ETV Bharat / state

ಗಂಗಾವತಿ: ನಟ ಪುನೀತ್​ಗೆ ವಿದ್ಯಾರ್ಥಿಗಳಿಂದ ಗೌರವ ನಮನ

author img

By

Published : Nov 6, 2022, 1:38 PM IST

Updated : Nov 6, 2022, 2:01 PM IST

ಕೊಪ್ಪಳದ ಗಂಗಾವತಿಯಲ್ಲಿ ನಟ ಪುನೀತ್​ ರಾಜ್‌ಕುಮಾರ್​ಗೆ ವಿದ್ಯಾರ್ಥಿಗಳು ಗೌರವ ನಮನ ಸಲ್ಲಿಸಿದರು.

Different tributes to actor Puneeth
ನಟ ಪುನೀತ್​ಗೆ ವಿದ್ಯಾರ್ಥಿಗಳಿಂದ ವಿಭಿನ್ನ ನಮನ

ಗಂಗಾವತಿ (ಕೊಪ್ಪಳ): ಚಂದನವನದ ಪ್ರತಿಭಾವಂತ ನಟ ಪುನೀತ್ ರಾಜ್‌ಕುಮಾರ್​​ ಇಹಲೋಕ ತ್ಯಜಿಸಿ ವರ್ಷ ಕಳೆದಿದೆ. ಆದರೂ ಅಭಿಮಾನಿಗಳಲ್ಲಿ ನೆಚ್ಚಿನ ನಟನ ಮೇಲಿನ ಪ್ರೀತಿ, ವಿಶ್ವಾಸ, ಅಭಿಮಾನ ಮಾತ್ರ ಕಡಿಮೆಯಾಗಿಲ್ಲ. ಭಾನುವಾರ ನಗರದಲ್ಲಿ ನೂರಾರು ವಿದ್ಯಾರ್ಥಿಗಳು ನಮನ ಸಲ್ಲಿಸಿದರು.

ನಟ ಪುನೀತ್​ಗೆ ವಿದ್ಯಾರ್ಥಿಗಳಿಂದ ಗೌರವ ನಮನ

ನಗರದ ಸೆಂಟ್ಪಾಲ್ ವಿದ್ಯಾಸಂಸ್ಥೆಯ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂರ್ಣಿಮಾ ಚಿತ್ರಮಂದಿರದಲ್ಲಿ ಗಂಧದಗುಡಿ ಸಿನಿಮಾ ನೋಡಿದರು. ಇದಕ್ಕೂ ಮೊದಲು ಚಿತ್ರದ ಬ್ಯಾನರ್ ಮುಂದೆ ಪುನೀತ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪೂಜಿಸಿದರು. ಹಾಸ್ಯ ಭಾಷಣಕಾರ ನರಸಿಂಹಜೋಶಿ ಈ ವೇಳೆ ಉಪಸ್ಥಿತರಿದ್ದರು.

ಪುನೀತ್ ಮೇಲೆ ಮಕ್ಕಳಿಗಿರುವ ಅಭಿಮಾನ ಕಂಡು ಸಿನಿಮಾ ಥಿಯೇಟರ್‌ ಮಾಲೀಕ ಟಿಕೆಟ್​ನಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿದ್ದು, ಗಮನ ಸೆಳೆಯಿತು.

ಇದನ್ನೂ ಓದಿ: ಗಂಧದ ಗುಡಿ ವೀಕ್ಷಿಸಿ ಅಶ್ವಿನಿ ಅವರನ್ನು ಅಪ್ಪಿಕೊಂಡು ಭಾವುಕರಾದ ಮಕ್ಕಳು

Last Updated : Nov 6, 2022, 2:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.