ETV Bharat / state

ಕಾಂಗ್ರೆಸ್​​ನವರು ಆರೋಪಿಸುವಂತೆ ನನ್ನ ಮೇಲೆ 16 ಕೇಸ್​​​ ಇಲ್ಲ: ಸಚಿವ ಆನಂದ್​ ಸಿಂಗ್​​

author img

By

Published : Feb 28, 2020, 7:49 PM IST

ನನ್ನ ಮೇಲೆ ಆರೋಪ ಮಾಡುವ ಕಾಂಗ್ರೆಸ್​​ನವರು, ಈ ಮೊದಲು ನಾನು ಕಾಂಗ್ರೆಸ್​​ಗೆ ಹೋದಾಗ ಏಕೆ ಸೇರಿಸಿಕೊಂಡರು. ಆಗ ಹೇಳಬಹುದ್ದಿತ್ತು, ನಿನ್ನ ಮೇಲೆ ಪ್ರಕರಣ ಇವೆ, ಪಕ್ಷಕ್ಕೆ ಕರೆದುಕೊಳ್ಳಲಾಗದು ಎಂದು. ಕಾಂಗ್ರೆಸ್​ ಪಕ್ಷ ಬಿಟ್ಟು ಬಂದಿದ್ದೀನಿ ಎಂಬ ಕಾರಣಕ್ಕೆ ಆರೋಪ ಮಾಡುತ್ತಾರೆ. ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದರು.

There is No 16 cases on me said by Minister Anandh Sing
ನನ್ನ ಮೇಲೆ 16 ಕೇಸುಗಳು ಇಲ್ಲ ಸಚಿವ ಆನಂದ್ ಸಿಂಗ್ ಹೇಳಿಕೆ

ಗಂಗಾವತಿ: ಕಾಂಗ್ರೆಸ್​ನವರು ಆರೋಪಿಸುವಂತೆ ನನ್ನ ಮೇಲೆ ಗಣಿ ಅಕ್ರಮ ಸೇರಿದಂತೆ ಯಾವುದೇ ಹದಿನಾರು ಪ್ರಕರಣಗಳು ಇಲ್ಲ. ಗಣಿ ಪ್ರಕರಣ ಇದ್ದರೂ ಅವು ನನ್ನ ಕುಟುಂಬ ಸದಸ್ಯರ ಹೆಸರಲ್ಲಿವೆ. ನನಗೂ ಅವಕ್ಕೂ ಯಾವುದೇ ನೇರ ಸಂಬಂಧವಿಲ್ಲ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದರು.

ಅರಣ್ಯ ಸಚಿವ ಆನಂದ್ ಸಿಂಗ್

ನಗರದಲ್ಲಿ ಮಾತನಾಡಿದ ಅವರು, ನನ್ನ ಮೇಲೆ ಆರೋಪ ಮಾಡುವ ಕಾಂಗ್ರೆಸ್​​ನವರು, ಈ ಮೊದಲು ನಾನು ಕಾಂಗ್ರೆಸ್​​ಗೆ ಹೋದಾಗ ಏಕೆ ಸೇರಿಸಿಕೊಂಡರು. ಆಗ ಹೇಳಬಹುದ್ದಿತ್ತು, ನಿನ್ನ ಮೇಲೆ ಪ್ರಕರಣ ಇವೆ, ಪಕ್ಷಕ್ಕೆ ಕರೆದುಕೊಳ್ಳಲಾಗದು ಎಂದು. ಕಾಂಗ್ರೆಸ್​ ಪಕ್ಷ ಬಿಟ್ಟು ಬಂದಿದ್ದೀನಿ ಎಂಬ ಕಾರಣಕ್ಕೆ ಆರೋಪ ಮಾಡುತ್ತಾರೆ. ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ನೂರಕ್ಕೆ ನೂರರಷ್ಟು ವಿಜಯನಗರ ಜಿಲ್ಲೆ ಆಗುತ್ತದೆ. ಈ ಬಗ್ಗೆ ಸಂದೇಹ ಬೇಡ ಎಂದು ಇದೇ ವೇಳೆ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.