ನೀಡಿ ನಂತರ ನಮ್ಮ ಮೇಲೆ ಸರ್ಕಾರ ಅಧಿಕಾರ ಪ್ರಯೋಗಿಸಲಿ ಎಂದು ಕಿಡಿ ಕಾರಿದರು.

ಕೆಲವು ಸಚಿವರ ಸರ್ಕಾರದಂತೆ ಕಾಣುತ್ತಿದೆ:

ಇನ್ನು ಶಾಲೆ ಪುನಾರಂಭ ವಿಚಾರವಾಗಿ ಮಾತನಾಡಿ, ಶಾಲೆಗಳ ವ್ಯವಸ್ಥೆ ಎಂದರೆ ಸೌಹಾರ್ದಯುತ ಆಗಿರಬೇಕು. ಆದರೆ, ಸರ್ಕಾರ ಆ ನಿಟ್ಟಿನಲ್ಲಿ ನಡೆಸಿಕೊಳ್ಳುತ್ತಿಲ್ಲ. ಸರ್ಕಾರ ಕೊರೊನಾ ಹಾಗೂ ಶೈಕ್ಷಣಿಕ ತೀರ್ಮಾನಗಳೆರಡರಲ್ಲೂ ಸಂಪೂರ್ಣವಾಗಿ ವಿಫಲವಾಗಿದೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿರೊದ್ರಿಂದ ಈ ರೀತಿ ಆಗ್ತಿದೆ ಅನಿಸುತ್ತದೆ. ಕೆಲವು ಸಚಿವರ ಸರ್ಕಾರದಂತೆ ಕಾಣುತ್ತಿದೆ. ಇನ್ನು ಕೆಲವು ಸಚಿವರು ಎಲ್ಲಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.

'ನಿಮ್ಮ ಜೀವ ನಿಮ್ಮ ಕೈಯಲ್ಲಿ' ಎಂಬಂತಿದೆ:

ಕೊರೊನಾ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ಜನರ ಹಿತ ಕಾಪಾಡುವುದರಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮೂರನೇ ಅಲೆಯಲ್ಲಿಯೂ ನಿಮ್ಮ ಜೀವ ನಿಮ್ಮ ಕೈಯಲ್ಲಿ ಎಂಬಂತೆ ಜನರು ಜಾಗೃತರಾಗಬೇಕಿದೆ. ಸರ್ಕಾರವನ್ನು ನಂಬುವಂತಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

ಆಡಳಿತ ನಡೆಸುವ ರಾಜ್ಯದ ಪ್ರತಿನಿಧಿಗಳು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯದ ಜನತೆಯ ಹಿತವನ್ನು ಯಾವ ಮಟ್ಟದಲ್ಲಿ ನಿರ್ವಹಣೆ ಮಾಡುತ್ತಾರೆ ಎಂಬುದನ್ನು, ಮುಂದಿನ ಜನಾದೇಶದಲ್ಲಿ, ಜನತಾ ನ್ಯಾಯಾಲಯದಲ್ಲಿ ತೀರ್ಪು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ರೈತರಿಗೆ ಪರಿಹಾರ ನೀಡಿದ ನಂತರ ನಿವೇಶನ ಹಂಚಿಕೆ : ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್

ಇನ್ನೂ, ಮಂಡ್ಯದ ಸಕ್ಕರೆ ಕಾರ್ಖಾನೆ ಖಾಸಗೀಕರಣ ಮಾಡಬಾರದು ಎಂದು ಈಗಾಗಲೇ ಒತ್ತಾಯ ಮಾಡಲಾಗಿದೆ. ಹಾಗೂ ಮಂಡ್ಯ ಹಾಲು ಒಕ್ಕೂಟದ ಪ್ರಕರಣವನ್ನು ದೊಡ್ಡ ಮಟ್ಟದಲ್ಲಿ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Last Updated : Jun 26, 2021, 4:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.