ETV Bharat / state

ಕೊರೊನಾ ನಿಯಂತ್ರಣಕ್ಕೆ ಗಂಗಾವತಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ

author img

By

Published : Apr 14, 2020, 8:29 PM IST

ಕೊರೊನಾ ನಿಯಂತ್ರಣಕ್ಕೆ ಬರಲು ಒಂದೆಡೆ ವೈದ್ಯರು, ಪೊಲೀಸರು ಶ್ರಮ ಪಡುತ್ತಿದ್ದರೆ ಮತ್ತೊಂದೆಡೆ ಆಸ್ತಿಕರು ದೇವರ ಮೊರೆ ಹೋಗಿದ್ದಾರೆ. ಬಸವ ಧರ್ಮ ಪೀಠದ ಜಗದ್ಗುರು ಗಂಗಾದೇವಿ ಅವರ ಕರೆಯ ಮೆರೆಗೆ ಕೊಪ್ಪಳದಲ್ಲಿ ಅನುಯಾಯಿಗಳು ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಿದರು.

Istalinga pooja
ಇಷ್ಟಲಿಂಗ ಪೂಜೆ

ಗಂಗಾವತಿ: ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾ ಸಂಕಷ್ಟದಿಂದ ಪಾರು ಮಾಡುವಂತೆ ಬಸವ ಧರ್ಮ ಪೀಠದ ಜಗದ್ಗುರು ಗಂಗಾದೇವಿ ಅವರ ಕರೆಯ ಮೆರೆಗೆ ಅನುಯಾಯಿಗಳು ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಿದರು. ಬಸವಧರ್ಮದ ಎಲ್ಲಾ ಅನುಯಾಯಿಗಳು ಮನೆಯಲ್ಲೇ ಇದ್ದು, ನಿತ್ಯ ಇಷ್ಟಲಿಂಗ ಪೂಜೆ ಮಾಡಬೇಕು. ತಮ್ಮ ಕುಟುಂಬ ಮತ್ತು ಸಮಾಜ, ನೆರೆ ಹೊರೆಯವರು ಮತ್ತು ದೇಶಕ್ಕಾಗಿ ಪ್ರಾರ್ಥನೆ ಮಾಡಿ ಎಂದು ಗಂಗಾದೇವಿ ಸೂಚಿಸಿರುವುದಾಗಿ ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಹೆಚ್​​​​​​. ಮಲ್ಲಿಕಾರ್ಜುನ್​​​​​​ ಹೇಳಿದ್ದಾರೆ.

Istalinga pooja
ಇಷ್ಟಲಿಂಗ ಪೂಜೆ

ಮುಖ್ಯವಾಗಿ ದೇಶದಿಂದ ಕೊರೊನಾ ತೊಲಗುವಂತೆ ಪ್ರಾರ್ಥನೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಬಸವ ಭಾವ ಚಿತ್ರಕ್ಕೆ ಪೂಜೆ, ಬಸವ ಸ್ತುತಿ, ಬಸವ ಲಿಂಗ ಮಂತ್ರ ಪಠಣ ಮಾಡಿ ಜಗತ್ತಿನ ಮನುಕುಲಕ್ಕೆ ಶಾಂತಿ ನೀಡಲು ನಿತ್ಯ ಪ್ರಾರ್ಥಿಸಲಾಗುತ್ತಿದೆ ಎಂದು ಮಲ್ಲಿಕಾರ್ಜುನ್ ತಿಳಿಸಿದ್ದಾರೆ. ಮಾಜಿ ಸಚಿವ ಎಂ.ಬಿ. ಪಾಟೀಲ್​​​, ಹಾವೇರಿಯ ಮಹೇಶ್ವರ ಸ್ವಾಮೀಜಿ, ಬಾಗಲಕೋಟೆ ಚರಂತಿಮಠದ ಪ್ರಭು ಸ್ವಾಮೀಜಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಇನ್ನಿತರರು ಕೂಡಾ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.