ETV Bharat / state

ಫೇಮಸ್​ ಆಗಲು ಲಾಂಗು-ಮಚ್ಚು ಹಿಡಿದು ರೀಲ್ಸ್​ ಮಾಡಿದ್ರೆ ಜೈಲೂಟವೇ ಗತಿ

ಲಾಂಗು ಮಚ್ಚು ಹಿಡಿದು ರೀಲ್ಸ್​ ಮಾಡಿದ ಯುವಕರನ್ನು ಬಂಧಿಸಿದ ಕೋಲಾರ ಪೊಲೀಸರು.

ಲಾಂಗು-ಮಚ್ಚು ಹಿಡಿದು ರೀಲ್ಸ್ ಮಾಡಿದ ಯುವಕರ ಬಂಧನ

author img

By ETV Bharat Karnataka Team

Published : Nov 23, 2023, 4:46 PM IST

ಕೋಲಾರ: ಲಾಂಗು,​ ಮಚ್ಚು ಹಿಡಿದು ರೀಲ್ಸ್​ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ​ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್​ ಆಗಲು ಲಾಂಗ್ ಮತ್ತು ಮಚ್ಚು ಹಿಡಿದು ವೀಡಿಯೋಗಳನ್ನು ಮಾಡಿ ಹರಿಬಿಟ್ಟಿರುವ ಯುವಕರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಇಲ್ಲಿಯ ನರಸಾಪುರದ ವೇಣು ಮತ್ತು ಪವನ್ ಕುಮಾರ್ ಎಂಬ ಇಬ್ಬರು ಯುವಕರನ್ನು ಇದೇ ವಿಚಾರದಲ್ಲಿ ಬಂಧಿಸಲಾಗಿತ್ತು. ಇಂದು ಮಂಜುನಾಥ್ ಹಾಗೂ ನವೀನ್ ಕುಮಾರ್ ಎಂಬ ಇಬ್ಬರು ಯುವಕರನ್ನು ಅಕ್ರಮ ಶಸ್ತಾಸ್ತ್ರ ಕಾಯ್ದೆ ಪ್ರಕರಣದಡಿಯಲ್ಲಿ ಬಂಧಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯುವಕರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದನ್ನು ತಡೆಗಟ್ಟುವ ದೃಷ್ಟಿಯಿಂದ ಪೊಲೀಸರು ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಜತೆಗೆ ಕೋಲಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸಾಮಾಜಿಕ ಜಾಲತಾಣದ ಮೇಲೂ ಪೊಲೀಸರು ನಿಗಾ ಇಟ್ಟಿದ್ದು, ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ಪ್ರಕರಣ ಹಾಗೂ ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಈ ಮೂಲಕ ಕೋಲಾರ ಜಿಲ್ಲಾ ಪೊಲೀಸರು ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಕಾನೂನುಅನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿದೆ.

ಶಿವಮೊಗ್ಗದಲ್ಲೂ ಇಂತಹದ್ದೇ ಘಟನೆ: ಇತ್ತೀಚೆಗೆ ಶಿವಮೊಗ್ಗದ ಭದ್ರಾವತಿ ತಾಲೂಕಿನ ಅರಕರೆ ಗ್ರಾಮದಲ್ಲಿ ಗಣಪತಿ ಯುವಕನೋರ್ವ ಕೈಯಲ್ಲಿ ಲಾಂಗು​ ಹಿಡಿದು ಡ್ಯಾನ್ಸ್​ ಮಾಡಿದ ರೀಲ್ಸ್​ ಸೋಶಿಯಲ್​ ಮೀಡಿಯಾದಲ್ಲಿ ಹರಿವಿಟ್ಟಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಹೊಳೆಹೊನ್ನೂರು ಪೊಲೀಸರು ಆತನನ್ನು ಠಾಣೆಗೆ ಕರಿಯಿಸಿ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದರು.

ಢಾಬಾಗಳ ಮೇಲೆ ದಾಳಿ ಪ್ರಕರಣ: 11ಗಂಟೆಯಾದರೂ ಢಾಬಾಗಳಲ್ಲಿ ಗ್ರಾಹಕರಿಗೆ ಕುಡಿಯಲು ಅವಕಾಶ ನೀಡಿದ ಡಾಬಾ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಕೋಲಾರ ನಗರದ ಹೊರವಲಯದ ಟಮಕ ಬಳಿ ಇರುವ ಹಲವು ಢಾಬಾಗಳ ಮೇಲೆ ದಾಳಿ ಮಾಡಿದ ಕೋಲಾರ ಪೊಲೀಸರು ರಾತ್ರಿ ಹನ್ನೆರೆಡು ಗಂಟೆಯಾದರೂ ಢಾಬಾದಲ್ಲಿ ಕುಳಿತು ಕುಡಿಯುತ್ತಿದ್ದವರಿಗೆ ಚಳಿ ಬಿಡಿಸಿದ್ದಾರೆ. ಅಲ್ಲದೆ ಮಾಲೀಕರಿಗೂ ಎಚ್ಚರಿಕೆ ನೀಡಿದ್ದಾರೆ. ಜತೆಗೆ ಢಾಬಾಗಳಲ್ಲಿ ಮದ್ಯ ಕೂಟ ಮಾಡುತ್ತಿದ್ದವರ ವಿರುದ್ಧ ಕೋಲಾರ ಎಸ್ಪಿ ನಾರಾಯಣ ಅವರ ಸೂಚನೆಯಂತೆ ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: VIDEO: ಬೈಕ್​ ಮೇಲೆ ನಿಂತು ರೀಲ್ಸ್​ ಮಾಡುವಾಗ ಬಿದ್ದು ಯುವಕನಿಗೆ ಗಂಭೀರ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.