ETV Bharat / state

ಸಿದ್ದರಾಮಯ್ಯ ಗರತಿ ರಾಜಕಾರಣಿಯಲ್ಲ : ಸಿ. ಟಿ ರವಿ ವ್ಯಂಗ್ಯ

author img

By

Published : Nov 5, 2019, 3:15 AM IST

ಮಹಾತ್ಮಾ ಗಾಂಧಿ ಕಾಲದ ಕಾಂಗ್ರೆಸ್ ಈಗ ಸತ್ತು ಹೋಗಿದೆ. ಗಾಂಧಿ ಕಾಂಗ್ರೆಸ್ ಅಂದರೆ ಗೋಹತ್ಯೆ ನಿಷೇಧ, ಭ್ರಷ್ಟಾಚಾರ ಮುಕ್ತ ಮಾಡುವ ಧ್ಯೇಯ ಹೊಂದಿತ್ತು. ಆದರೆ ಈಗಿರುವ ಕಾಂಗ್ರೆಸ್ ಇದೆಲ್ಲದರ ಪರವಾಗಿರುವ ಪಕ್ಷ. ದೇಶಕ್ಕೆ ಕಾಂಗ್ರೆಸ್ ಅಂಟಿದ‌ ಮುಳ್ಳಾಗಿದೆ ಎಂದು ಸಚಿವ ಸಿ.ಟಿ. ರವಿ ಕಿಡಿಕಾರಿದ್ದಾರೆ.

ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ. ರವಿ

ಕೊಪ್ಪಳ: ಸಿದ್ದರಾಮಯ್ಯ ಗರತಿ ರಾಜಕಾರಣಿಯಲ್ಲ.‌ ಅವರು ಗರತಿ ರಾಜಕಾರಣ ಮಾಡಿದ್ರೆ ಪಕ್ಷಾಂತರ ಮಾಡುತ್ತಿದ್ರಾ? ಎಂದು ಕನ್ನಡ, ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.

ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಚೆಲುವರಾಯಸ್ವಾಮಿ, ಇಕ್ಬಾಲ್ ಅನ್ಸಾರಿ, ಬಾಲಕೃಷ್ಟರನ್ನು ಕರೆಸಿಕೊಂಡರಲ್ಲ, ಇದೇನು? ಇವರನ್ನೆಲ್ಲಾ ಪಕ್ಷಾಂತರ ಮಾಡಿಸಿದ್ದು ಗರತಿ ರಾಜಕಾರಣನಾ? ಸಿದ್ದರಾಮಯ್ಯನಿಗೆ ಯಾವ ಆದರ್ಶ, ನೈತಿಕತೆ ಇದೆ ಎಂದು ಸಚಿವ ಸಿ.ಟಿ. ರವಿ, ಪ್ರಶ್ನಿಸಿದರು.

ಸಚಿವ ಸಿ.ಟಿ. ರವಿ ಸಿಡಿಮಿಡಿ

ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಅಂಟಿದ ಮುಳ್ಳು. ಮಹಾತ್ಮ ಗಾಂಧಿ ಕಾಲದ ಕಾಂಗ್ರೆಸ್ ಈಗ ಸತ್ತು ಹೋಗಿದೆ. ಗಾಂಧಿ ಕಾಂಗ್ರೆಸ್ ಅಂದರೆ ಗೋಹತ್ಯೆ ನಿಷೇಧ, ಭ್ರಷ್ಟಾಚಾರ ಮುಕ್ತ ಮಾಡುವ ಧ್ಯೇಯ ಹೊಂದಿತ್ತು. ಆದರೆ, ಈಗಿರುವ ಕಾಂಗ್ರೆಸ್ ಇದೆಲ್ಲದರ ಪರವಾಗಿರುವ ಪಕ್ಷ. ದೇಶಕ್ಕೆ ಕಾಂಗ್ರೆಸ್ ಅಂಟಿದ‌ ಮುಳ್ಳಾಗಿದೆ. ಹೀಗಾಗಿ ಆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದು‌‌ ಹೇಳಿದರು. ಇನ್ನು ಯಡಿಯೂರಪ್ಪ ನಮ್ಮ ಸರ್ವಾನುಮತದ ಆಯ್ಕೆ. ಆದರೆ, ಸಿದ್ದರಾಮಯ್ಯರದ್ದು ವಿವಾದಾತ್ಮಕ ಆಯ್ಕೆ ಎಂದು ಸಚಿವ ಸಿ. ಟಿ. ರವಿ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

Intro:Body:ಕೊಪ್ಪಳ:- ಸಿದ್ದರಾಮಯ್ಯ ಗರತಿ ರಾಜಕಾರಣಿಯಲ್ಲ.‌ ಅವರು ಗರತಿ ರಾಜಕಾರಣ ಮಾಡಿದ್ರೆ ಪಕ್ಷಾಂತರ ಮಾಡುತಿದ್ದರಾ? ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ. ರವಿ ಪ್ರಶ್ನಿಸಿದ್ದಾರೆ. ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಚೆಲುವರಾಯಸ್ವಾಮಿ, ಇಕ್ಬಾಲ್ ಅನ್ಸಾರಿ, ಬಾಲಕೃಷ್ಟರನ್ನು ಕರೆಕೊಂಡರಲ್ಲ ಇದೇನು? ಇವರನ್ನೆಲ್ಲ ಪಕ್ಷಾಂತರ ಮಾಡಿಸಿದ್ದು ಗರತಿ ರಾಜಕಾರಣನಾ ಎಂದು ಪ್ರಶ್ನಿಸಿದ ಸಚಿವ ಸಿ.ಟಿ. ರವಿ, ಸಿದ್ದರಾಮಯ್ಯನಿಗೆ ಯಾವ ಆದರ್ಶ ನೈತಿಕತೆ ಇದೆ ಎಂದರು. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಅಂಟಿದ ಮುಳ್ಳು. ಮಹಾತ್ಮಾ ಗಾಂಧಿ ಕಾಲದ ಕಾಂಗ್ರೆಸ್ ಈಗ ಸತ್ತು ಹೋಗಿದೆ. ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಂದ್ರೆ ಗೋಹತ್ಯೆ ನಿಷೇಧ, ಭ್ರಷ್ಟಾಚಾರ ಮುಕ್ತ ಮಾಡುವ ಧ್ಯೇಯ ಹೊಂದಿತ್ತು. ಆದರೆ, ಈಗಿರುವ ಕಾಂಗ್ರೆಸ್ ಇದೆಲ್ಲದರ ಪರವಾಗಿರುವ ಕಾಂಗ್ರೆಸ್‌. ದೇಶಕ್ಕೆ ಕಾಂಗ್ರೆಸ್ ದೇಶಕ್ಕೆ ಅಂಟಿದ‌ ಮುಳ್ಳು. ಹೀಗಾಗಿ ಆ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದು‌‌ ಹೇಳಿದರು. ಇನ್ನು ಯಡಿಯೂರಪ್ಪ ನಮ್ಮ ಸರ್ವಾನುಮತದ ಆಯ್ಕೆ. ಆದರೆ, ಸಿದ್ದರಾಮಯ್ಯಂದು ವಿವಾದಾತ್ಮಕ ಆಯ್ಕೆ ಎಂದು ಸಚಿವ ಸಿ.ಟಿ. ರವಿ ಇದೇ ಸಂದರ್ಭದಲ್ಲಿ ಹೇಳಿದರು.

ಬೈಟ್1:- ಸಿ.ಟಿ. ರವಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ‌ ಇಲಾಖೆ ಸಚಿವConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.