ETV Bharat / state

ಬಾಯಿ, ಕಾಲಲ್ಲಿ ಬ್ರಷ್ ಹಿಡಿದು ಚಿತ್ರ ಬಿಡಿಸುವ ಕೊಪ್ಪಳದ ಚತುರ.. ಡಿಫರೆಂಟ್​ ಕಲಾವಿದ ಈ ಹಜರತ್

author img

By

Published : Jul 18, 2021, 10:00 AM IST

Updated : Jul 18, 2021, 12:00 PM IST

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ಹಜರತ್ ಬಳಿಗಾರ ಎಂಬ ಯುವಕ ಲಾಕ್​ಡೌನ್ ಸಮಯದಲ್ಲಿ ಕಾಲು ಹಾಗೂ ಬಾಯಲ್ಲಿ ಬ್ರಷ್ ಹಿಡಿದು ಚಿತ್ರಗಳನ್ನು ಬರೆಯುವುದನ್ನು ಕಲಿತುಕೊಂಡಿದ್ದಾನೆ. ಪದವಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಜರತ್ ಬಳಿಗಾರ ಲಾಕ್​ಡೌನ್ ಸಮಯದಿಂದ ಡಿಫರಂಟ್ ಆಗಿ ಚಿತ್ರಕಲೆಯನ್ನು ರೂಢಿಸಿಕೊಂಡು ಗಮನ ಸೆಳೆಯುತ್ತಿದ್ದಾನೆ.

hajarat-baligara
ಭಲೇ ಪ್ರತಿಭಾನ್ವಿತ ಹಜರತ್

ಕೊಪ್ಪಳ: ಕೊರೊನಾ ಭೀತಿಯಿಂದ ಆಗಿದ್ದ ಲಾಕ್‍ಡೌನ್ ಬಹುಪಾಲು ಜನರ ಬದುಕಿನಲ್ಲಿ ನಾನಾ ರೀತಿಯ ಪಾಠ ಕಲಿಸಿದೆ. ಅನೇಕರು ಹೊಸ ಹೊಸ ವಿಷಯಗಳನ್ನು ಕಲಿತಿದ್ದರೆ ಇನ್ನೂ ಅನೇಕರು ತಮ್ಮಲ್ಲಿನ ಟ್ಯಾಲೆಂಟನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿದ್ದಾರೆ. ಹೀಗೆ ಕೊರೊನಾ ಲಾಕ್​ಡೌನ್ ಸಮಯದಲ್ಲಿ ಯುವಕನೊಬ್ಬ ವಿಭಿನ್ನವಾದ ಚಿತ್ರಕಲೆಯನ್ನು ರೂಢಿಸಿಕೊಂಡಿದ್ದಾನೆ. ಸಾಮಾನ್ಯವಾಗಿ ಎಲ್ಲರೂ ಕೈಯಿಂದ ಚಿತ್ರ ಬಿಡಿಸಿದರೆ ಈ ಯುವಕ ಮಾತ್ರ ಬಾಯಲ್ಲಿ ಹಾಗೂ ಕಾಲಿನಲ್ಲಿ ಬ್ರಷ್ ಹಿಡಿದು ಚಿತ್ರ ಬರೆಯುವುದನ್ನು ಕಲಿತುಕೊಂಡು ಅದರಲ್ಲಿ ಪಾರಂಗತನಾಗಿ ಗಮನ ಸೆಳೆಯುತ್ತಿದ್ದಾನೆ.

ಹಜರತ್ ಬಳಿಗಾರ ಸಾಧನೆ

ಜಿಲ್ಲೆಯ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ಹಜರತ್ ಬಳಿಗಾರ ಎಂಬ ಯುವಕ ಲಾಕ್​ಡೌನ್ ಸಮಯದಲ್ಲಿ ಕಾಲು ಹಾಗೂ ಬಾಯಲ್ಲಿ ಬ್ರಷ್ ಹಿಡಿದು ಚಿತ್ರಗಳನ್ನು ಬರೆಯುವುದನ್ನು ಕಲಿತುಕೊಂಡಿದ್ದಾನೆ. ಪದವಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಜರತ್ ಬಳಿಗಾರ ಲಾಕ್​ಡೌನ್ ಸಮಯದಿಂದ ಡಿಫರಂಟ್ ಆಗಿ ಚಿತ್ರಕಲೆಯನ್ನು ರೂಢಿಸಿಕೊಂಡು ಗಮನ ಸೆಳೆಯುತ್ತಿದ್ದಾನೆ. ಬಾಯಲ್ಲಿ ಬ್ರಷ್ ಹಿಡಿದು ಚಿತ್ರ ಬಿಡಿಸುವುದು, ಡಂಬೆಲ್ಸ್, ಬ್ಯಾಟ್, ಪೆನ್ಸಿಲ್ ಸೇರಿದಂತೆ ಹಲವು ವಸ್ತುಗಳಿಂದಲೇ ಚಿತ್ರಗಳನ್ನು ಬಿಡಿಸುತ್ತಾರೆ. ವಿಶೇಷ ಅಂದ್ರೆ ಉಲ್ಟಾ ಮಲಗಿಕೊಂಡು ಚಿತ್ರ ಬಿಡಿಸುವ ಇವರ ಕಲೆ ನಿಜಕ್ಕೂ ಒಂದು ರೀತಿಯಲ್ಲಿ ಗಮನ ಸೆಳೆಯುತ್ತದೆ.

ಇವರು ತಲೆಯನ್ನು ಕೆಳ ಮಾಡಿಕೊಂಡು ಚಿತ್ರವನ್ನು ಯಾವುದೇ ವ್ಯತ್ಯಾಸವಿಲ್ಲದೆ ಬಿಡಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ. ಹಜರತ್ ಬಳಿಗಾರ ಅವರ ಡಿಫರಂಟ್ ಆಗಿ ಚಿತ್ರಬಿಡಿಸುವ ಕಲೆಯ ಮೂಲಕ ಈಗಾಗಲೇ ಭಗತ್ ಸಿಂಗ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಸೇನಾನಿಗಳ, ಕ್ರಿಕೆಟ್ ಪಟುಗಳ, ಡಾ. ಅಂಬೇಡ್ಕರ್, ಡಾ. ಅಬ್ದುಲ್ ಕಲಾಂ, ಪೊಲೀಸ್ ಅಧಿಕಾರಿ ರವಿ ಡಿ. ಚನ್ನಣ್ಣವರ್ ಸೇರಿದಂತೆ ಅನೇಕ ಸಾಧಕರ ಚಿತ್ರಗಳನ್ನು ಬಿಡಿಸಿದ್ದಾನೆ. ಹೀಗೆ ತಲೆ ಕೆಳಗೆ ಮಾಡಿಕೊಂಡು ಹಾಗೂ ವಿಭಿನ್ನವಾಗಿ ರಚಿಸಿರುವ ಕಲಾಕೃತಿಗಳನ್ನು ಹಜರತ್ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದು ಸಖತ್ ಸದ್ದು ಮಾಡುತ್ತಿವೆ.

ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಹಜರತ್‍ಗೆ ಅನೇಕ ಶಿಕ್ಷಕರು ಪ್ರೋತ್ಸಾಹ ನೀಡಿದ್ದಾರೆ. ಹೀಗಾಗಿ, ಚಿತ್ರಕಲೆಯಲ್ಲಿಯೇ ಏನಾದರೂ ಸಾಧನೆ ಮಾಡಬೇಕು ಎಂಬ ಹೆಬ್ಬಯಕೆ ಹೊಂದಿದ್ದಾನೆ. ತನ್ನ ಕಲಾಕೃತಿಗಳನ್ನು ಹಾಗೂ ವಿಭಿನ್ನವಾಗಿ ಬಿಡಿಸಿದ ಚಿತ್ರಕಲೆಯ ಕಲಾಕೃತಿಗಳ ರಚನೆ ಮಾಡುತ್ತಿರುವುದಕ್ಕೆ ಸ್ನೇಹಿತರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ನನಗೆ ತುಂಬಾ ಖುಷಿಯಾಗುತ್ತಿದೆ ಎಂದು ಹಜರತ್ ಸಂತಸ ವ್ಯಕ್ತಪಡಿಸುತ್ತಾನೆ. ಅಲ್ಲದೆ, ವಿಭಿನ್ನವಾಗಿ ಕಲಾಕೃತಿಗಳ ರಚನೆಯನ್ನು ಮಾಡಬೇಕು ಹಾಗೂ ಚಿತ್ರಕಲೆಯಲ್ಲಿಯೇ ತಾನು ವಿಶೇಷವಾಗಿ ಗುರುತಿಸಿಕೊಳ್ಳಬೇಕು ಎಂಬ ಆಸೆ ಇದೆ ಎನ್ನುತ್ತಾನೆ.

ಲಾಕ್​ಡೌನ್ ಸಮಯದಲ್ಲಿ ಈ ರೀತಿಯಾಗಿ ಚಿತ್ರಬಿಡಿಸುವುದನ್ನು ಕರಗತ ಮಾಡಿಕೊಂಡಿರುವ ಹಜರತ್‍ನ ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿ ಹೆಮ್ಮೆಯ ಮಾತನಾಡುತ್ತಾರೆ. ಪ್ರತಿಯೊಬ್ಬರಲ್ಲಿ ಪ್ರತಿಭೆ ಇದ್ದೇ ಇರುತ್ತದೆ. ತಮಗಿರುವ ಪ್ರತಿಭೆಯನ್ನು ಕೆಲವರು ವಿಭಿನ್ನವಾಗಿ ವ್ಯಕ್ತಪಡಿಸುವ ಮೂಲಕ ಗಮನ ಸೆಳೆಯುತ್ತಾರೆ. ಅಂತಹವರ ಸಾಲಿಗೆ ಹಜರತ್ ಕೂಡಾ ಸೇರಿದ್ದಾರೆ. ಈತನ ಪ್ರತಿಭೆ ಇನ್ನಷ್ಟು ಉತ್ತುಂಗಕ್ಕೇರಲಿ ಎಂಬುದು ಎಲ್ಲರ ಆಶಯವಾಗಿದೆ.

Last Updated :Jul 18, 2021, 12:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.