ಕೋಲಾರಲ್ಲಿ ಐದು ದಿನ ಪ್ರಗತಿ ಪರಿಶೀಲನೆ ಮಾಡುತ್ತೇನೆ, ಆರೋಪಗಳಿಗೆ ಹೆದರುವುದಿಲ್ಲ: ಮುನಿರತ್ನ

author img

By

Published : Sep 28, 2022, 3:40 PM IST

check the progress report in Kolar for five days said Munirathna

ನನ್ನ ವಿರುದ್ಧ ಆಧಾರವಿಲ್ಲದೇ ಆರೋಪಗಳನ್ನು ಮಾಡಲಾಗಿದೆ. ಯಾರೇ ತಪ್ಪು ಮಾಡಿದರು ಹೆದರುವುದಿಲ್ಲ, ಇದರಲ್ಲಿ ಯಾರೇ ಇದ್ದರೂ ಬಿಡುವ ಮಾತೇ ಇಲ್ಲ ಎಂದು ಎಚ್ಚರಿಕೆ ನೀಡಿದರು. ಇನ್ನೂ ಗುತ್ತಿಗೆದಾರರ ಸಂಘದ 19 ಜನರನ್ನು ಪಾರ್ಟಿ ಮಾಡಿ, ಕ್ರಿಮಿನಲ್ ಪ್ರಕರಣ ದಾಖಲು ಮಾಡಿ 50 ಕೋಟಿ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ ಎಂದು ಸಚವ ಮುನಿರತ್ನ ಹೇಳಿದರು.

ಕೋಲಾರ: ಇಲ್ಲಿನ ಗುತ್ತಿಗೆ ವಿಚಾರದ ಆರೋಪಕ್ಕೆ ಆಧಾರವಿಲ್ಲ ಅದಕ್ಕೆ ಹೆದರುವುದಿಲ್ಲ. ಕಾಮಗಾರಿಯಲ್ಲಿ ಅಕ್ರಮ ನಡೆದಿದ್ದರೆ ಬಿಡುವ ಮಾತೇ ಇಲ್ಲ. ಮುಂದಿನ ತಿಂಗಳು 5 ದಿನಗಳ ಕಾಲ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನೆ ಮಾಡುತ್ತೇನೆ. ಮಾಧ್ಯಮ, ಜನರು ಮತ್ತು ಗುತ್ತಿಗೆದಾರರ ಎದುರೇ ನಡೆಯಲಿದೆ ಎಂದು ಕೋಲಾರ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳು 10 ನೇ ತಾರೀಖಿನಿಂದ ಜಿಲ್ಲೆಯಲ್ಲಿ 5 ದಿನಗಳ ಕಾಲ ಕಳಪೆ ರಸ್ತೆಗಳು ಸೇರಿದಂತೆ ಜಿಲ್ಲೆಯ ಪ್ರಗತಿ ಪರಿಶೀಲನೆ ಮಾಡುತ್ತೇನೆ. ಯಾವುದೇ ಕಳಪೆ ಸೇರಿದಂತೆ ಅಭಿವೃದ್ದಿಗೆ ಮಾರಕವಾದ ಯಾರನ್ನೂ ಸಹ ಬಿಡುವುದಿಲ್ಲ. ಈ ಹಿಂದೆ ಕೋಲಾರದಲ್ಲಿ ಕಳಪೆ ಕಾಮಗಾರಿ ವೀಕ್ಷಣೆ ಮಾಡುವುದಾಗಿ ಹೇಳಿದ ಬಳಿಕ ಪರ್ಸಂಟೇಜ್ ಆರೋಪ ಕೇಳಿ ಬಂದಿತ್ತು. ಆದರೆ, ಈ ಬಾರಿ ಜಿಲ್ಲೆಯ ಎಲ್ಲ ಅಧಿಕಾರಿಗಳು ಸೇರಿದಂತೆ ಹಿಂದಿನ, ಇಂದಿನ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿ, ಗುತ್ತಿಗೆದಾರರ ನೇತೃತ್ವದಲ್ಲಿ ಪರಿಶೀಲನೆ ನಡೆಯಲಿದೆ ಎಂದರು.

ಕೋಲಾರಲ್ಲಿ ಐದು ದಿನ ಪ್ರಗತಿ ಪರಿಶೀಲನೆ ಮಾಡುತ್ತೇನೆ ಎಂದು ಮುನಿರತ್ನ ಹೇಳಿದರು

50 ಕೋಟಿ ಮಾನನಷ್ಟ ಮೊಕದ್ದಮೆ : ನನ್ನ ವಿರುದ್ಧ ಆಧಾರವಿಲ್ಲದೇ ಆರೋಪಗಳನ್ನು ಮಾಡಲಾಗಿದೆ. ಯಾರೇ ತಪ್ಪು ಮಾಡಿದರು ಹೆದರುವುದಿಲ್ಲ, ಇದರಲ್ಲಿ ಯಾರೇ ಇದ್ದರೂ ಬಿಡುವ ಮಾತೇ ಇಲ್ಲ ಎಂದು ಎಚ್ಚರಿಕೆ ನೀಡಿದರು. ಇನ್ನೂ ಗುತ್ತಿಗೆದಾರರ ಸಂಘದ 19 ಜನರನ್ನು ಪಾರ್ಟಿ ಮಾಡಿ, ಕ್ರಿಮಿನಲ್ ಪ್ರಕರಣ ದಾಖಲು ಮಾಡಿ 50 ಕೋಟಿ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ ಎಂದರು.

ಇದನ್ನೂ ಓದಿ : ಅಸ್ಪೃಶ್ಯತೆ ನಿವಾರಣೆಗೆ ಇಡೀ ರಾಜ್ಯದಲ್ಲಿ ಆಂದೋಲನ ಮಾಡಲಾಗುವುದು: ಕೋಟ ಶ್ರೀನಿವಾಸ ಪೂಜಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.