ETV Bharat / state

ಕೊನೆಗೂ ಕೈ ಟಿಕೆಟ್​​ ಗಿಟ್ಟಿಸಿದ ಅನ್ಸಾರಿ: ಮಾಜಿ ಶಾಸಕನಿಂದ ಬಂಡಾಯದ ಬಿಸಿ

author img

By

Published : Apr 6, 2023, 7:49 PM IST

Updated : Apr 6, 2023, 8:01 PM IST

ಈಗಾಗಲೇ ಎರಡನೇ ಪಟ್ಟಿಯಲ್ಲಿ ಘೋಷಿಸಿರುವ ಟಿಕೆಟ್​ ಅನ್ನು ಬದಲಿಸಬೇಕು, ಇನ್ನೂ ಕಾಲ ಮಿಂಚಿಲ್ಲ ಎಂದು ಶ್ರೀನಾಥ್​ ಕಾಂಗ್ರೆಸ್​ ಹೈಕಮಾಂಡ್​ಗೆ ಒತ್ತಾಯ ಮಾಡಿದ್ದಾರೆ.

Ex MLA Shrinath Pressmeet
ಮಾಜಿ ಶಾಸಕ ಶ್ರೀನಾಥ್​ ಸುದ್ದಿಗೋಷ್ಠಿ

ಮಾಜಿ ಶಾಸಕ ಶ್ರೀನಾಥ್​ ಸುದ್ದಿಗೋಷ್ಠಿ

ಗಂಗಾವತಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರಿಗೆ ನಿರೀಕ್ಷೆಯಂತೆ ಕೊನೆಗೂ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಲಭಿಸಿದ್ದು ಅವರ ಅಭಿಮಾನಿ, ಬೆಂಬಲಿಗರಲ್ಲಿ ಸಂತಷ ಮನೆ ಮಾಡುವಂತೆ ಮಾಡಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಾದರೂ ಅವಕಾಶ ಸಿಗಬಹುದು ಎಂದು ಟಿಕೆಟ್ ನಿರೀಕ್ಷೆಯಲ್ಲಿದ್ದ ಈಡಿಗ ಸಮಾಜದ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಎಚ್ ಆರ್ ಶ್ರೀನಾಥ್ ಅವರಿಗೆ ಭಾರಿ ನಿರಾಸೆಯಾಗಿದ್ದು, ಅಸಮಾಧಾನ ಭುಗಿಲೆದ್ದಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ನಗರದ ತಮ್ಮ ನಿವಾಸದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಶ್ರೀನಾಥ್, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೀಘ್ರ ತಮ್ಮ ಬೆಂಬಲಿಗರ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ರಾಯಚೂರಿನಲ್ಲಿ ನೀಡಬೇಕಿತ್ತು: ಈ ಬಗ್ಗೆ ಮಾತನಾಡಿದ ಶ್ರೀನಾಥ್, ರಾಯಚೂರಿನಲ್ಲಿ 62 ಸಾವಿರಕ್ಕೂ ಅಧಿಕ ಮುಸ್ಲಿಂ ಮತದಾರರಿದ್ದಾರೆ. ಗಂಗಾವತಿ ಬಿಟ್ಟು ಅಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಬೇಕಿತ್ತು. ರಾಯಚೂರಿನಲ್ಲಿ ಕಾಂಗ್ರೆಸ್ ಗೆಲುವಿಗೆ ಮುಸ್ಲಿಂ ಮತಗಳು ಪೂರಕವಾಗಿವೆ. ಆದರೆ, ಇದನ್ನು ಪರಿಗಣಿಸದ ಕಾಂಗ್ರೆಸ್ ಹೈಕಮಾಂಡ್ ಕೇವಲ 20 ಸಾವಿರ ಮತಗಳಿರುವ ಗಂಗಾವತಿ ಮುಸ್ಲಿಮರಿಗೆ ಟಿಕೆಟ್ ನೀಡುವ ಮೂಲಕ ಗೆಲುವಿನ ಸಾಧ್ಯತೆ ಕಳೆದುಕೊಂಡಿದೆ. ಈಗಲೂ ಕಾಲ ಮಿಂಚಿಲ್ಲ. ಟಿಕೆಟ್ ಬದಲಿಸಬೇಕೆಂದು ಒತ್ತಾಯಿಸಿದರು.

ಟಿಕೆಟ್ ಅಂತಿಮಗೊಳಿಸುವಿಕೆಯಲ್ಲಿ ಎಲ್ಲಿ ತಪ್ಪಾಗಿದೆ ಎಂಬುವುದರ ಆತ್ಮವಿಮರ್ಶೆಗೆ ಕಾಲ ಸನ್ನಿಹಿತವಾಗಿದೆ. ಡಿ.ಕೆ. ಶಿವಕುಮಾರ್​ ಅವರು ನೀಡಿದ್ದ ಟಿಕೆಟ್ ಭರವಸೆ ಮೇರೆಗೆ ನಾನು ಕಾಂಗ್ರೆಸ್ ಸೇರಿದ್ದೆ. ನನ್ನ ರಕ್ತದಲ್ಲಿ ಕಾಂಗ್ರೆಸ್ ಇದೆ ಎಂದು ಶ್ರೀನಾಥ್ ಹೇಳಿದರು. ಟಿಕೆಟ್ ಬದಲಿಸಲುವಂತೆ ಪಕ್ಷದ ಹೈಕಮಾಂಡ್ ಮನವೊಲಿಸಲಾಗುವುದು. ಆಕಸ್ಮಿಕ ಬದಲಾವಣೆಯಾಗದಿದ್ದರೆ ನಾನು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಅನ್ಸಾರಿಗೆ ಬೆಂಬಲ ಕೊಡಬಾರದು ಎಂಬ ಉದ್ದೇಶ ನಮ್ಮದಲ್ಲ ಎಂದೂ ಇದೇ ವೇಳೆ ಅವರು ಸ್ಪಷ್ಟಪಡಿಸಿದರು.

ಆದರೆ, ಈ ಮುಂಚೆ ಅವರು ನಮ್ಮೊಂದಿಗೆ ಗುರುತಿಸಿಕೊಂಡಿಲ್ಲ. ಗಂಗಾವತಿಯ ಶಾಂತಿಗಾಗಿ ನಾವು ಕೂಡಿ ಕೆಲಸ ಮಾಡೋಣ ಎಂದು ಸಹಕಾರ ನೀಡಲು ಮುಂದಾಗಿದ್ದೆ. ಆದರೆ, ಅನ್ಸಾರಿ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಕಾಂಗ್ರೆಸ್ ಎಂದರೆ ಅನ್ಸಾರಿ ಎಂಬ ಆತಂಕದ ಸ್ಥಿತಿ ಗಂಗಾವತಿಯಲ್ಲಿ ನಿರ್ಮಾಣವಾಗುತ್ತಿದೆ. ಅನ್ಸಾರಿ ಬಗ್ಗೆ ಹೆಚ್ಚಿಗೆ ಮಾತನಾಡಲಾರೆ, ಟೀಕೆಯನ್ನೂ ಮಾಡಲಾರೆ. ಈ ಬಗ್ಗೆ ಖರ್ಗೆ ಅವರ ಗಮನಕ್ಕೆ ತರಲಾಗುವುದು. ಪಕ್ಷ ಯಾವುದೇ ಕ್ರಮಕ್ಕೆ ಮುಂದಾಗದಿದ್ದಲ್ಲಿ ನಮ್ಮ ಬೆಂಬಲಿಗರ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಮೊದಲ ಪಟ್ಟಿ ಬಿಡುಗಡೆಯಾದಾಗ ಸಿಗದ ಗಂಗಾವತಿ ವಿಧಾನಸಭಾ ಕ್ಷೇತ್ರದ ಟಿಕೆಟ್​ ಎರಡನೇ ಪಟ್ಟಿಯಲ್ಲಾದರೂ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಈಡಿಗ ಸಮಾಜದ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಎಚ್.ಆರ್. ಶ್ರೀನಾಥ್ ಅವರಿಗೆ ಭಾರಿ ನಿರಾಸೆಯಾಗಿದೆ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ತಮಗೆ ಅವಕಾಶ ನೀಡುವ ಬದಲು ಮಾಜಿ ಸಚಿವ ಇಕ್ಬಾಲ್​ ಅನ್ಸಾರಿ ಅವರಿಗೆ ಅವಕಾಶ ನೀಡಿರುವುದು ಶ್ರೀ ನಾಥ್​ ಅವರಲ್ಲಿ ಅಸಮಾಧಾನ ಭುಗಿಲೇಳಲು ಕಾರಣವಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್: ಎರಡನೇ ಪಟ್ಟಿಯಲ್ಲೂ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಸಸ್ಪೆನ್ಸ್..!

Last Updated : Apr 6, 2023, 8:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.