ETV Bharat / state

ತಮಿಳುನಾಡಿಗೆ ನೀರು ನಿಲ್ಲಿಸಲು ಸಂಜೆಯೊಳಗೆ ಸರ್ಕಾರದಿಂದ ತೀರ್ಮಾನ: ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ

author img

By

Published : Aug 21, 2023, 5:42 PM IST

ಸರ್ಕಾರ ಸುಪ್ರೀಂ ಕೋರ್ಟ್​ ಆದೇಶಕ್ಕೆ ಬದ್ದವಾಗಿದ್ದು, ಅದಕ್ಕನುಗುಣವಾಗಿ ಸಂಜೆಯೊಳಗೆ ತಮಿಳುನಾಡಿಗೆ ನೀರು ನಿಲ್ಲಿಸಲಿದೆ ಎಂದು ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಹೇಳಿದ್ದಾರೆ.

ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ
ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ

ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಹೇಳಿಕೆ

ಮಂಡ್ಯ : ಇಂದು ಸಂಜೆಯೊಳಗೆ ತಮಿಳುನಾಡಿಗೆ ಹರಿಬಿಡುತ್ತಿರುವ ಕಾವೇರಿ ನೀರು ನಿಲ್ಲಿಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ತೀರ್ಮಾನ ತೆಗೆದುಕೊಂಡಿದೆ ಎಂದು ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ತಿಳಿಸಿದರು. ನಾವು ಕಳೆದೊಂದು ವಾರದಿಂದ CWC ನೀಡಿದ್ದ ಸೂಚನೆ ಮೇರೆಗೆ ಸುಮಾರು 12 ಸಾವಿರ ಟಿಎಂಸಿ ನೀರು ಬಿಟ್ಟಿದ್ದೇವೆ. ಇನ್ನೊಂದೆಡೆ, ಸುಪ್ರೀಂ ಕೋರ್ಟ್​ ಮುಂದೆ ತಮಿಳುನಾಡು ದೂರಿನ ಅರ್ಜಿ ಬಾಕಿಯಿದ್ದು, ಕೋರ್ಟ್​ ಯಾವ ಸೂಚನೆ ಕೊಡುತ್ತದೆ ಎಂಬುದನ್ನು ಕಾದು ನೋಡುತ್ತಿದ್ದೇವೆ. ಕೋರ್ಟ್​ ಕೊಡುವ ಆದೇಶಕ್ಕೆ ನಾವು ಬದ್ದ. ಅದಕ್ಕನುಗುಣವಾಗಿ ಇಂದು ಸಂಜೆಯೊಳಗೆ ತಮಿಳುನಾಡಿಗೆ ನೀರು ನಿಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ಅವರು ತಿಳಿಸಿದರು.

ಈ ವರ್ಷ ಮಳೆ ಕೊರತೆಯಿಂದ ನೀರಿನ ಸಮಸ್ಯೆ ಉಂಟಾಗಿದೆ‌. ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪಿಗೆ ಅನುಗುಣವಾಗಿ ಜೂನ್​ನಲ್ಲಿ 10 ಟಿಎಂಸಿ, ಜುಲೈನಲ್ಲಿ 34 ಟಿಎಂಸಿ, ಅಗಸ್ಟ್‌ನಲ್ಲಿ 50 ಟಿಎಂಸಿ ನೀರು ಕೊಡಲು ಒತ್ತಡವಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದೇವೆ. ನೀರು ಕೊಡುವ ಬಗ್ಗೆ ಹಿಂದಿನಿಂದಲೂ ತೀರ್ಮಾನವಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಹೆಚ್​.ಡಿ.ಕುಮಾರಸ್ವಾಮಿ, ದೇವೇಗೌಡರು, ಸಿದ್ದರಾಮಯ್ಯ ಸಿಎಂ ಆಗಿನಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ.

ಇದನ್ನೂ ಓದಿ : ಕಾವೇರಿ ನೀರು ಹಂಚಿಕೆ ವಿವಾದ: ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಸಂಪುಟ ಸಭೆ ತೀರ್ಮಾನ

ಈಗಿರುವ ಪರಿಸ್ಥಿತಿಯಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಸ್ವಲ್ಪ ನೀರು ಕೊಟ್ಟಿದ್ದೇವೆ. ಆದರೂ ತಮಿಳುನಾಡು ಸರ್ಕಾರ ಕೇಂದ್ರ ಹಾಗು CWC ಮುಂದೆ ಹೋಗಿದ್ದು, ನಾವು ಸಂಕಷ್ಟದಲ್ಲಿದ್ದೇವೆ. ನಮಗೆ ನೀರು ಕೊಡಿ ಎಂದು ಒತ್ತಡ ಹೇರಿದ್ದಾರೆ. ಹೀಗಾಗಿ ಕಮಿಟಿ ತೀರ್ಮಾನದಲ್ಲಿ CWC ಸೂಚನೆಗೆ ಅನುಗುಣವಾಗಿ 10-12 ಟಿಎಂಸಿ ನೀರು ಬಿಡಲಾಗಿದೆ. ನಮ್ಮ ಸರ್ಕಾರ ನೀರು ಬಿಟ್ಟಿರುವುದು ಸತ್ಯ. ಇದರ ಜೊತೆಗೆ ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದಾರೆ. ಇವತ್ತು ಈ ಅರ್ಜಿ ವಿಚಾರಣೆ ಹಂತದಲ್ಲಿದೆ. CWC ತೀರ್ಮಾನವನ್ನು ಅನುಷ್ಠಾನಗೊಳಿಸಿಲ್ಲವಾದರೆ ಸುಪ್ರೀಂ ಕೋರ್ಟ್ ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಲ್ಲ ಎಂದು ಹೇಳಿದರು.

ಬಿಜೆಪಿಯವರು ಹೋರಾಟವನ್ನು ಲೋಕಸಭೆ ಚುನಾವಣೆಗಾಗಿ ಮಾಡುತ್ತಿದ್ದಾರೆ. ಕಳೆದ ಮೂರು ತಿಂಗಳ ಹಿಂದೆ ನಿಮ್ಮದೇ ಸರ್ಕಾರ ಇತ್ತು. ಕೇಂದ್ರದಲ್ಲೂ ನಿಮ್ಮದೇ ಸರ್ಕಾರವಿದೆ. ಅಲ್ಲದೇ ರಾಜ್ಯದಿಂದ 27 ಜನ ಸಂಸದರು ಬಿಪಿಜೆಯವರೇ ಇದ್ದು, ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ನಾವು ನೀರನ್ನು ಕೊಡುವುದಕ್ಕೆ ಆಗುವುದಿಲ್ಲ ಎಂದು ಕೇಂದ್ರದ ಮೇಲೆ ಒತ್ತಡ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ : ಕಾವೇರಿ ನದಿ ನೀರು ಹಂಚಿಕೆ ವಿವಾದ: ಹೊಸ ಪೀಠ ರಚನೆಗೆ ಸುಪ್ರೀಂಕೋರ್ಟ್​ ಒಪ್ಪಿಗೆ, ಕರ್ನಾಟಕದಿಂದ ಇಂದೇ ಮೇಲ್ಮನವಿ ಸಲ್ಲಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.