ETV Bharat / state

ಹುಟ್ಟುಹಬ್ಬ ಬೇಡ ಎಂದ ಏಳು ವರ್ಷದ ಮಗು ಕೇಕಿನ ಹಣ ವಿನಿಯೋಗಿಸಿದ್ದು, ಏನಕ್ಕೆ ಗೊತ್ತಾ...?

author img

By

Published : Apr 28, 2021, 7:02 PM IST

ಬಾಲಕನೊಬ್ಬ ತನ್ನ ಬರ್ತ್​ಡೇ ಆಚರಣೆ ಮಾಡಿಕೊಳ್ಳದೇ ಸುಮಾರು ಎರಡು ಸಾವಿರ ರೂಪಾಯಿ ಮೌಲ್ಯದ ಸ್ಯಾನಿಟೈಸರ್ ಮತ್ತು ಮಾಸ್ಕ್​ಗಳನ್ನು ಫ್ರಂಟ್ಲೈನ್ ವಾರಿಯರ್ಸ್​​ಗಳಾದ ಪೊಲೀಸರಿಗೆ ನೀಡಿದ್ದಾನೆ.

birthday
birthday

ಗಂಗಾವತಿ: ಹುಟ್ಟುಹಬ್ಬ, ಕೇಕ್ ಕತ್ತರಿಸುವುದು, ಬಲೂನ್ ಒಡೆಯುವುದು, ಸಹಪಾಠಿಗಳೊಂದಿಗೆ ಸಂಭ್ರಮಿಸುವುದು ಎಂದರೆ ಸಹಜವಾಗಿ ಬಹಳಷ್ಟು ಮಕ್ಕಳಿಗೆ ಇನ್ನಿಲ್ಲದ ಕ್ರೇಜ್. ಆದರೆ ಇಲ್ಲೊಂದು ಮಗು ಡಿಫರೆಂಟ್ ಮ್ಯಾನರಿಸಂ ಮೂಲಕ ಗಮನ ಸೆಳೆದಿದೆ.

ತನ್ನ ಏಳನೇ ವರ್ಷದ ಹುಟ್ಟುಹಬ್ಬದ ನಿಮಿತ್ತ ಗಂಗಾವತಿ ಸುಧನ್ವ ಎಂಬ ಬಾಲಕ ತನ್ನ ಪಾಲಕರನ್ನು ಒಪ್ಪಿಸಿ ಸುಮಾರು ಎರಡು ಸಾವಿರ ರೂಪಾಯಿ ಮೌಲ್ಯದ ಸ್ಯಾನಿಟೈಸರ್ ಮತ್ತು ಮಾಸ್ಕ್​ಗಳನ್ನು ಫ್ರಂಟ್ಲೈನ್ ವಾರಿಯರ್ಸ್​​ಗಳಾದ ಪೊಲೀಸರಿಗೆ ನೀಡಿದ್ದಾನೆ.

ಮಗು ನೀಡಿದ್ದ ಸ್ಯಾನಿಟೈಸರ್ ಹಾಗೂ ಮಾಸ್ಕ್ ಪ್ಯಾಕ್​​ ಅನ್ನು ಪೊಲೀಸರ ಪರವಾಗಿ ಸ್ವೀಕರಿಸಿದ ನಗರಠಾಣೆಯ ಪಿಐ ವೆಂಕಟಸ್ವಾಮಿ, ಮಗುವಿನ ಈ ಮಾದರಿ ಹಾಗೂ ಸಾಮಾಜಿಕ ಕಳಕಳಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.