ETV Bharat / state

ಕೊರೊನಾ 2ನೇ ಅಲೆಯ ಕುರಿತು ಶಿಕ್ಷಕನಿಂದ ಜಾಗೃತಿ ಗೀತೆ: ವೈರಲ್ ಆಯ್ತು ವಿಡಿಯೋ

author img

By

Published : May 2, 2021, 8:34 PM IST

ವಿಶ್ವದಾದ್ಯಂತ ಭೀತಿಗೆ ತಳ್ಳಿರುವ ಕೊರೊನಾ ಸೋಂಕಿನ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಶಿಕ್ಷಕರೊಬ್ಬರು ತಾವೇ ಸಾಹಿತ್ಯ ರಚಿಸಿ, ಹಾಡಿದ್ದಾರೆ. ಇದೀಗ ಕೋವಿಡ್​ ಗೀತೆ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ.

awareness-song-from-teacher-on-corona-2nd-wave
ಕೊರೊನಾ 2ನೇ ಅಲೆಯ ಕುರಿತು ಶಿಕ್ಷಕನಿಂದ ಜಾಗೃತಿ ಗೀತೆ

ಕೊಪ್ಪಳ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸಾರ್ವಜನಿಕರಿಗೆ ವೈರಸ್​ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಶಿಕ್ಷಕರೊಬ್ಬರು ಗೀತೆಯನ್ನು ರಚಿಸಿ ಹಾಡುವ ಮೂಲಕ ಮನವಿ ಮಾಡಿದ್ದಾರೆ.

ಕೊರೊನಾ 2ನೇ ಅಲೆಯ ಕುರಿತು ಶಿಕ್ಷಕನಿಂದ ಜಾಗೃತಿ ಗೀತೆ

ಈವರೆಗೆ ಹಲವಾರು ಜಾಗೃತಿ ಗೀತೆಗಳನ್ನು ರಚಿಸಿ ಹಾಡಿರುವ ತಾಲೂಕಿನ ಬೋಚನಹಳ್ಳಿ‌ ಗ್ರಾಮದ ಶಿಕ್ಷಕ ಹನುಮಂತಪ್ಪ ಕುರಿ ಅವರು, ಇದೀಗ ಕೊರೊನಾದಿಂದ ಭಯಪಡಬೇಡಿ, ಜಾಗರೂಕರಾಗಿರಿ ಎಂಬ ಗೀತೆಯನ್ನು ರಚಿಸಿ ಹಾಡಿದ್ದಾರೆ.

ಜನರು ಅನಾವಶ್ಯಕವಾಗಿ ಓಡಾಡಬಾರದು, ವೈರಸ್​ನಿಂದ ಮುಕ್ತಿ ಪಡೆಯಲು ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಹಾಗೂ ಕೊರೊನಾ ಸೋಂಕಿನ ಬಗ್ಗೆ ಜನರು ಜಾಗರೂಕರಾಗಿರುವಂತೆ ಸಂದೇಶವುಳ್ಳ ಅಂಶಗಳನ್ನು ಶಿಕ್ಷಕ ಹನುಮಂತಪ್ಪ ಕುರಿ ತಮ್ಮ ಜಾಗೃತಿ ಗೀತೆಯಲ್ಲಿ ಹಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಗಳಿಸಿದ್ದಾರೆ.

ಓದಿ: ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಜೆಡಿಎಸ್ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಸಿಡಿದೆದ್ದು ಬರಲಿದೆ: ಹೆಚ್​ಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.