ETV Bharat / state

ಮುನಿಯಪ್ಪ ಅವರನ್ನ ನಾನು ಹದ್ದಾಗಿ ಕುಕ್ಕಿರುವುದು ನಿಜ: ಶ್ರೀನಿವಾಸಗೌಡ

author img

By

Published : Sep 26, 2019, 4:08 PM IST

ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮಾದ್ಯಮದವರೊಂದಿಗೆ ಮಾತನಾಡಿದ ಶಾಸಕ ಶ್ರೀನಿವಾಸಗೌಡ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್. ಮುನಿಯಪ್ಪ ಅವರನ್ನ ಸೋಲಿಸಿದ್ದು ನಿಜ. ಜೊತೆಗೆ ಸಿದ್ದರಾಮಯ್ಯ ಹೇಳಿದಂತೆ ಹದ್ದಾಗಿ ಕುಕ್ಕಿರುವುದು ನಿಜ ಎಂದಿದ್ದಾರೆ.

ಕೋಲಾರ ಶಾಸಕ ಶ್ರೀನಿವಾಸಗೌಡ

ಕೋಲಾರ: ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಅವರನ್ನ ನಾನು ಹದ್ದಾಗಿ ಕುಕ್ಕಿರುವುದು ನಿಜ ಎಂದು ಕೋಲಾರದಲ್ಲಿ ಶಾಸಕ ಶ್ರೀನಿವಾಸಗೌಡ ಅವರು ಹೇಳಿದ್ದಾರೆ.

ಇಂದು ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್. ಮುನಿಯಪ್ಪ ಅವರನ್ನ ಸೋಲಿಸಿದ್ದು ನಿಜ. ಜೊತೆಗೆ ಹದ್ದಾಗಿ ಕುಕ್ಕಿರುವುದು ನಿಜ ಎಂದು ನೇರವಾಗಿ ಉತ್ತರಿಸಿದ್ರು.

ಮುನಿಯಪ್ಪ ಅವರನ್ನ ನಾನು ಹದ್ದಾಗಿ ಕುಕ್ಕಿರುವುದು ನಿಜ

ಇನ್ನು ನನ್ನನ್ನ ಎರಡು ಸಲ ಸೋಲುವಂತೆ ಕೆ.ಎಚ್. ಮುನಿಯಪ್ಪ ಅವರು ಮಾಡಿದ್ದರು, ಹೀಗಾಗಿ ನಾನು ಬಿಜೆಪಿಯೊಂದಿಗೆ ಕೈ ಜೋಡಿಸಿ ಸೋಲಿಸಿದ್ದೇನೆ ಎಂದರು. ಅಲ್ಲದೇ ಮುನಿಯಪ್ಪ ಅವರನ್ನ ಸೋಲಿಸುವುದಕ್ಕೆ ಏನೇನು ಪ್ರಯತ್ನ ಬೇಕೋ ಅದೆಲ್ಲವನ್ನೂ ಮಾಡಿದ್ದೇನೆ ಎಂದರು.

ಕೋಲಾರ ಕ್ಷೇತ್ರದಲ್ಲಿ ಪ್ರತಿಯೊಂದು ಹಳ್ಳಿಗೂ ಹೋಗಿ ಅವರ ವಿರುದ್ಧ ಪ್ರಚಾರ ನಡೆಸಿದ್ದೇನೆಂದು ತಿಳಿಸಿದ್ರು. ಇನ್ನು ಈ ವಿಚಾರವನ್ನ ಹೇಳುವುದಕ್ಕೆ ಯಾವುದೇ ಭಯ ಭಕ್ತಿ ಇಲ್ಲ, ಸಿದ್ದರಾಮಯ್ಯ ಹೇಳಿದಂತೆ ನಾನು ಹದ್ದಾಗಿ ಕುಕ್ಕಿದ್ದೇನೆಂದರು.

Intro:ಕೋಲಾರ
ದಿನಾಂಕ - 26-09-19
ಸ್ಲಗ್ - ಹದ್ದಾಗಿ ಕುಕ್ಕಿದ್ದೇನೆ
ಫಾರ್ಮೆಟ್ - ಎವಿಬಿ




ಆಂಕರ್ : ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರನ್ನ ನಾನು ಹದ್ದಾಗಿ ಕುಕ್ಕಿರುವುದು ನಿಜ ಎಂದು ಕೋಲಾರದಲ್ಲಿ ಶಾಸಕ ಶ್ರೀನಿವಾಸಗೌಡ ಅವರು ಹೇಳಿದ್ರು. ಇಂದು ಕೋಲಾರದ ಜಿಲ್ಲಾಧಿಕಾರಿಗಳ ಕಛೇರಿ ಬಳಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಅವರನ್ನ ಸೋಲಿಸಿದ್ದು ನಿಜ ಜೊತೆಗೆ ಹದ್ದಾಗಿ ಕುಕ್ಕಿರುವುದು ನಿಜ ಎಂದು ನೇರವಾಗಿ ಉತ್ತರಿಸಿದ್ರು. ಇನ್ನು ನನ್ನನ್ನ ಎರಡು ಸಲ ಸೋಲುವಂತೆ ಕೆ.ಎಚ್.ಮುನಿಯಪ್ಪ ಮಾಡಿದ್ದ, ಹೀಗಾಗಿ ನಾನು ಬಿಜೆಪಿಯೊಂದಿಗೆ ಕೈ ಜೋಡಿಸಿ ಸೋಲಿಸಿದ್ದೇನೆ ಎಂದರು. ಅಲ್ಲದೆ ಮುನಿಯಪ್ಪ ಅವರನ್ನ ಸೋಲಿಸುವುದಕ್ಕೆ ಏನೇನು ಪ್ರಯತ್ನ ಬೆಕೋ ಅದೆಲ್ಲವನ್ನೂ ಮಾಡಿದ್ದೇನೆ, ಕೋಲಾರ ಕ್ಷೇತ್ರದಲ್ಲಿ ಪ್ರತಿಯೊಂದು ಹಳ್ಳಿಗೂ ಹೋಗಿ ಅವರ ವಿರುದ್ದ ಪ್ರಚಾರ ನಡೆಸಿದ್ದೇನೆಂದು ತಿಳಿಸಿದ್ರು. ಇನ್ನು ಈ ವಿಚಾರವನ್ನ ಹೇಳುವುದಕ್ಕೆ ಯಾವುದೇ ಭಯ ಭಕ್ತಿ ಇಲ್ಲ, ಸಿದ್ದರಾಮಯ್ಯ ಹೇಳಿದಂತೆ ನಾನು ಹದ್ದಾಗಿ ಕುಕ್ಕಿದ್ದೇನೆಂದರು.
ಬೈಟ್ 1: ಶ್ರೀನಿವಾಸ ಗೌಡ (ಶಾಸಕ ಕೋಲಾರ)
ಕೋಲಾರ
ದಿನಾಂಕ - 26-09-19
ಸ್ಲಗ್ - ನೋ ಬಂದ್
ಫಾರ್ಮೆಟ್ - ಎವಿ



ಆಂಕರ್ : ಪ್ರಗತಿಪರ ಸಂಘಟನೆಗಳಿಂದ ನಾಳೆ ಕರೆ ನೀಡಲಾಗಿದ್ದ ಕೋಲಾರ ಬಂದ್‍ನ್ನ ಮುಂದೂಡಲಾಗಿದೆ. ಕೋಲಾರ ನಗರದಲ್ಲಿನ ರಸ್ತೆ ಕಾಮಗಾರಿಗಳಿಗೆ ಈ ಹಿಂದೆ ಬಿಡುಗಡೆಯಾಗಿದ್ದ ಅನುದಾನವನ್ನ ಈಗಿನ ಸರ್ಕಾರ ರದ್ದುಗೊಳಿಸಿರುವ ಹಿನ್ನಲೆ, ಪ್ರಗತಿಪರ ಸಂಘಟನೆಗಳು ನಾಳೆ ಕೋಲಾರ ಬಂದ್‍ಗೆ ಕರೆ ನೀಡಲಾಗಿತ್ತು. ಈ ಹಿನ್ನಲೆ ಇಂದು ಶಾಸಕ ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಕೋಲಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಿದ್ದು, ಕೋಲಾರ ನಗರ ಅಭಿವೃದ್ದಿಗಾಗಿ ರದ್ದುಪಡಿಸಿರುವ ಕಾಮಗಾರಿಗಳ ಅನುದಾನವನ್ನ, ಒಂದು ತಿಂಗಳ ಒಳಗೆ ಬಿಡುಗಡೆಗೊಳಿಸಬೇಕೆಂದು ಸರ್ಕಾರಕ್ಕೆ ಸಂಘಟನೆಗಳ ಮುಖಂಡರು ಗಡುವು ನೀಡಿದ್ರು. ಅಲ್ಲದೆ ರದ್ದಾಗಿರುವ ಅನುದಾನ ಒಂದು ತಿಂಗಳಲ್ಲಿ ಬಿಡುಗಡೆ ಮಾಡಿಸುವ ಜವಾಬ್ದಾರಿಯನ್ನ ಶಾಸಕ ಶ್ರೀನಿವಾಸಗೌಡ ಒಪ್ಪಿಕೊಂಡ ಪರಿಣಾಮ ಕೋಲಾರ ಬಂದ್‍ನ್ನ ಮುಂದೂಡಲಾಯಿತು. ಇನ್ನು ಇದೇ ವೇಳೆ ಜಿಲ್ಲಾಧಿಕಾರಿ ಮಂಜುನಾಥ್, ಎಸ್ಪಿ ಕಾರ್ತಿಕ್ ರೆಡ್ಡಿ ಸೇರಿದಂತೆ ಸಂಘಟನೆಗಳ ಮುಖಂಡರು ಹಾಜರಿದ್ರು.
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.