ETV Bharat / state

ಚುನಾವಣಾ ಆಯೋಗದಿಂದ ಬಣ್ಣಬಣ್ಣದ ಗುರುತಿನ ಚೀಟಿ, ಅದರಲ್ಲೂ ಲೋಪ!

author img

By

Published : Jan 11, 2020, 5:17 PM IST

ಮತದಾರರನ್ನು ಸೆಳೆಯುವ ಸಲುವಾಗಿ ಮೊದಲ ಬಾರಿಗೆ ಕೇಂದ್ರ ಚುನಾವಣಾ ಆಯೋಗವು ಬಣ್ಣಬಣ್ಣದ ಗುರುತಿನ ಚೀಟಿ ವಿತರಿಸಿದೆ. ಆದ್ರೆ ಇದರಲ್ಲೂ ಲೋಪಗಳು ಪತ್ತೆಯಾಗಿವೆ.

Central Election Commission Distribution colour epic card
ಬಣ್ಣಬಣ್ಣದ ಗುರುತಿನ ಚೀಟಿ

ಗಂಗಾವತಿ: ಮತದಾರರನ್ನು ಸೆಳೆಯುವ ಸಲುವಾಗಿ ಮೊದಲ ಬಾರಿಗೆ ಕೇಂದ್ರ ಚುನಾವಣಾ ಆಯೋಗವು ಬಣ್ಣಬಣ್ಣದ ಗುರುತಿನ ಚೀಟಿ ವಿತರಿಸಿದೆ. ಆದರೆ, ಬಹುತೇಕ ಕಾರ್ಡ್​​ಗಳಲ್ಲಿ ದೋಷ ಕಂಡು ಬಂದಿದೆ.

ಗಂಗಾವತಿಯಲ್ಲಿ ಆಯ್ದ ಕೆಲವರ ಮನೆಗಳಿಗೆ ಅಂಚೆ ಇಲಾಖೆ ಮೂಲಕ ಗುರುತಿನ ಚೀಟಿ ವಿತರಣೆ ಮಾಡಲಾಗುತ್ತಿದೆ. ತಾಂತ್ರಿಕ ಲೋಪದೋಷಗಳಿಂದ ಕನ್ನಡದಲ್ಲಿ ವಿವರಣೆ ಸರಿಯಿದ್ದರೆ, ಇಂಗ್ಲಿಷ್​​​ನಲ್ಲಿ ಇರುವ ಮಾಹಿತಿ ತಪ್ಪಿದೆ ಎಂದು ಗುರುತಿನ ಚೀಟಿ ಪಡೆದ ಸ್ಥಳೀಯರು ಆರೋಪಿಸಿದರು.

ಬಣ್ಣಬಣ್ಣದ ಗುರುತಿನ ಚೀಟಿ

ಕೆಲ ಗುರುತಿನ ಚೀಟಿಗಳಲ್ಲಿ ಕನ್ನಡ ಭಾಷೆಯಲ್ಲಿ ಅಪ್ಪನ ಹೆಸರು ಒಂದು ರೀತಿಯಿದ್ದರೆ, ಇಂಗ್ಲಿಷ್​​ನಲ್ಲಿ ಬದಲಾಗಿದೆ. ತಾಂತ್ರಿಕ ದೋಷದಿಂದ ಕೂಡಿರುವ ಇವುಗಳ ಸರಿಪಡಿಸುವಿಕೆಗೆ ನಮ್ಮ ಕೆಲಸ-ಕಾರ್ಯಗಳನ್ನೆಲ್ಲ ಬಿಟ್ಟು ಕಚೇರಿಗಳತ್ತ ಅಲೆಯಬೇಕು ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು. ಕೂಡಲೇ ಚುನಾವಣಾ ಆಯೋಗ ಈ ಕುರಿತು ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

Intro:ಇದೇ ಮೊದಲ ಬಾರಿಗೆ ಭಾರತ ಚುನಾವಣಾ ಆಯೋಗ ಮತದಾರರಿಗೆ ಕಲರ್ ಫುಲ್ ಆಗಿರುವ ಹಾಗೂ ಆಕರ್ಷಕವಾಗಿ ಸೆಳೆಯುವ ಮತದಾರರ ಗುರುತಿನ ಚೀಟಿ ವಿತರಿಸಿದೆ. Body:ಕಲರ್ ಫುಲ್ ಎಪಿಕ್ ಕಾರ್ಡ್ ಬಂತು: ಸಮಸ್ಯೆಗಳನ್ನು ಹೊತ್ತು ತಂತು
ಗಂಗಾವತಿ:
ಇದೇ ಮೊದಲ ಬಾರಿಗೆ ಭಾರತ ಚುನಾವಣಾ ಆಯೋಗ ಮತದಾರರಿಗೆ ಕಲರ್ ಫುಲ್ ಆಗಿರುವ ಹಾಗೂ ಆಕರ್ಷಕವಾಗಿ ಸೆಳೆಯುವ ಮತದಾರರ ಗುರುತಿನ ಚೀಟಿ ವಿತರಿಸಿದೆ.
ಗಂಗಾವತಿಯಲ್ಲಿ ಮೊದಲ ಬಾರಿಗೆ ಕಲರ್ ಯುಡೆಂಟಿಟಿ ಕಾರ್ಡ್ ಆಯ್ದ ಕೆಲವರ ಮನೆಮನೆಗೆ ಅಂಚೆ ಇಲಾಖೆಯ ಮೂಲಕ ವಿತರಿಸಲಾಗುತ್ತಿದ್ದು, ಸಾರ್ವಜನಿಕರು ಹಾಗೂ ಮತದಾರರ ಗಮನ ಸೆಳೆಯುತ್ತಿದೆ.
ಆದರೆ ಬಹುತೇಕ ಅಂಚೆ ಕಾರ್ಡ್ ಗಳಲ್ಲಿ ದೋಷ ಕಂಡು ಬಂದಿವೆ. ಕನ್ನಡದಲ್ಲಿ ಒಂದು ತರಹದ ವಿವರಗಳಿದ್ದರೆ, ಇಂಗ್ಲೀಷ್ ನಲ್ಲಿ ಮತ್ತೊಂದು ಮಾಹಿತಿ ಇದೆ. ಕೆಲ ಕಾರ್ಡ್ ಗಳಲ್ಲಿ ಕನ್ನಡ ಭಾಷೆಯಲ್ಲಿ ಅಪ್ಪನ ಹೆಸರು ಒಂದು ರೀತಿ ಇದ್ದರೆ, ಇಂಗ್ಲೀಷ್ ನಲ್ಲಿ ಬದಲಾಗಿದೆ. ತಾಂತ್ರಿಕ ದೋಷದಿಂದ ಕೂಡಿರುವ ಇವುಗಳ ಸರಿಪಡಿಸುವಿಕೆ ಮತ್ತೊಂದು ಸಮಸ್ಯೆಯಂತಾಗಿದೆ.
ಇ ಬಗ್ಗೆ ಸಂಬಂಧಿತ ಇಲಾಖೆ ಗಮನ ಹರಿಸಬೇಕು ಎಂಬುವುದು ಸಾರ್ವಜನಿಕರ ಒತ್ತಾಯಿಸುತ್ತಿದ್ದಾರೆ.

ಬೈಟ್: ಅಯ್ಯನಗೌಡ ಗಂಗಾವತಿConclusion:ತಾಂತ್ರಿಕ ದೋಷದಿಂದ ಕೂಡಿರುವ ಇವುಗಳ ಸರಿಪಡಿಸುವಿಕೆ ಮತ್ತೊಂದು ಸಮಸ್ಯೆಯಂತಾಗಿದೆ.
ಇ ಬಗ್ಗೆ ಸಂಬಂಧಿತ ಇಲಾಖೆ ಗಮನ ಹರಿಸಬೇಕು ಎಂಬುವುದು ಸಾರ್ವಜನಿಕರ ಒತ್ತಾಯಿಸುತ್ತಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.