ETV Bharat / state

ಭತ್ತದ ಗದ್ದೆಯಲ್ಲಿ ಕಾಡಾನೆ ಅನುಮಾನಾಸ್ಪದ ಸಾವು

author img

By

Published : Jun 18, 2021, 10:19 AM IST

ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ಭತ್ತದ ಗದ್ದೆಯಲ್ಲಿ ಕಾಡಾನೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

mandya
ಕಾಡಾನೆ ಅನುಮಾನಾಸ್ಪದವಾಗಿ ಸಾವು

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ಕೆರೆ ಸಮೀಪದ ಭತ್ತದ ಗದ್ದೆಯಲ್ಲಿ ಕಾಡಾನೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದೆ.

ಕಾಡಾನೆ ಅನುಮಾನಾಸ್ಪದವಾಗಿ ಸಾವು

ಗ್ರಾಮದ ನಾಗಯ್ಯ ಎಂಬುವರಿಗೆ ಸೇರಿದ ಭತ್ತದ ಗದ್ದೆಯಲ್ಲಿ 7 ರಿಂದ 8 ವರ್ಷದ ಗಂಡಾನೆಯ ಶವ ಪತ್ತೆಯಾಗಿದೆ. ಕಾಡಾನೆ ಸಾವನ್ನಪ್ಪಿರುವ ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ತಡರಾತ್ರಿ ಕಾಡಾನೆಗಳ ಗುಂಪೊಂದು ಭತ್ತದ ಗದ್ದೆಗೆ ಬಂದಿದೆ. ಆ ಗುಂಪಿನಲ್ಲಿದ್ದ ಗಂಡಾನೆಯೊಂದು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಶವ ಪರೀಕ್ಷೆಯ ನ೦ತರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆನೆಯ ಸಾವಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಸಂಕಷ್ಟದಲ್ಲಿ ನಾಯಕತ್ವ ಬದಲಾವಣೆ ಅಪ್ರಸ್ತುತ: ಎನ್.ಮಹೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.