ETV Bharat / state

ದಂಪತಿ ನಡುವೆ ಜಗಳ : ಪತ್ನಿ ಕೊಲೆಗೈದ ಪತಿ

author img

By

Published : Nov 28, 2020, 7:50 PM IST

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರುಡಿ ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

ಪತ್ನಿ ಕೊಲೆಗೈದ ಪತಿ
Husband murdered wife at Koppal

ಕೊಪ್ಪಳ : ಪತಿಯೋರ್ವ ಮಾರಕಾಸ್ತ್ರದಿಂದ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರುಡಿ ಗ್ರಾಮದಲ್ಲಿ ನಡೆದಿದೆ.

Husband murdered wife at Koppal
ಕೊಲೆಯಾದ ಪತ್ನಿ

ರೇಣುಕಾ (32) ಹತ್ಯೆಗೀಡಾದ ಪತ್ನಿ. ಯಲ್ಲಪ್ಪ ದ್ಯಾಂಪುರ ಕೊಲೆಗೈದ ಆರೋಪಿ. ಪತಿ-ಪತ್ನಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದ ನೊಂದ ರೇಣುಕಾ ತನ್ನ ತವರು ಮನೆಗೆ ಹೋಗಿದ್ದಳು. ನಿನ್ನೆ ಗಂಡನ ಅಣ್ಣ-ಅತ್ತಿಗೆ ಹಾಗೂ ಇತರರು ಸೇರಿ ರೇಣುಕಾಳನ್ನು ತವರುಮನೆಯಿಂದ ಕರೆದುಕೊಂಡು ಬುದ್ದಿವಾದ ಹೇಳಿ ಗಂಡನ ಮನೆಯಲ್ಲಿ ಬಿಟ್ಟು ಹೋಗಿದ್ದರು.

ಇಂದು ಮತ್ತೆ ದಂಪತಿ ಜಗಳ ಮಾಡಿಕೊಂಡಿದ್ದು, ಈ ವೇಳೆ ಸಿಟ್ಟಿಗೆದ್ದ ಪತಿ ಯಲ್ಲಪ್ಪ ಮಾರಕಾಸ್ತ್ರದಿಂದ ಹೆಂಡತಿ ರೇಣುಕಾಳನ್ನು ಕೊಲೆ ಮಾಡಿದ್ದಾನೆ. ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.