ETV Bharat / state

ನನ್ನ ವಿರುದ್ಧ ಸಿದ್ದರಾಮಯ್ಯ ಸ್ಪರ್ಧಿಸಿದರೆ ಜನರೇ ಉಗಿಯುತ್ತಾರೆ : ವರ್ತೂರ್ ಪ್ರಕಾಶ್

author img

By

Published : Nov 14, 2022, 5:22 PM IST

ನಾನು ಸಿದ್ದರಾಮಯ್ಯ ಒಂದೇ ಸಮುದಾಯದವರು. ನನ್ನ ವಿರುದ್ಧ ಅವರು ಸ್ಪರ್ಧಿಸಿದರೆ ನಾಡಿನ ಜನರೇ ಸಿದ್ದರಾಮಯ್ಯ ಅವರಿಗೆ ಉಗಿಯುತ್ತಾರೆ ಎಂದು ಮಾಜಿ ಸಚಿವ ಆರ್. ವರ್ತೂರ್ ಪ್ರಕಾಶ್ ಹೇಳಿದ್ದಾರೆ.

varthur-prakash
ವರ್ತೂರ್ ಪ್ರಕಾಶ್

ಕೋಲಾರ: ನಾನೂ ಒಬ್ಬ ಕುರುಬ, ನನ್ನ ವಿರುದ್ಧ ಸಿದ್ದರಾಮಯ್ಯ ಚುನಾವಣೆಯಲ್ಲಿ ನಿಂತುಕೊಂಡರೆ ರಾಜ್ಯದ ಜನರೇ ಉಗಿಯುತ್ತಾರೆ ಎಂದು ಕೋಲಾರದಲ್ಲಿ ಮಾಜಿ ಸಚಿವ ಆರ್. ವರ್ತೂರ್ ಪ್ರಕಾಶ್ ಹೇಳಿದರು.

ಕೋಲಾರ ತಾಲೂಕಿನ ರಾಜಕಲ್ಲಹಳ್ಳಿಯಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಸಿದ್ದರಾಮಯ್ಯ ಪ್ರವಾಸ ಮಾಡುತ್ತಿದ್ದಾರೆ. ಹೀಗಾಗಿ ಇಲ್ಲಿಗೂ ಬಂದಿದ್ದಾರೆ. ಆದರೆ, ಕೋಲಾರ ಜಿಲ್ಲೆಯ ಕೆಲ ಶಾಸಕರು ಸೋಲುವ ಭೀತಿಯಿಂದ ಕೋಲಾರಕ್ಕೆ ಬರುವಂತೆ ಮನವಿ ಮಾಡುತ್ತಿದ್ದಾರೆ ಎಂದರು.

ಅಲ್ಲದೇ ಸಿದ್ದರಾಮಯ್ಯ ಅವರು ಅಪ್ಪಿತಪ್ಪಿಯೂ ಕೋಲಾರದಲ್ಲಿ ನಿಲ್ಲುವುದಾಗಿ ಹೇಳಿಲ್ಲ. ಕೋಲಾರಕ್ಕೆ ಬಂದರೆ ಇವರೆಲ್ಲಾ ಅನ್ಯಾಯ ಮಾಡುತ್ತಾರೆ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಸಿದ್ದರಾಮಯ್ಯ ಈ ರಾಜ್ಯದಲ್ಲಿ ದೊಡ್ಡ ನಾಯಕರು ಯಾವುದೇ ಕಾರಣಕ್ಕೂ ಕೋಲಾರಕ್ಕೆ ಬರಲ್ಲ ಎಂದರು.

ನನ್ನ ವಿರುದ್ಧ ಸಿದ್ದರಾಮಯ್ಯ ಸ್ಪರ್ಧಿಸಿದರೆ ಜನರೇ ಉಗಿಯುತ್ತಾರೆ ಎಂದ ವರ್ತೂರ್ ಪ್ರಕಾಶ್

ಇನ್ನು ನಾನು ಅದೇ ಜಾತಿಯವನಾಗಿದ್ದು, ಒಂದು ವೇಳೆ ಬಂದರೂ ರಾಜ್ಯದ ಜನತೆ ಉಗಿಯುತ್ತಾರೆ ಎಂದರು. ರಮೇಶ್ ಕುಮಾರ್, ನಾರಾಯಣಸ್ವಾಮಿ ಸೇರಿದಂತೆ ಘಟಬಂಧನ್ ನಾಯಕರು ಸಿದ್ದರಾಮಯ್ಯ ಅವರನ್ನ ಗೋಗರೆಯುತ್ತಿದ್ದಾರೆ, ನಾನು ಗೆದ್ದರೆ ಅವರು ಏನಾಗುತ್ತದೆ ಎಂದು ಗೊತ್ತಿದೆ. ಹೀಗಾಗಿ ರಾತ್ರಿ ಹಗಲು ಕಷ್ಟಪಡುತ್ತಿದ್ದಾರೆ ಎಂದರು.

ಇದನ್ನೂ ಓದಿ : 224 ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸುವವನು ನಿಜವಾದ ನಾಯಕ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.