ETV Bharat / state

ಹಿಟ್​ ಅಂಡ್ ರನ್ ಕಾಯ್ದೆ: ವಿವಿಧ ಜಿಲ್ಲೆಗಳಲ್ಲಿ ಮುಂದುವರೆದ ಲಾರಿ ಮಾಲೀಕರ ಮುಷ್ಕರ

author img

By ETV Bharat Karnataka Team

Published : Jan 18, 2024, 4:13 PM IST

Updated : Jan 18, 2024, 6:16 PM IST

ಕೇಂದ್ರ ಸರ್ಕಾರದ ಹಿಟ್​ ಅಂಡ್ ರನ್ ಕಾಯ್ದೆ ವಿರೋಧಿಸಿ ವಿವಿಧ ಜಿಲ್ಲೆಯ ಲಾರಿ ಮಾಲೀಕರು ಹಾಗೂ ಚಾಲಕರು ಬಂದ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಧಾರವಾಡದಲ್ಲಿ ಲಾರಿ ಮಾಲೀಕರ ಪ್ರತಿಭಟನೆ
ಧಾರವಾಡದಲ್ಲಿ ಲಾರಿ ಮಾಲೀಕರ ಪ್ರತಿಭಟನೆ

ಕೋಲಾರ : ಕೇಂದ್ರ ಸರ್ಕಾರದ ಹಿಟ್ ಅಂಡ್ ರನ್ ಕಾಯ್ದೆಯನ್ನ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಲಾರಿ ಓನರ್ಸ್​ ಅಸೋಸಿಯೇಷನ್​ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ರಾಜ್ಯದಲ್ಲಿ ಬುಧವಾರ ಮಧ್ಯರಾತ್ರಿಯಿಂದಲೇ ಮುಷ್ಕರ ನಡೆಯುತ್ತಿದೆ. ಇದಕ್ಕೆ ವಿವಿಧ ಜಿಲ್ಲೆಗಳಲ್ಲಿಯೂ ಲಾರಿ ಮಾಲೀಕರು ಹಾಗೂ ಚಾಲಕರು ಬೆಂಬಲಿಸಿದ್ದಾರೆ.

ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಕೆಂಪೇಗೌಡ ವೃತ್ತದ ಬಳಿ, ರಸ್ತೆ ಪಕ್ಕದಲ್ಲಿಯೇ ಲಾರಿಗಳನ್ನ ನಿಲ್ಲಿಸಿ ಮುಷ್ಕರ ಕೈಗೊಂಡಿದ್ದಾರೆ. ಇನ್ನು ಬಂಗಾರಪೇಟೆ ಪಟ್ಟಣದಾದ್ಯಂತ ಲಾರಿ ಮಾಲೀಕರು, ಚಾಲಕರು ಯಾವುದೇ ವಹಿವಾಟು ನಡೆಸದೆ ಬಂದ್ ಮಾಡಿದ್ದಾರೆ‌. ಹಿಂದೆ ಹಿಟ್‌ ಅಂಡ್​ ರನ್‌ ಪ್ರಕರಣದಲ್ಲಿ 2 ವರ್ಷ ಜೈಲು ಮತ್ತು 1000 ರೂಪಾಯಿ ದಂಡ ವಿಧಿಸುತ್ತಿದ್ದರು. ಆದರೆ, ನೂತನ ಕಾಯ್ದೆಯಿಂದಾಗಿ ಚಾಲಕನಿಗೆ 10 ವರ್ಷ ಜೈಲು ಮತ್ತು 7 ಲಕ್ಷ ರೂಪಾಯಿಗಳ ದಂಡ ವಿಧಿಸಬಹುದು ಎನ್ನಲಾಗಿದೆ.

ಹೀಗಾಗಿ ಲಾರಿ ಮಾಲೀಕರು ಹಾಗೂ ಚಾಲಕರು ಹೊಸ ಕಾಯ್ದೆಯ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿ, ಮುಷ್ಕರ ನಡೆಸಿದ್ದಾರೆ. ಇನ್ನು ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಆಗಮಿಸಿ, ರಸ್ತೆ ಸಂಚಾರಕ್ಕೆ ಅಡೆತಡೆಯಾಗದಂತೆ ಕ್ರಮವಹಿಸಿದ್ದಾರೆ.

ಮೈಸೂರಿನಲ್ಲಿ ಬಂದ್​ಗೆ ವ್ಯಾಪಕ ಬೆಂಬಲ : ಮೈಸೂರು ಜಿಲ್ಲೆಯಲ್ಲಿ ಮುಷ್ಕರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ಬಂದ್​ಗೆ ಖಾಸಗಿ ಬಸ್ ಮಾಲೀಕರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಲಾರಿ ಮುಷ್ಕರದ ಬಗ್ಗೆ ಜಿಲ್ಲೆಯ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ. ಕೋದಂಡರಾಮ ವಿವರಿಸಿದ್ದಾರೆ.

ಇದು ಇಡೀ ಭಾರತ ದೇಶದಲ್ಲಿ ಚಾಲಕರಿಗೆ ಬಂದಿರುವ ಮರಣ ಕಾನೂನಾಗಿದ್ದು, ಅನಿರೀಕ್ಷಿತವಾಗಿ ಅಪಘಾತ ಆಗುತ್ತದೆ. ಆಗ ಚಾಲಕರಿಗೆ 10 ವರ್ಷ ಜೈಲು, 7 ಲಕ್ಷ ದಂಡ ವಿಧಿಸುವ ಇದು ಘೋರ ಕಾನೂನಾಗಿದೆ. ಇದನ್ನು ಕೂಡಲೇ ಹಿಂಪಡೆಯಬೇಕು. ಇದೊಂದು ಅಂಧ ಕಾನೂನಾಗಿದೆ. ಇದನ್ನು ವಾಪಸ್ ಪಡೆಯುವವರೆಗೆ ಮುಷ್ಕರ ನಿಲ್ಲಿಸುವುದಿಲ್ಲ ಎಂದಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ 6 ಸಾವಿರ ಲಾರಿ, 3 ಸಾವಿರ ಮಿನಿ ಟೆಂಪೋಗಳು ಇವೆ. ಎಲ್ಲರೂ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೆಲವು ಚಾಲಕರು ಈ ಕಾನೂನನ್ನು ವಿರೋಧಿಸಿ, ತಮ್ಮ ಚಾಲನೆ ಪರವಾನಗಿಯನ್ನು ಸುಟ್ಟು ಹಾಕಿದ್ದಾರೆ ಎಂದು ಅವರು ವಿವರಿಸಿದರು.

ಶಿವಮೊಗ್ಗದಲ್ಲಿ ಲಾರಿ ತಡೆದು ಪ್ರತಿಭಟನೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ವಾಹನ ಕಾಯ್ದೆ ಜಾರಿ ಮಾಡಿರುವುದನ್ನು ಖಂಡಿಸಿ, ಲಾರಿ ಚಾಲಕರ ಸಂಘದವರು ಸಂಚರಿಸುತ್ತಿದ್ದ ಗೂಡ್ಸ್ ವಾಹನಗಳನ್ನು ತಡೆದು ನಿಲ್ಲಿಸಿ, ತಮ್ಮ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಶಿವಮೊಗ್ಗ ಹೊರವಲಯ ಹರಿಗೆ ಬಳಿ ನಗರಕ್ಕೆ ಬರುತ್ತಿದ್ದ ಲಾರಿಗಳನ್ನು ತಡೆದು ಆಕ್ರೋಶ ಹೊರ ಹಾಕಿದ್ದಾರೆ.

ಲಾರಿ ಚಾಲಕರ ಸಂಘದ ಅಧ್ಯಕ್ಷ ಸೈಯದ್ ಆದಿಲ್ ಅವರು ಮಾತನಾಡಿದರು

ಪ್ರತಿಭಟನೆಯ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಶಿವಮೊಗ್ಗ ಜಿಲ್ಲಾ ಲಾರಿ ಚಾಲಕರ ಸಂಘದ ಅಧ್ಯಕ್ಷ ಸೈಯದ್ ಆದಿಲ್ ಅವರು, ಕೇಂದ್ರ ಜಾರಿಗೆ ತಂದಿರುವ ನೂತನ ಪಿನಲ್ ಕೋಡ್​ನಲ್ಲಿ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಚಾಲಕರಿಗೆ ಭಾರಿ ಹೊರೆ ಬೀಳುವಂತಾಗಿದೆ. ನಮ್ಮ ಲಾರಿ ಚಾಲಕರ ಸಂಘದವರು ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಅನಿರ್ದಿಷ್ಷಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಷ್ಕರವನ್ನು ನಿನ್ನೆಯಿಂದ ಪ್ರಾರಂಭಿಸಿದ್ದೇವೆ. ನಿನ್ನೆ ಸಾಂಕೇತಿಕವಾಗಿ ಪ್ರತಿಭಟನೆಯನ್ನು ನಡೆಸಿದ್ದೆವು. ಎಲ್ಲ ಚಾಲಕರು ತಮ್ಮ ತಮ್ಮ ಊರುಗಳಿಗೆ ವಾಪಸ್ ಆಗಲಿ ಎಂದು ಕಾಲಾವಕಾಶ ನೀಡಿದ್ದೆವು. ಇದರಿಂದ ಇಂದು ನಮ್ಮ ಶಿವಮೊಗ್ಗದಲ್ಲಿ ಲಾರಿಗಳನ್ನು ನಿಲ್ಲಿಸಿ ಅವರಿಗೆ ಕಾಯ್ದೆಯ ಅಪಾಯದ ಬಗ್ಗೆ ತಿಳಿಸಿ ನಮ್ಮ ಪ್ರತಿಭಟನೆಗೆ ಬೆಂಬಲ ನೀಡಿ ಎನ್ನುತ್ತಿದ್ದೇವೆ. ಹಿಂದೆ 2 ವರ್ಷ ಶಿಕ್ಷೆ ಹಾಗೂ 2 ಲಕ್ಷ ದಂಡ ವಿಧಿಸಲಾಗುತ್ತಿತ್ತು. ಆದರೆ, ನೂತನ ಕಾಯ್ದೆಯ ಪ್ರಕಾರ, ದಂಡ 5 - 7 ಲಕ್ಷ ಏರಿಕೆ ಮಾಡಲಾಗಿದೆ. ಅಲ್ಲದೇ 7 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಹೇಳಿದರು.

ಲಾರಿ ಚಾಲಕರ ಸಂಘದಿಂದ ರಾಷ್ಟ್ರಪತಿ ಅವರಿಗೆ ಮನವಿ: ಇ - ಚಲನ್ ಕಾಯ್ದೆ ಮತ್ತು ಹಿಟ್ ಅಂಡ್ ರನ್ ಕಾನೂನು ತಿದ್ದುಪಡಿಗೆ ವಿರೋಧಿಸಿ, ಲಾರಿ ಚಾಲಕರು ಹಾಗೂ ಮಾಲೀಕರು ಹುಬ್ಬಳ್ಳಿ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ದುರ್ಗದ ಬೈಲಿನಿಂದ ಮಿನಿ ವಿಧಾನ‌ಸೌಧದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ಕಾಯ್ದೆ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಆಟೋ ಚಾಲಕರ ಸಂಘದ ಅಧ್ಯಕ್ಷ ಬಾಬಾಜಾನ್ ಮುಧೋಳ ಅವರು ಮಾತನಾಡಿದರು

ಇದೇ ವೇಳೆ ಮಾತನಾಡಿದ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ರವೀಂದ್ರ ಬೆಳಂಕರ, ಈಗಾಗಲೇ ನಾವು ಅರ್ನಿಧಿಷ್ಟಾವಧಿ ಲಾರಿ ಮುಷ್ಕರ ಕೈಗೊಂಡಿದ್ದೇವೆ.‌ ಹೈಟ್ ಮತ್ತು ಡೋರ್ ಓಪನ್​ಗೆ ಇದ್ದ 500 ರೂಪಾಯಿ ದಂಡ 20 ಸಾವಿರಕ್ಕೆ ಏರಿಕೆ, ಹಿಟ್ ಆ್ಯಂಡ್ ರನ್ ಪ್ರಕರಣಗಳಿಗೆ ಹತ್ತು ವರ್ಷ ಜೈಲು, ಏಳು ಲಕ್ಷ ದಂಡದ ನಿಯಮಗಳು, ವಾಹನ ಚಾಲಕರಿಗೆ ಹಾಗೂ ಮಾಲೀಕರಿಗೆ ಕರಾಳ ಶಾಸನಗಳಾಗಿವೆ. ದೇಶದ ಆರ್ಥಿಕತೆಗೆ ಜೀವನಾವಶ್ಯಕ ವಸ್ತುಗಳನ್ನು ಸಾಗಿಸಲು ಚಾಲಕ ಹಗಲಿರುಳು ದುಡಿಯುತ್ತಾನೆ. ಆದರೆ ಅಂತವರಿಗೆ ಮರಣ ಶಾಸನವನ್ನು ಜಾರಿಗೆ ತರಲಾಗಿದೆ.

ಚಾಲಕ ದುಡಿಯುವ ಸಂಬಳದಿಂದ 7 ಲಕ್ಷ ದಂಡ ಕಟ್ಟಲು ಸಾಧ್ಯವೇ ಇಲ್ಲ. ಕಳೆದು ಮೂರು ದಿನದಿಂದ ಲಾರಿ ಚಾಲಕರು ಸ್ವಯಂ ಪ್ರೇರಿತವಾಗಿ, ಯಾವುದೇ ಗೂಡ್ಸ್ ರವಾನಿಸದೆ, ಸ್ಟೇರಿಂಗ್ ಛೋಡೋ ಆಂದೋಲನ ಆರಂಭಿಸಿದ್ದಾರೆ. ಈ ಕಾನೂನು ಹಿಂಪಡೆಯುವರೆಗೂ ಈ ಹೋರಾಟ ಮುಂದುವರೆಸುತ್ತೇವೆಂದು ಎಚ್ಚರಿಕೆ ಕೊಟ್ಟಿದ್ದಾರೆ. ಈ‌ ಮಾರಕ ಕಾನೂನು ಹಿಂದಕ್ಕೆ ಪಡೆಯುವವರೆಗೂ ನಮ್ಮ ಹೋರಾಟ ‌ಮುಂದುವರೆಯಲಿದೆ ಎಂದು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ‌

ಇದನ್ನೂ ಓದಿ : ಹಿಟ್​ ಅಂಡ್​ ರನ್ ಕೇಸ್​​ ಶಿಕ್ಷೆ, ದಂಡ ನಿಯಮ ಪರಿಷ್ಕರಣೆ ಭರವಸೆ: ಲಾರಿ ಮಾಲೀಕರ ಮುಷ್ಕರ ಅಂತ್ಯ

Last Updated : Jan 18, 2024, 6:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.