ETV Bharat / state

ಕೊರೊನಾ ಸಂಕಷ್ಟ: ವೇತನಕ್ಕಾಗಿ ಬಿಸಿಯೂಟ ಕಾರ್ಯಕರ್ತೆಯರಿಂದ ಆಗ್ರಹ

author img

By

Published : Jun 14, 2021, 9:58 AM IST

ವಿವಿಧ ವರ್ಗಗಳ ಜನರಿಗೆ ಸರ್ಕಾರ ಕೊರೊನಾ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ. ಆಗಲೂ ಕನಿಷ್ಠ ಕೂಲಿಯಲ್ಲಿ ಕೆಲಸ ಮಾಡುತ್ತಿರುವ ಬಿಸಿಯೂಟ ಕಾರ್ಯಕರ್ತೆಯರು ಇದ್ದಾರೆ ಎಂಬುದು ಸರ್ಕಾರಕ್ಕೆ ಗಮನಕ್ಕೆ ಬರಲಿಲ್ಲವಾ? ಅಥವಾ ನಾವು ಸರ್ಕಾರದ ಲೆಕ್ಕದಲ್ಲಿ ಇದ್ದೇವಾ, ಇಲ್ಲವಾ ಎಂದು ಬಿಸಿಯೂಟ ಯೋಜನೆಯ ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Koppal
ವೇತನಕ್ಕಾಗಿ ಬಿಸಿಯೂಟ ಕಾರ್ಯಕರ್ತೆಯರು ಆಗ್ರಹ

ಕೊಪ್ಪಳ: ಅತ್ಯಂತ ಕಡಿಮೆ ಸಂಬಳದಲ್ಲಿ ಹಲವು ವರ್ಷಗಳಿಂದ ಬಿಸಿಯೂಟ ತಯಾರಿಕ ಕೆಲಸ ಮಾಡುತ್ತಿದ್ದು ಕೊರೊನಾ ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ. ಸರ್ಕಾರ ಈಗಲಾದರೂ ನಮ್ಮ ನೆರವಿಗೆ ಧಾವಿಸಬೇಕೆಂದು ಬಿಸಿಯೂಟ ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ.

ವೇತನಕ್ಕಾಗಿ ಬಿಸಿಯೂಟ ಕಾರ್ಯಕರ್ತೆಯರು ಆಗ್ರಹ

ಜಿಲ್ಲೆಯಲ್ಲಿ 3,445 ಮಹಿಳೆಯರು ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಮುಖ್ಯ ಅಡುಗೆದಾರರಿಗೆ 2,700 ಹಾಗೂ ಸಹಾಯಕ ಅಡುಗೆದಾರರಿಗೆ 2,600 ರೂಪಾಯಿ ಸಂಬಳ ನೀಡಲಾಗುತ್ತಿದೆ. ಇಷ್ಟೊಂದು ಕಡಿಮೆ ಸಂಬಳದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ದುಡಿಯುತ್ತೇವೆ. ಸದ್ಯ ಕೊರೊನಾ ಕಾರಣದಿಂದಾಗಿ ಶಾಲೆಗಳನ್ನು ಮುಚ್ಚಲಾಗಿದೆ. ಇದರಿಂದ ಇಷ್ಟುದಿನ ಸಿಗುತ್ತಿದ್ದ ಅಲ್ಪ ವೇತನವೂ ಸಿಗುತ್ತಿಲ್ಲ. ಲಾಕ್​ಡೌನ್​ನಿಂದಾಗಿ ಕೂಲಿ ಕೆಲಸವೂ ಸಿಗುತ್ತಿಲ್ಲ. ಇದರಿಂದಾಗಿ ಸಾಕಷ್ಟು ತೊಂದರೆಯಾಗಿದೆ.

ಕಳೆದ ವರ್ಷದ ಲಾಕ್​ಡೌನ್ ಸಂದರ್ಭದಲ್ಲಿಯೂ ನಮಗೆ ಪರಿಹಾರ ಪ್ಯಾಕೇಜ್ ನೀಡಿಲ್ಲ. ಈ ವರ್ಷವೂ ಸಹ ಸರ್ಕಾರ ನಮ್ಮನ್ನು ಪರಿಗಣಿಸಿಲ್ಲ. ವಿವಿಧ ವರ್ಗಗಳ ಜನರಿಗೆ ಸರ್ಕಾರ ಕೊರೊನಾ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ. ಆಗಲೂ ಕನಿಷ್ಠ ಕೂಲಿಯಲ್ಲಿ ಕೆಲಸ ಮಾಡುತ್ತಿರುವ ಬಿಸಿಯೂಟ ಕಾರ್ಯಕರ್ತೆಯರು ಇದ್ದಾರೆ ಎಂಬುದು ಸರ್ಕಾರಕ್ಕೆ ಗಮನಕ್ಕೆ ಬರಲಿಲ್ಲವಾ? ಅಥವಾ ನಾವು ಸರ್ಕಾರದ ಲೆಕ್ಕದಲ್ಲಿ ಇದ್ದೇವಾ, ಇಲ್ಲವಾ ಎಂದು ಬಿಸಿಯೂಟ ಯೋಜನೆಯ ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ಬಬ್ರುವಾಹನ','ಶರಪಂಜರ' ನಿರ್ಮಿಸಿದ ಹಿರಿಯ ನಿರ್ಮಾಪಕ ಕೆ.ಸಿ.ಎನ್‌.ಚಂದ್ರಶೇಖರ್ ಇನ್ನಿಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.