ETV Bharat / state

ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ : ಪ್ರಕರಣ ದಾಖಲು

author img

By

Published : Feb 16, 2022, 2:48 PM IST

ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಗಂಗಾವತಿಯಲ್ಲಿ ಪ್ರಕರಣ ದಾಖಲಾಗಿದೆ..

http://10.10.50.90//IANS_ENGLISH/13-February-2022/598e7aeb3f8b14681c0473c8096eb843_1302a_1644739240_871.jpg
http://10.10.50.90//IANS_ENGLISH/13-February-2022/598e7aeb3f8b14681c0473c8096eb843_1302a_1644739240_871.jpg

ಗಂಗಾವತಿ : ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ನಗರ ಪೊಲೀಸ್​​ ಠಾಣೆಯಲ್ಲಿ ಫೋಟೋಗ್ರಾಫರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.

ನೀಲಕಂಠೇಶ್ವರ ಕ್ಯಾಂಪ್​ನ ಫೋಟೋಗ್ರಾಫರ್ ಗುರುರಾಜ್​ ಎಂಬಾತನ ವಿರುದ್ಧ ಸಂತ್ರಸ್ತ ಮಗುವಿನ ತಾಯಿ ದೂರು ದಾಖಲಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಕುಡತಿನಿ‌ ನಿವಾಸಿಯಾದ ದೂರುದಾರ‌ ಮಹಿಳೆಯು, ಆರೋಪಿಗೆ ಸಂಬಂಧದಲ್ಲಿ ಸಹೋದರಿ. ಮಹಿಳೆ ತವರು ಮನೆ ಗಂಗಾವತಿಗೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ.

ಆರೋಪಿ ಗುರುರಾಜ ತನ್ನ ಮಗಳನ್ನು ಮನೆಯ ಮಾಳಿಗೆಯ ಮೇಲೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.