ETV Bharat / state

ವಿಸ್ಟ್ರಾನ್ ಕಂಪನಿ ಪುನರಾರಂಭಕ್ಕೆ ಸಿದ್ಧತೆ: ಸಚಿವ ಜಗದೀಶ್ ಶೆಟ್ಟರ್ ಪರಿಶೀಲನೆ

author img

By

Published : Mar 10, 2021, 7:56 PM IST

ಹಲವು ಬೆಳವಣಿಗೆಗಳ ನಂತರ ಮತ್ತೆ ವಿಸ್ಟ್ರಾನ್ ಕಂಪನಿ ಪುನರಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಕಂಪನಿಯಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿ, ಕೋಲಾರ ಜಿಲ್ಲಾಧಿಕಾರಿ ಸೆಲ್ವಮಣಿ ಹಾಗು ಕಂಪನಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

Industry Minister Jagdish Shettar visit to Wistron Company
ವಿಸ್ಟ್ರಾನ್ ಕಂಪನಿ ಪುನರಾರಂಭಕ್ಕೆ ಸಿದ್ದತೆ

ಕೋಲಾರ: ಕಾರ್ಮಿಕರ ಗಲಭೆಯಿಂದಾಗಿ ಸ್ಥಗಿತಗೊಂಡಿದ್ದ ವಿಸ್ಟ್ರಾನ್ ಕಂಪನಿ ಪುನರಾರಂಭಕ್ಕೆ ಕೆಲಸ ಶುರುವಾಗಿದ್ದು, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಸ್ಟ್ರಾನ್ ಕಂಪನಿ ಪುನರಾರಂಭ ಕುರಿತಾಗಿ ಸಚಿವ ಶೆಟ್ಟರ್ ಸಭೆ

ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಕಂಪನಿ ಕಳೆದ ಡಿಸೆಂಬರ್​​ನಲ್ಲಿ ವೇತನ ಸರಿಯಾಗಿ ನೀಡದ ಕಾರಣ ಕಾರ್ಮಿಕರು ಕಂಪನಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದರು. ಇದಾದ ನಂತರ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸಲಾಗಿತ್ತು. ಜೊತೆಗೆ ಕಂಪನಿಯ ಕೆಲ ಅಧಿಕಾರಿಗಳನ್ನೂ ಕೆಲಸದಿಂದ ತೆಗೆದುಹಾಕಲಾಗಿತ್ತು.‌

ಇದನ್ನೂ ಓದಿ: ಪ್ರಚಾರದ ವೇಳೆ ಬಂಗಾಳ ಸಿಎಂ ಕಾಲಿಗೆ ಗಾಯ; ಅನುಕಂಪ ಗಿಟ್ಟಿಸುವ ನಾಟಕ ಎಂದ ಬಿಜೆಪಿ

ಹಲವಾರು ಬೆಳವಣಿಗೆಗಳ ನಂತರ ಮತ್ತೆ ಕಂಪನಿ ಪುನರಾರಂಭಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇವತ್ತು ಸಚಿವ ಜಗದೀಶ್ ಶೆಟ್ಟರ್ ವಿಸ್ಟ್ರಾನ್‌ನಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿ, ಕೋಲಾರ ಜಿಲ್ಲಾಧಿಕಾರಿ ಸೆಲ್ವಮಣಿ ಹಾಗು ಕಂಪನಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.