ETV Bharat / state

ಪದೇ ಪದೇ ಚುನಾವಣೆ ಬಂದರೆ ಎದುರಿಸಲು ಯಾವುದೇ ಪಕ್ಷ ಸಿದ್ದವಿಲ್ಲ: ಶಾಸಕ ಶ್ರೀನಿವಾಸ ಗೌಡ

author img

By

Published : Nov 21, 2019, 1:52 PM IST

ಕಳೆದ ಚುನಾವಣೆಯಲ್ಲಿ ನಾನು ಮಾಡಿರುವ ಸಾಲವೇ ಇನ್ನೂ ತೀರಿಸಲು ಆಗುತ್ತಿಲ್ಲ. ಒಂದು ವೇಳೆ ಈಗ ಏನಾದ್ರೂ ಚುನಾವಣೆ ಬಂದರೆ ನಾನಂತೂ ಚುನಾವಣೆ ಎದುರಿಸುವುದಿಲ್ಲ. ಚುನಾವಣೆಗೆ ನಮಸ್ಕಾರ ಹಾಕಿ ಮನೆಯಲ್ಲಿರುತ್ತೇನೆ. ಸುಮ್ಮನೆ ಭಾಷಣಗಳಲ್ಲಿ ಚುನಾವಣೆಗೆ ರೆಡಿ ಅಂತ ಹೇಳಬಹುದು, ಆದರೆ ಯಾವುದೇ ಪಕ್ಷದವರು ರೆಡಿ ಇಲ್ಲ ಎಂದು ಶಾಸಕ ಶ್ರೀನಿವಾಸ ಗೌಡ ಹೇಳಿದರು.

ಶಾಸಕ ಶ್ರೀನಿವಾಸಗೌಡ

ಕೋಲಾರ: ಪದೇ ಪದೇ ಚುನಾವಣೆಗೆ ಹೋಗುವುದಕ್ಕೆ ಯಾವುದೇ ಪಕ್ಷಗಳು ಸಿದ್ದ ಇಲ್ಲ, ಹೀಗಾಗಿ ಸರ್ಕಾರ ಉಳಿಯಬೇಕು ಯಾರೂ ಕೂಡ ಅವಸರಪಡಲು ಆಗುವುದಿಲ್ಲ ಎಂದು ಶಾಸಕ ಶ್ರೀನಿವಾಸ ಗೌಡ ಹೇಳಿದರು.

ಶಾಸಕ ಶ್ರೀನಿವಾಸಗೌಡ

ಕೋಲಾರದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನಾನು ಮಾಡಿರುವ ಸಾಲವೇ ಇನ್ನೂ ತೀರಿಸಲು ಆಗುತ್ತಿಲ್ಲ. ಒಂದು ವೇಳೆ ಈಗ ಏನಾದ್ರೂ ಚುನಾವಣೆ ಬಂದರೆ ನಾನಂತೂ ಚುನಾವಣೆ ಎದುರಿಸುವುದಿಲ್ಲ. ಚುನಾವಣೆಗೆ ನಮಸ್ಕಾರ ಹಾಕಿ ಮನೆಯಲ್ಲಿರುತ್ತೇನೆ. ಸುಮ್ಮನೆ ಭಾಷಣಗಳಲ್ಲಿ ಚುನಾವಣೆಗೆ ರೆಡಿ ಅಂತ ಹೇಳಬಹುದು, ಆದರೆ ಯಾವುದೇ ಪಕ್ಷದವರು ಸಿದ್ಧರಿಲ್ಲ. ಸರ್ಕಾರ ಉಳಿಯುತ್ತೋ ಇಲ್ಲವೋ ಎನ್ನುವುದು ಉಪಚುನಾವಣೆ ಫಲಿತಾಂಶದ ನಂತರ ಗೊತ್ತಾಗುತ್ತದೆ ಎಂದರು.

ಹೊಸಕೋಟೆ ಉಪಚುನಾವಣೆಯಲ್ಲಿ ಸಂಸದ ಬಚ್ಚೇಗೌಡ ಮಗನಿಗೆ ಕುಮಾರಸ್ವಾಮಿ ಬೆಂಬಲ ಸೂಚಿಸಿರುವ ಕುರಿತು ಮಾತನಾಡಿ, ಬಚ್ಚೇಗೌಡ ಅವರು ನನ್ನ ಆತ್ಮೀಯರಾಗಿದ್ದವರು, ಕುಮಾರಸ್ವಾಮಿ ಬೆಂಬಲ ನೀಡುವುದಾದರೆ ನನ್ನ ಬೆಂಬಲವೂ ಇರುತ್ತದೆ. ಹತ್ತು ವರ್ಷದ ಹಿಂದೆ ಬಿಜೆಪಿಯಿಂದ ಎಂಪಿ ಚುನಾವಣೆಯಲ್ಲಿ ಸ್ಪರ್ದಿಸುವ ಅವಕಾಶ ನನಗೆ ಸಿಕ್ಕಿತ್ತು. ಆಗ ದೆಹಲಿಯಲ್ಲಿ ಮಂತ್ರಿಯಾಗಿದ್ದ ಸುರೇಶ್ ಪ್ರಭು ಅವರು ಅಡ್ವಾಣಿ ಬಳಿ ಕರೆದುಕೊಂಡು ಹೋಗಿ ಟಿಕೆಟ್​ ಫೈನಲ್​ ಮಾಡಿದ್ದರು. ಅಂದು ಶಾಸಕರಾಗಿದ್ದ ಬಚ್ಚೇಗೌಡ ಹಾಗೂ ವಿಶ್ವನಾಥ್ ಇಬ್ಬರೂ ಮೊಬೈಲ್‌ ಸ್ವಿಚ್‌ಆಫ್ ಮಾಡಿಕೊಂಡು ಯಡಿಯೂರಪ್ಪ ಅವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಒಂದು ವೇಳೆ ಅವತ್ತು ಬಚ್ಚೇಗೌಡ ನನ್ನ ಬೆಂಬಲಿಸಿದ್ದರೆ, ನಾನು ಇಂದು ಸಂಸದನಾಗಿರುತ್ತಿದ್ದೆ ಎಂದು ಹೇಳಿದರು.

Intro:ಆಂಕರ್ : ಪದೇ ಪದೇ ಚುನಾವಣೆಗಳಿಗೆ ಹೋಗುವುದಕ್ಕೆ ಯಾವುದೇ ಪಾರ್ಟಿಗಳು ರೆಡಿ ಇಲ್ಲ, ಹೀಗಾಗಿ ಸರ್ಕಾರ ಉಳಿಯಬೇಕು ಯಾರೂ ಕೂಡ ಅವಸರಪಡಲು ಆಗುವುದಿಲ್ಲ ಎಂದು ಕೋಲಾರದಲ್ಲಿ ಶಾಸಕ ಶ್ರೀನಿವಾಸಗೌಡ ಅವರು ಹೇಳಿದ್ರು. Body:ಇಂದು ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ನಾನು ಮಾಡಿರುವ ಸಾಲವೇ ಇನ್ನು ತೀರಿಸಲು ಆಗುತ್ತಿಲ್ಲ, ಒಂದು ವೇಳೆ ಈಗೆನಾದ್ರೂ ಚುನಾವಣೆಗಳು ಬಂದರೆ ನಾನಂತೂ ಚುನಾವಣೆ ಎದುರಿಸುವುದಿಲ್ಲ ಎಂದರು. ಇನ್ನು ಚುನಾವಣೆಗಳು ಬಂದರೆ ಅದಕ್ಕೆ ನಮಸ್ಕಾರ ಹಾಕಿ ಮನೆಯಲ್ಲಿರುತ್ತೇನೆ, ಸುಮ್ಮನೆ ಭಾಷಣಗಳಲ್ಲಿ ಚುನಾವಣೆಗೆ ರೆಡಿ ಅಂತ ಹೇಳಬಹುದು ಆದರೆ ಯಾವುದೇ ಪಕ್ಷದವರು ಚುನಾವಣೆಗೆ ರೆಡಿ ಇಲ್ಲ ಎಂದು ಹೇಳಿದ್ರು. ಇನ್ನು ನಾನು ಎಲ್ಲರ ಬಳಿ ಆಗಾಗ ಮಾತನಾಡುತ್ತಿರುತ್ತೇನೆ, ಸರ್ಕಾರ ಉಳಿಯುತ್ತಾ ಇಲ್ಲವಾ ಎನ್ನುವುದು ಉಪಚುನಾವಣೆ ಫಲಿತಾಂಶದ ನಂತರ ನಿಜವಾದ ಮಾಹಿತಿ ಸಿಗುತ್ತದೆ, ಸುಮ್ಮ ಸುಮ್ಮನೆ ಭಾಷಣ ಮಾಡುವುದು ಸರಿಯಲ್ಲ ಎಂದರು. ಇನ್ನು ಹೊಸಕೋಟೆ ಉಪಚುನಾವಣೆಯಲ್ಲಿ ಕುಮಾರಸ್ವಾಮಿ, ಸಂಸದ ಬಜ್ಜೇಗೌಡ ಮಗನಿಗೆ ಬೆಂಬಲ ಸೂಚಿಸಿರುವುದರ ಕುರಿತು ಮಾತನಾಡಿದ ಅವರು, ಬಜ್ಜೆಗೌಡ ಅವರು ಆಗ ನನ್ನ ಆತ್ಮೀಯರಾಗಿದ್ದವರು, ಕುಮಾರಸ್ವಾಮಿ ಅವರು ಬೆಂಬಲ ನೀಡುತ್ತಿದ್ರೆ ನನ್ನ ಬೆಂಬಲವೂ ಇರುತ್ತದೆ ಎಂದರು. ಇನ್ನು ಹತ್ತು ವರ್ಷದ ಹಿಂದೆ ಬಿಜೆಪಿಯಿಂದ ಎಂಪಿ ಚುನಾವಣೆಯಲ್ಲಿ ಸ್ಪರ್ದಿಸುವ ಅವಕಾಶ ಸಿಕ್ಕಿತ್ತು, ಆಗ ದೆಹಲಿಯಲ್ಲಿ ಮಂತ್ರಿಯಾಗಿದ್ದ ಸುರೇಶ್ ಪ್ರಭು ಅವರು ಅಡ್ವಾಣಿ ಬಳಿ ಕರೆದುಕೊಂಡು ಹೋಗಿ ಟಿಕೆಟ್ ಕ್ಲಿಯರ್ ಮಾಡಿದ್ದರು. ಆದ್ರೆ ಅಂದು ಶಾಸಕರಾಗಿದ್ದ ಬಜ್ಜೇಗೌಡ ಹಾಗೂ ವಿಶ್ವನಾಥ್ ಇಬ್ಬರು ಮೊಬೈಲ್‌ಗಳನ್ನ ಸ್ವಿಚ್‌ಆಫ್ ಮಾಡಿಕೊಂಡು ಯಡಿಯೂರಪ್ಪ ಅವರ ನೆಟ್‌ವರ್ಕ್ಗೆ ಸಿಕ್ಕಿರಲಿಲ್ಲ, ಒಂದು ವೇಳೆ ಅವತ್ತು ಬಜ್ಜೇಗೌಡ ಅವರು ನನ್ನ ಬೆಂಬಲಿಸಿದ್ದರೆ ನಾನು ಎಂಪಿ ಆಗಿರುತ್ತಿದ್ದೆ ಎಂದರು.

Conclusion:ಅಲ್ಲದೆ ಇದೆಲ್ಲಾ ರಾಜಕಾರಣದಲ್ಲಿ ಇದ್ದದ್ದೆ, ಹಾಗಾಗಿ ರಾಜಕಾರಣದಲ್ಲಿ ಏನೇನೂ ಆಗುತ್ತದೆಯೋ ಹೇಳಲು ಆಗುವುದಿಲ್ಲ, ಮುಂದೆ ಸಂಸದ ಆಗುತ್ತೇನೆಂದು ಬಜ್ಜೇಗೌಡ ಅವರಿಗೆ ಅನಿಸಿರಬಹುದು ಹಾಗಾಗಿ ಅಂದು ನನ್ನ ಬಜ್ಜೇಗೌಡ ಅವರು ಬೆಂಬಲಿಸಿರಲಿಲ್ಲ ಎಂದರು.


ಬೈಟ್ ೧: ಕೆ.ಶ್ರೀನಿವಾಸಗೌಡ (ಶಾಸಕ ಕೋಲಾರ)
ಬೈಟ್ ೨: ಕೆ.ಶ್ರೀನಿವಾಸಗೌಡ (ಶಾಸಕ ಕೋಲಾರ)

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.