ಅಕ್ರಮವಾಗಿ ಗಾಂಜಾ ಸಾಗಾಟ: ಒಬ್ಬನನ್ನು ಬಂಧಿಸಿದ ಗಲ್​ಪೇಟೆ ಪೊಲೀಸರು

author img

By

Published : Sep 15, 2021, 9:31 AM IST

kolar

ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಕೋಲಾರದ ಗಲ್​ಪೇಟೆ ಪೊಲೀಸರು ಬಂಧಿಸಿದ್ದಾರೆ.

ಕೋಲಾರ: ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಇಲ್ಲಿನ ಗಲ್​ಪೇಟೆ ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ, 32 ಲಕ್ಷ ರೂ. ಮೌಲ್ಯದ ಸುಮಾರು 90 ಕೆಜಿ ಒಣ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ.

ಕೋಲಾರದ ವ್ಯಕ್ತಿಗೆ ಮಾರಾಟ ಮಾಡಲು ತಂದಿದ್ದ ವೇಳೆ ಮಾಹಿತಿ ಪಡೆದ ಗಲ್​ಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನ ಬಂಧಿಸಿದ್ದಾರೆ. ಇನ್ನು ಕೋಲಾರ ಹೊರವಲಯದ ಟಮಕ ಅಗ್ನಿಶಾಮಕ ದಳದ ಕಚೇರಿ ಬಳಿ ಇರುವಂತಹ ಹಳೆಯ ಗ್ರಾನೈಟ್ ಫ್ಯಾಕ್ಟರಿ ಮುಂಭಾಗ ಈ ಗಾಂಜಾಗಳನ್ನು ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಗಲ್​ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.