ETV Bharat / state

ಕೆಆರ್​​ಪಿಪಿ ಬೆಂಬಲ ಇಲ್ಲದೇ ರಾಜ್ಯದಲ್ಲಿ ಸರಕಾರ ರಚನೆ ಅಸಾಧ್ಯ: ಜನಾರ್ದನರೆಡ್ಡಿ ಮತ್ತೆ ಪುನರುಚ್ಛಾರ

author img

By

Published : Apr 18, 2023, 6:44 PM IST

Updated : Apr 18, 2023, 7:17 PM IST

ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಜಿ ಜನಾರ್ದನರೆಡ್ಡಿ ನಾಮಪತ್ರ ಸಲ್ಲಿಕೆ. ಜೆಡಿಎಸ್​ ಅಭ್ಯರ್ಥಿ ಎಚ್ ಆರ್​ ಚನ್ನಕೇಶವ ಅವರು ಸೋಮವಾರವೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

JDS candidate HR Chennakesava, KRPP party G Janardhan Reddy nomination paper.
ಜೆಡಿಎಸ್​ ಅಭ್ಯರ್ಥಿ ಎಚ್ ಆರ್​ ಚನ್ನಕೇಶವ,ಕೆಆರ್​​ಪಿಪಿ ಜಿ ಜನಾರ್ದನರೆಡ್ಡಿ ನಾಮಪತ್ರ ಸಲ್ಲಿಕೆ

ಗಂಗಾವತಿ:ರಾಜ್ಯದಲ್ಲಿ ಯಾವುದೇ ಸರಕಾರ ರಚನೆ ಆಗಬೇಕಿದ್ದರೂ, ಅಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ನಿರ್ಣಾಯಕವಾಗಲಿದೆ.ಇಂತಹದೊಂದು ಸನ್ನಿವೇಶ ರಾಜ್ಯದಲ್ಲಿ ನಿರ್ಮಾಣ ಆಗಲಿದೆ ಎಂದು ಕೆಆರ್ಪಿಪಿ ಸಂಸ್ಥಾಪಕ ಅಧ್ಯಕ್ಷ ಜಿ. ಜನಾರ್ದನರೆಡ್ಡಿ ಹೇಳಿದರು. ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ಆಯೋಜಿಸಿದ್ದ ಕಾರ್ಯಕರ್ತರ ಬೃಹತ್ ರೋಡ್ ಶೋದಲ್ಲಿ ಅವರು ಮಾತನಾಡಿದರು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ರಾಜ್ಯದಲ್ಲಿ ಉನ್ನತ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಕಾಂಗ್ರೆಸ್ ನಾಯಕರು ಷಡ್ಯಂತ್ರ ಮಾಡಿದ್ದಾರೆ. ಆದರೆ ನನ್ನನ್ನು ಮುಗಿಸಲು ಅವರಿಂದ ಸಾಧ್ಯವಿಲ್ಲ. ಜನರ ಪ್ರೀತಿ, ವಿಶ್ವಾಸ, ವಾತ್ಸಲ್ಯ ದೇವರ ಆಶೀರ್ವಾದ ಇರೋವರೆಗೂ ಈ ರೆಡ್ಡಿಯನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ ಎಂದರು.

ಸರ್ಕಾರ ರಚನೆಯಲ್ಲಿ ಕೆಆರ್​​​ಪಿಪಿ ಮಹತ್ವದ ಸ್ಥಾನ: ಈ ಬಾರಿ ಸರಕಾರ ರಚನೆಯಲ್ಲಿ ಕೆಆರ್​​​ಪಿಪಿ ಮಹತ್ವದ ಸ್ಥಾನ ನಿಭಾಯಿಸಲಿದೆ. ಮುಂದಿನ 2028ರ ಚುನಾವಣೆ ಹೊತ್ತಿಗೆ ಇಡೀ ಕರ್ನಾಟಕದಲ್ಲಿ ಗಂಗಾವತಿ ಕೇಂದ್ರ ಸ್ಥಾನವನ್ನಾಗಿಸಿಕೊಂಡು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಧಿಕಾರಕ್ಕೆ ಬರಲಿದೆ. ಸ್ವತಂತ್ರ ಪಕ್ಷವಾಗಿ ಕೆರ್​​ಪಿಪಿ ಅಧಿಕಾರಕ್ಕೆ ಬರಲಿದೆ. ಮಾತನಾಡಲು ವಿಷಯ ಬಹಳಷ್ಟು ಇದೆ. ಆದರೆ, ಈಗ ಏನನ್ನೂ ಮಾತನಾಡಲಾರೆ. ಮುಂದೆ ಸಮಯ ಸಿಕ್ಕೆ ಸಿಗುತ್ತದೆ. ಸಿಕ್ಕಾಗ ಎಲ್ಲವನ್ನೂ ಜನರ ಮುಂದೆ ಬಿಚ್ಚಿಡುತ್ತೇನೆ ಎಂದು ಹೇಳಿದರು.

ಬೃಹತ್ ರೋಡ್ ಶೋ:ಇದಕ್ಕೂ ಮುನ್ನ ನಗರದ ತಾಲೂಕು ಕ್ರೀಡಾಂಗಣದಿಂದ ರೆಡ್ಡಿ ಬೃಹತ್ ರೋಡ್ ಶೋ ನಡೆಸಿದರು. ತೆರೆದ ವಾಹನದಲ್ಲಿ ಪತ್ನಿ ಲಕ್ಷ್ಮಿ ಅರುಣಾ, ಪುತ್ರಿ ಬ್ರಹ್ಮಿಣಿ ಸೇರಿದಂತೆ ಪಕ್ಷದ ನಾನಾ ಮುಖಂಡರೊಂದಿಗೆ ಮೆರವಣಿಗೆ ಮೂಲಕ ಆಗಮಿಸಿದರು.

ಅಭಿಮಾನಿಗಳು ಬೃಹತ್ ಗಾತ್ರದ ಹೂವಿನ ಹಾರ ಮತ್ತು ಪುಟ್ಬಾಲ್​ದಿಂದ ತಯಾರಿಸಿದ್ದ ವಿಶೇಷ ಮಾಲೆಯನ್ನು ಜನಾರ್ದನರೆಡ್ಡಿಗೆ ಕ್ರೇನ್ ಮೂಲಕ ಹಾಕಲಾಯಿತು.ಇಪ್ಪತ್ತು ಅಡಿ ಎತ್ತರದ ಫುಟ್ಬಾಲ್​ ವಿಶೇಷ ಹಾರ ಹಾಗೂ ಇಪ್ಪತ್ತೇರಡು ಅಡಿ ಎತ್ತರ, ಹತ್ತು ಅಡಿ ಅಗಲದ ಹೂವಿನ ಹಾರ ಹಾಕಲು ಅಭಿಮಾನಿಗಳು ಹರಸಾಹಸ ಪಟ್ಟರು.

ತಡವಾಗಿ ತಾಲೂಕು ಕ್ರೀಡಾಂಗಣದಿಂದ ಆರಂಭವಾದ ಬೃಹತ್ ರೋಡ್ ಶೋ ಗಾಂಧಿವೃತ್ತದಲ್ಲಿ ಮುಗಿಸಲಾಯಿತು. ಬೆಳಗ್ಗೆ ಹತ್ತು ಗಂಟೆಗೆ ಆರಂಭವಾಗಬೇಕಿದ್ದ ರೋಡ್ ಶೋ, ಹನ್ನೊಂದು ಗಂಟೆಯವರೆಗೆ ಆರಂಭವಾಯಿತು.

ಜೆಡಿಎಸ್​ನಿಂದಲೂ ನಾಮಪತ್ರ ಸಲ್ಲಿಕೆ: ಗಂಗಾವತಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಉದ್ಯಮಿ ಎಚ್.ಆರ್. ಚನ್ನಕೇಶವ ಅವರು ಸೋಮವಾರ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಚನ್ನಕೇಶವ ಅವರು ಎಪಿಎಂಪಿಯ ಮೊದಲ ಗೇಟ್​ದಲ್ಲಿ ಚನ್ನಬಸವ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸುಮಾರು ಮೂರು ಸಾವಿರ ಜನರೊಂದಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು. ಜೆಡಿಎಸ್​ ರೋಡ್ ಶೋ ಸಂದರ್ಭದಲ್ಲಿ ಐವರು ಮಹಿಳೆಯರು ಭತ್ತದ ತೆನೆ ಹೊತ್ತು ವಾಹನದಲ್ಲಿ ಸಾಗಿದ್ದು, ಜನರ ಗಮನ ಸೆಳೆಯಿತು.

ಇದನ್ನೂಓದಿ:ಮೈಸೂರು: ಮೊಮ್ಮಗನ ಜೊತೆ ಬಂದ ಸಿದ್ದರಾಮಯ್ಯ

Last Updated : Apr 18, 2023, 7:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.