ETV Bharat / state

ಮನ್ಮುಲ್​ನಲ್ಲಿ ಮತ್ತೊಂದು ದಂಧೆ ಶಂಕೆ: ಅಧಿಕಾರಿಗಳ ಮೇಲೆ ರೈತರ ಆಕ್ರೋಶ

author img

By

Published : Sep 8, 2021, 1:09 PM IST

ನೀರು ಮಿಶ್ರಿತ ಹಾಲು ಮಾರಾಟ ಪ್ರಕರಣದಲ್ಲಿ ದೇಶವ್ಯಾಪಿ ಸುದ್ದಿಯಾಗಿದ್ದ ಮಂಡ್ಯ ಜಿಲ್ಲೆಯಲ್ಲೀಗ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ಹಾಲಿನ ಗುಣಮಟ್ಟ ಅಳೆಯುವ ಲ್ಯಾಕ್ಟೋಮೀಟರ್​​ನಲ್ಲಿ ವ್ಯತ್ಯಾಸವಿದೆ ಎಂದು ರೈತರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

another-allegation-on-manmul-milk-dairy
ಹಾಲು ಮಾರಾಟ ಹಗರಣ ಬಳಿಕ ಮತ್ತೊಂದು ಆರೋಪ

ಮಂಡ್ಯ: ಮನ್ಮುಲ್​ ನೀರು ಮಿಶ್ರಿತ ಹಾಲು ಮಾರಾಟ ಪ್ರಕರಣ ಬಯಲಾಗಿ ತನಿಖೆ ಹಂತದಲ್ಲಿರುವಾಗಲೇ ಹಾಲಿನ ಗುಣಮಟ್ಟ ಪರೀಕ್ಷಿಸುವ ಲ್ಯಾಕ್ಟೋ ಮೀಟರ್​ನಲ್ಲಿ ವ್ಯತ್ಯಾಸ ಮಾಡುತ್ತಿರುವ ಆರೋಪ ಕೇಳಿಬಂದಿದೆ.

ನಾಗಮಂಗಲ ತಾಲೂಕಿನ ಕರಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಬಿಎಂಸಿ ಕೇಂದ್ರದ ಹಾಲನ್ನು ಕಳೆದೊಂದು ವಾರದಿಂದ ಕಳಪೆ ಮಟ್ಟದ ಹಾಲು ಎಂದು ತಿರಸ್ಕರಿಸುತ್ತಿರುವುದನ್ನು ಖಂಡಿಸಿ ಹಾಲಿನ ವಾಹನ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ನೀರು ಮಿಶ್ರಿತ ಹಾಲು ಮಾರಾಟ ಹಗರಣ ಬಳಿಕ ಮತ್ತೊಂದು ಆರೋಪ

ಪ್ರತಿನಿತ್ಯ 3 ಸಾವಿರಕ್ಕೂ ಅಧಿಕ ಲೀಟರ್ ಹಾಲು ಪೂರೈಕೆ..

ಕರಡಹಳ್ಳಿ ಗ್ರಾಮದ ಬಿಎಂಸಿ ಕೇಂದ್ರದಿಂದ ಪ್ರತಿನಿತ್ಯ ಕನಿಷ್ಠ 3 ಸಾವಿರಕ್ಕೂ ಅಧಿಕ ಲೀಟರ್ ಹಾಲು ಮಂಡ್ಯ ಹಾಲು ಒಕ್ಕೂಟಕ್ಕೆ ಪೂರೈಕೆಯಾಗುತ್ತಿದೆ. ಟ್ಯಾಂಕರ್‌ಗೆ ಹಾಲು ತುಂಬಿಸಿಕೊಳ್ಳುವ ಸಮಯದಲ್ಲಿ ಗುಣಮಟ್ಟ ಪರಿಶೀಲಿಸುವ ಲಾರಿ ಸಿಬ್ಬಂದಿ ತಮ್ಮ ಬಳಿಯಿರುವ ಲ್ಯಾಕ್ಟೋಮೀಟರ್‌ನಲ್ಲಿ ಪರೀಕ್ಷಿಸಿ ಇದು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸುತ್ತಿದ್ದಾರೆ ಎಂಬುದು ಮಾರಾಟಗಾರರ ಅಳಲಾಗಿದೆ.

ಕರಡಹಳ್ಳಿ, ಬಿಎಂಸಿ ಕೇಂದ್ರದವರು ಜಿಲ್ಲಾ ಹಾಲು ಒಕ್ಕೂಟದ ನಾಗಮಂಗಲ ಉಪ ಕೇಂದ್ರದಲ್ಲಿಯೇ ಖರೀದಿಸಿರುವ ಲ್ಯಾಕ್ಟೋಮಿಟರ್‌ನಲ್ಲಿ ಹಾಲಿನ ಗುಣಮಟ್ಟ 28.5 ಡಿಗ್ರಿ ತೋರಿಸಿದರೆ, ಲಾರಿ ಚಾಲಕನ ಬಳಿಯಿರುವ ಲ್ಯಾಕ್ಟೋಮೀಟರ್‌ನಲ್ಲಿ ಹಾಲಿನ ಗುಣಮಟ್ಟ 27 ಡಿಗ್ರಿ ಬರುತ್ತಿದೆ. ಈ ದಂಧೆಯ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

2 ಲ್ಯಾಕ್ಟೋಮೀಟರ್‌ಗಳಲ್ಲಿ ಹಾಲಿನ ಪರೀಕ್ಷೆ..

ಮಾಹಿತಿ ತಿಳಿಯುತ್ತಿದ್ದಂತೆ ಮನ್ಮುಲ್ ಅಧಿಕಾರಿಗಳು ಮತ್ತು ಟ್ಯಾಂಕರ್ ಲಾರಿ ಮಾಲೀಕರು ಎರಡೂ ಲ್ಯಾಕ್ಟೋಮೀಟರ್‌ಗಳಲ್ಲಿ ಹಾಲಿನ ಗುಣಮಟ್ಟ ಪರೀಕ್ಷೆ ನಡೆಸಿದರು. ಈ ವೇಳೆ ಲ್ಯಾಕ್ಟೋಮೀಟರ್‌ನಲ್ಲಿ ವ್ಯತ್ಯಾಸ ಕಂಡುಬಂದಿದೆ. ಲ್ಯಾಕ್ಟೋಮೀಟರ್‌ನಲ್ಲಿರುವ ದೋಷವನ್ನು ಸರಿಪಡಿಸಿಲಾಗುವುದು. ಜಿಲ್ಲಾ ಹಾಲು ಒಕ್ಕೂಟದಲ್ಲಿಯೇ ಎಲ್ಲಾ ಹಾಲನ್ನು ಪರೀಕ್ಷಿಸಲಾಗುವುದು. ಲಾರಿಯನ್ನು ಬಿಡುವಂತೆ ಅಧಿಕಾರಿಗಳು ಮನವಿ ಮಾಡಿದರು. ಅದರೆ, ಇದಕ್ಕೊಪ್ಪದ ರೈತರು ಇಲ್ಲಿಯೇ ಪರೀಕ್ಷೆಯಾಗಬೇಕೆಂದು ಪಟ್ಟುಹಿಡಿದು ಕುಳಿತರು.

ಮತ್ತೊಂದು ದಂಧೆ ಶಂಕೆ..

ಬಿಎಂಸಿ ಕೇಂದ್ರ ಮತ್ತು ಹಾಲಿನ ಟ್ಯಾಂಕರ್​​ ಚಾಲಕರ ಬಳಿ ಒಂದೇ ಮಾದರಿಯ ಲ್ಯಾಕ್ಟೋಮೀಟರ್ ಇರಬೇಕು. ಆದರೆ ಮೇಲ್ನೋಟಕ್ಕೆ ಎರಡೂ ಲ್ಯಾಕ್ಟೋಮೀಟರ್​​​ಗಳು ಒಂದೇ ರೀತಿ ಕಂಡುಬಂದರೂ ಸಹ ಗುಣಮಟ್ಟ ಪರೀಕ್ಷಿಸುವ ಸಮಯದಲ್ಲಿ ವ್ಯತ್ಯಾಸ ತೋರುತ್ತಿವೆ. ಇದನ್ನು ನೋಡಿದರೆ ಹಾಲಿಗೆ ನೀರು ಮಿಶ್ರಿತ ಹಗರಣ ಬಯಲಾದ ನಂತರ ಮತ್ತೊಂದು ದಂಧೆಗೆ ಇಳಿದಿರಬಹುದೇ ಎಂಬ ಶಂಕೆ ವ್ಯಕ್ತವಾಗುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿವೆ ರಾಶಿ ರಾಶಿ ಕಾಂಡೋಮ್​ಗಳು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.