ETV Bharat / state

ಕೊರೊನಾ ಸೋಕಿಂತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಹಿಳೆ ನ್ಯಾಯಾಲಯಕ್ಕೆ ಹಾಜರು!

author img

By

Published : Apr 21, 2020, 6:26 PM IST

ಕೊರೊನಾ ಸೋಕಿಂತ ವ್ಯಕ್ತಿಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಹಿಳೆಯನ್ನು ನ್ಯಾಯಾಧೀಶ ಹರೀಶ್ ಪಾಟೀಲ್ ಅವರ ಮುಂದೆ ಹಾಜರು ಪಡಿಸಲಾಯಿತು.

corona updates in koppal
ಕೊರೊನಾ ಸೋಕಿಂತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಹಿಳೆ ನ್ಯಾಯಾಲಯಕ್ಕೆ ಹಾಜರು

ಕೊಪ್ಪಳ: ಕೊರೊನಾ ಸೋಕಿಂತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಹಿಳೆಯನ್ನು ಇಂದು ನಗರದಲ್ಲಿರುವ ಜೆಎಂಎಫ್​​​​ಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು.

ಮುಂಬೈನಿಂ ದ ಹುಬ್ಬಳ್ಳಿಗೆ ಬಂದು ಏಪ್ರಿಲ್ 13ರಂದು ರಾತ್ರಿ ಕೊಪ್ಪಳಕ್ಕೆ ಬಂದಿದ್ದ ಮಹಿಳೆಯನ್ನು ನ್ಯಾಯಾಧೀಶ ಹರೀಶ್ ಪಾಟೀಲ್ ಅವರ ಮುಂದೆ ಹಾಜರು ಪಡಿಸಲಾಯಿತು.

ಕಲಂ 164 ಸಿಆರ್​​​ಪಿಸಿ ಅಡಿಯಲ್ಲಿ ಮಹಿಳೆ ತನ್ನ ಹೇಳಿಕೆ ನೀಡಿದ್ದು, ಇವರು ಧಾರವಾಡದ P194 ಸೋಕಿಂತ ವ್ಯಕ್ತಿಯ ಜೊತೆ ಬಸ್​​​​​ನಲ್ಲಿ ಪ್ರಯಾಣ ಮಾಡಿದ್ದರು. ಮುಂಬೈ ಮೂಲದ ಮಹಿಳೆಗೆ ಪಾಸ್ ಕೊಡಿಸುವುದಾಗಿ ಹೇಳಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರುಬಸವ ಹೊಳಗುಂದಿ, ಏಪ್ರಿಲ್ 13ರಂದು ರಾತ್ರಿ ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಕರೆ ತಂದಿದ್ದರಂತೆ. ಈ ಕುರಿತಂತೆ ಗುರುಬಸವ ಹೊಳಗುಂದಿ ಹಾಗೂ ಮಹಿಳೆ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ತಹಶೀಲ್ದಾರ್ ದೂರು ದಾಖಲಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.