ETV Bharat / state

ಮಂಡ್ಯದಲ್ಲಿ ಭರ್ಜರಿಯಾಗಿ ನಡೆದ ಎತ್ತಿನಗಾಡಿ ಸ್ಪರ್ಧೆ

author img

By

Published : Mar 13, 2021, 8:08 AM IST

ಮಂಡ್ಯ ಜಿಲ್ಲೆಯಲ್ಲಿ ಎತ್ತಿನಗಾಡಿ ಸ್ಪರ್ಧೆ ಭರ್ಜರಿಯಾಗಿ ನಡೆದಿದೆ.

Bullock cart race, Bullock cart race in Mandya, Mandya news, ಎತ್ತಿನಗಾಡಿ ಓಟ, ಮಂಡ್ಯದಲ್ಲಿ ಎತ್ತಿನಗಾಡಿ ಓಟ, ಮಂಡ್ಯ ಸುದ್ದಿ,
ಮಂಡ್ಯದಲ್ಲಿ ಭರ್ಜರಿಯಾಗಿ ನಡೆದ ಎತ್ತಿನಗಾಡಿ ಸ್ಪರ್ಧೆ

ಮಂಡ್ಯ : ತಾಲ್ಲೂಕಿನ ಬಿ. ಹೊಸೂರು ಕಾಲೊನಿಯಲ್ಲಿ ಎಚ್. ಮಲ್ಲಿಗೆರೆ ಗ್ರಾಮಸ್ಥರು ಬೀರೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಹಿರಿಯಮ್ಮ ಮತ್ತು ಏಳೂರಮ್ಮ ದೇವರ ಹಬ್ಬದ ಪ್ರಯುಕ್ತ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ಆಯೋಜಿಸಿದ್ದರು.

ರಾಜ್ಯದ ವಿವಿಧ ಭಾಗಗಳಿಂದ ಸುಮಾರು 50 ಜೋಡೆತ್ತುಗಳು ಸ್ಪರ್ಧೆಯಲ್ಲಿ ಭಾಗವಹಿದ್ದವು. ಆಯೋಜಕರು ಸ್ಪರ್ಧೆ ನಡೆಸಲು ಎಸ್ಪಿ, ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆದು ಸಿದ್ಧತೆ ಮಾಡಿಕೊಂಡಿದ್ದರು.

ಎತ್ತಿನಗಾಡಿ ಓಟದ ಸ್ಪರ್ಧೆ ನೋಡಲು ಸಾವಿರಾರು ಜನರು ಆಗಮಿಸಿದ್ದರು. ಗಾಡಿ ಓಟದಲ್ಲಿದ್ದ ಜನ ಕೂಗುವ ಮೂಲಕ ಯುವಕರಿಗೆ ಹುರಿದುಂಬಿಸಿದರು. ಪಂದ್ಯದಲ್ಲಿ ಗೆದ್ದವರಿಗೆ ಗ್ರಾಮದ ಯುವಕರು ವಿಶೇಷ ಬಹುಮಾನ‌ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.