ETV Bharat / state

ಕೈ ತೊರೆದು ಜೆಡಿಎಸ್​​ ಸೇರಲಿರುವ ಶಿವರಾಮೇಗೌಡ ಪುತ್ರ ಚೇತನ್

author img

By

Published : Sep 4, 2021, 3:59 PM IST

ಶಿವರಾಮೇಗೌಡ ಹಾಗೂ ಅವರ ಮಗ ಬೇರೆ ಬೇರೆ ಪಕ್ಷ ಎಂಬ ಮಾತುಗಳು ಹಲವು ಬಾರಿ ಕೇಳಿ ಬಂದಿದ್ದವು. ಅಪ್ಪ ಜೆಡಿಎಸ್​, ಮಗ ಕಾಂಗ್ರೆಸ್​ ಎಂಬ ಮಾತು ಸಾಧಾರಣವಾಗಿತ್ತು. ಆದರೆ, ಈಗ ಅದಕ್ಕೆ ಅಂತ್ಯ ಹಾಡಲೆಂದೇ ಚೇತನ್​ ಗೌಡ ಜೆಡಿಎಸ್​ನತ್ತ ಮುಖ ಮಾಡಿದ್ದಾರೆ.

Ramegowda son chethan
ಶಿವರಾಮೇಗೌಡ ಪುತ್ರ ಚೇತನ್

ಮಂಡ್ಯ: ಮಾಜಿ ಸಂಸದ ಶಿವರಾಮೇಗೌಡರ ಪುತ್ರ ಚೇತನ್​ ಗೌಡ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಸೇರ್ಪಡೆಗೆ ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

ಮಾಜಿ ಸಂಸದೆ ಶಿವರಾಮೇಗೌಡರ ಪುತ್ರ ಚೇತನ್​ ಗೌಡ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಜೆಡಿಎಸ್ ಪಕ್ಷವನ್ನು ಶೀಘ್ರದಲ್ಲಿ ಸೇರ್ಪಡೆಗೊಳ್ಳಲಿದೇನೆ. ಬಿಂಡಿಗನವಿಲೆ ಜಿಲ್ಲಾ ಪಂಚಾಯಿತಿ ಸ್ವಕ್ಷೇತ್ರವಾಗಿದ್ದು, ಈ ಬಾರಿ ಸಾಮಾನ್ಯ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ನಾನೂ ಕೂಡಾ ಆಕಾಂಕ್ಷಿಯಾಗಿದ್ದು, ಪಕ್ಷದ ನಾಯಕರು ಮತ್ತು ಜಿಲ್ಲೆಯ ಮುಖಂಡರು ಹಾಗೂ ನಮ್ಮ ಶಾಸಕ ಸುರೇಶ್‌ಗೌಡರನ್ನು ಭೇಟಿ ಮಾಡಿ ಬೆಂಬಲ ಕೋರುತ್ತೇನೆ ಎಂದರು.

ಬಳಿಕ ಮಾಜಿ ಸಂಸದ ಶಿವರಾಮೇಗೌಡ ಮಾತನಾಡಿ, ನಾನೂ ಕೂಡ ಹಿಂದೆ ಜಿಲ್ಲಾ ಪಂಚಾಯಿತಿಯಲ್ಲಿ ಗೆದ್ದು ನಂತರ ಶಾಸಕನಾಗಿದ್ದೆ. ಒಂಬತ್ತು ಚುನಾವಣೆಗಳನ್ನು ಎದುರಿಸಿ ರಾಜಕೀಯದಲ್ಲಿ ನೆಲೆಗೊಂಡಿದ್ದೇನೆ. ಬಿಂಡಿ ಗನವಿಲೆ ಜಿಲ್ಲಾ ಪಂಚಾಯಿತಿ ಕ್ಷೇತ್ರವು ಸಾಮಾನ್ಯ ಕ್ಷೇತ್ರವಾಗಿದ್ದು, ಅಲ್ಲಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದರು.

ಮಾಜಿ ಸಂಸದ ಶಿವರಾಮೇಗೌಡ

ಕಾರ್ಯಕರ್ತರು ಮತ್ತು ಅಭಿಮಾನಿಗಳು ಚೇತನ್‌ಗೌಡರವರನ್ನು ಅಭ್ಯರ್ಥಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ನಾನು ಕೂಡ ಬೆಂಬಲ ಕೋರುತ್ತೇನೆ. ವರಿಷ್ಠರು, ಕ್ಷೇತ್ರದ ಶಾಸಕರು, ಜಿಲ್ಲಾಮಟ್ಟದ ನಾಯಕರ ಜೊತೆ ಚರ್ಚಿಸುತ್ತೇನೆ. ನನ್ನ ಮಗನ ರಾಜಕೀಯ ಬೆಳೆವಣಿಗೆಗೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದರು.

ಓದಿ: ಮೈಸೂರು ದರೋಡೆ ಕೇಸ್​.. ಏಳು ಜನರ ಹೆಡೆಮುರಿ ಕಟ್ಟಿದ ಖಾಕಿ ಪಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.