ಅಂಜನಾದ್ರಿಯಲ್ಲಿ ಸರಳ ಹನುಮ ಜಯಂತಿ : ಅರ್ಚಕ ವಿದ್ಯಾದಾಸ ಬಾಬಾರಿಂದ ಸಿದ್ಧತೆ

author img

By

Published : Apr 25, 2021, 9:53 PM IST

simple Hanuman Jayanti in Anjanadri

ಸೋಮವಾರ ಮಧ್ಯರಾತ್ರಿಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ.ದೇಗುಲ, ಆಂಜನೇಯನ ಮೂರ್ತಿಗೆ ವಿಶೇಷ ಅಲಂಕಾರ, ಅಭಿಷೇಕ, ವಿಶೇಷ ಪೂಜೆ, ಬೆಳಗ್ಗೆ 6 ಗಂಟೆಗೆ ಮಂಗಳಾರತಿ ನಡೆಯಲಿವೆ. ಏ.27ರಂದು ಎಂಟು ಗಂಟೆ ಬಳಿಕ ಹೋಮ-ಹವನ ನಡೆಯಲಿವೆ..

ಗಂಗಾವತಿ : ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾದ ಅಂಜನಾದ್ರಿಯಲ್ಲಿ ಏ.27ರಂದು ಹನುಮ ಜಯಂತಿ ನಡೆಸಲು ಅರ್ಚಕ ವಿದ್ಯಾದಾಸ ಬಾಬಾ ಸಿದ್ಧತೆ ಮಾಡಿಕೊಂಡಿದ್ದಾರೆ. ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ಹೈಕೋರ್ಟ್​ ಆದೇಶ ನೀಡಿದೆ.

simple Hanuman Jayanti in Anjanadri
ಅಂಜನಾದ್ರಿಯಲ್ಲಿ ಸರಳ ಹನುಮ ಜಯಂತಿ

ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ 200ರ ಗಡಿ ದಾಟುತ್ತಿದೆ. ಈ ಹಿನ್ನೆಲೆ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆ, ಸಮಾರಂಭ ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಈ ಹಿನ್ನೆಲೆ ಬಾಬಾ ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆಯಾಗದಂತೆ ಕೇವಲ ಒಂದಿಬ್ಬರು ಸಹಾಯಕ ಅರ್ಚಕರ ನೇತೃತ್ವದಲ್ಲಿ ಹನುಮ ಜಯಂತಿ ಆಚರಿಸಲು ನಿರ್ಧರಿಸಿದ್ದಾರೆ.

ಸೋಮವಾರ ಮಧ್ಯರಾತ್ರಿಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ.ದೇಗುಲ, ಆಂಜನೇಯನ ಮೂರ್ತಿಗೆ ವಿಶೇಷ ಅಲಂಕಾರ, ಅಭಿಷೇಕ, ವಿಶೇಷ ಪೂಜೆ, ಬೆಳಗ್ಗೆ 6 ಗಂಟೆಗೆ ಮಂಗಳಾರತಿ ನಡೆಯಲಿವೆ. ಏ.27ರಂದು ಎಂಟು ಗಂಟೆ ಬಳಿಕ ಹೋಮ-ಹವನ ನಡೆಯಲಿವೆ ಎಂಬ ಮಾಹಿತಿ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.