ETV Bharat / state

ಒಂದೇ ಮರ,ಒಂದೇ ವೇಲ್‌, ಸಾವಿನಲ್ಲಿ ಒಂದಾದ ಅಮರ ಪ್ರೇಮಿಗಳು!

author img

By

Published : Jun 1, 2019, 11:16 PM IST

ಜಿಲ್ಲೆಯ ಮುಳಬಾಗಿಲು ತಾಲ್ಲೂಕು ದೇವರಾಯಸಮುದ್ರ ಗ್ರಾಮದಲ್ಲಿ ಪ್ರೇಮಿಗಳಿಬ್ಬರು ಮರವೊಂದಕ್ಕೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ.

ನೇಣಿಗೆ ಶರಣಾದ ಪ್ರೇಮಿಗಳು

ಕೋಲಾರ: ಮರಕ್ಕೆ ನೇಣು ಹಾಕಿಕೊಂಡಿರುವ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ದೇವರಾಯಸಮುದ್ರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಇಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣ ಅನುಮಾನಕ್ಕೆ ಕಾರಣವಾಗಿದೆ.

ನೇಣಿಗೆ ಶರಣಾದ ಪ್ರೇಮಿಗಳ ಶವ

ಮೃತಪಟ್ಟವರವನ್ನು ಶ್ರೀನಿವಾಸಪುರದ ವರಲಕ್ಷ್ಮೀ ಹಾಗು ಸುರೇಶ್​ ಎಂದು ಗುರುತಿಸಲಾಗಿದೆ.

ಸುರೇಶ್‌ ಕೋಲಾರ ತಾಲ್ಲೂಕು ಪಚ್ಚಾರ್ಲಹಳ್ಳಿಯ ನಿವಾಸಿಯಾಗಿದ್ದಾನೆ. ದೇವರಾಯಸಮುದ್ರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿರುವ ಶಂಕರ ರೆಡ್ಡಿ ಎನ್ನುವವರ ಪಂಚವಟಿ ಫಾರಂನಲ್ಲಿ ಕೆಲಸ ಮಾಡುವ ಅನಸೂಯಮ್ಮ ಎಂಬಾಕೆ ತೋಟದಲ್ಲಿ ಓಡಾಡುತ್ತಿದ್ದರು. ಈ ವೇಳೆ ಮರವೊಂದರಲ್ಲಿ ಇಬ್ಬರ ಶವ ಕೊಳೆತ ಸ್ಥಿತಿಯಲ್ಲಿರುವುದನ್ನು ಅವರು ಗಮನಿಸಿದ್ದಾರೆ. ತಕ್ಷಣ ಅವರು ಮುಳಬಾಗಿಲು ಗ್ರಾಮಾಂತರ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ಯುವಕ ಮತ್ತು ಯುವತಿ ಕಾಣೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಮೇ 22 ರಂದೆ ದೂರು ದಾಖಲಾಗಿದ್ದು, ಅಂದೇ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಆತ್ಮಹತ್ಯೆಗೆ ಕಾರಣವೇನು? ಸಾವಿನ ಹಿಂದಿನ ರಹಸ್ಯವೇನು? ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಜಾಹ್ನವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ಆಂಕರ್: ಅದು ಚೆನೈ ಬೆಂಗಳೂರು ಹೆದ್ದಾರಿ ಪಕ್ಕದಲ್ಲಿರುವ ಒಂದು ಎಸ್ಟೇಟ್​, ಆ ಎಸ್ಟೇಟ್​ನ ಒಳಗೆ ಮರವೊಂದಕ್ಕೆ ಒಂದೇ ವೇಲ್​ನಲ್ಲಿ ಆ ಇಬ್ಬರು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ, ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಆ ಪ್ರೇಮಿಗಳ ಶವ ಸಾಕಷ್ಟು ಅನುಮಾನ ಹುಟ್ಟಿಸಿದೆ..
Body:ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿರುವ ವಾಹನಗಳ ಸಾಲು, ಅಲ್ಲೇ ಪಕ್ಕದ ಎಸ್ಟೇಟ್​ ನಲ್ಲಿ ನೇತಾಡುತ್ತಿರುವ ಇಬ್ಬರು ಪ್ರೇಮಿಗಳ ಶವ, ಅದನ್ನ ಪರಿಶೀಲನೆ ನಡೆಸುತ್ತಿರುವ ಪೊಲೀಸರು ಇದೆಲ್ಲಾ ಕಂಡು ಬಂದಿದ್ದು ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕು ದೇವರಾಯಸಮುದ್ರ ಗ್ರಾಮದ ಬಳಿ. ಹೌದು ದೇವರಾಯಸಮುದ್ರ ಗ್ರಾಮದ ಬಳಿ ರಾಷ್ಟೀಯ ಹೆದ್ದಾರಿ-75 ರ ಪಕ್ಕದಲ್ಲೇ ಶಂಕರ್​ರೆಡ್ಡಿ ಎನ್ನುವರ ಪಂಚವಟಿ ಫಾರಂ ಇದೆ. ಇಂದು ಸಂಜೆವೇಳೆಗೆ ಇಲ್ಲಿ ಕೆಲಸದಾಕೆ ಅನಸೂಯಮ್ಮ ಎಂಬಾಕೆ ತೋಟದಲ್ಲಿ ಓಡಾಡುತ್ತಿದ್ದ ಸಂದರ್ಭದಲ್ಲಿ, ಮರದಲ್ಲಿ ನೇತಾಡುತ್ತಿದ್ದ ಇಬ್ಬರು ಪ್ರೇಮಿಕಗಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದನ್ನು ಕಂಡು ಗಾಬರಿಯಾದ ಅನಸೂಯಮ್ಮ, ತಕ್ಷಣ ಮುಳಬಾಗಿಲು ಗ್ರಾಮಾಂತರ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದಾರೆ.
ಬೈಟ್​;1 ಅನುಸೂಯಮ್ಮ (ಎಸ್ಟೇಟ್​ ಕೆಲಸದಾಕೆ)
         ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸ್ರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಅವರ ಶವದ ಬಳಿ ಇದ್ದ ಬ್ಯಾಗ್​ ಹಾಗೂ ಮೊಬೈಲ್​ ಪರಿಶೀಲನೆ ನಡೆಸಿದಾಗ ಮೃತ ಪ್ರೇಮಿಗಳು ಗುರುತು ಪತ್ತೆಯಾಗಿದೆ. ಮೃತ ಯುವತಿ ಶ್ರೀನಿವಾಸಪುರದ ವರಲಕ್ಷ್ಮೀ ಎಂದು ತಿಳಿದು ಬಂದಿದ್ದು, ಮೃತ ಸುರೇಶ್​ ಕೋಲಾರ ತಾಲ್ಲೂಕು ಪಚ್ಚಾರ್ಲಹಳ್ಳಿಯ ನಿವಾಸಿ ಇವರಿಬ್ಬರು ಕಾಣಿಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಮೇ-22 ರಂದೇ ದೂರು ದಾಖಲಾಗಿದ್ದು, ಅಂದೇ ಇವರಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಒಂದೇ ಮರಕ್ಕೆ ಒಂದೇ ವೇಲ್​ ನಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಇಬ್ಬರ ಸಾವಿಗೆ ಕಾರಣವೇನು, ಸಾವಿನ ಹಿಂದಿನ ರಹಸ್ಯವೇನು ಅನ್ನೋದನ್ನು ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಜಾಹ್ನವಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೈಟ್​:2 ಕೃಷ್ಣ (ಸ್ಥಳೀಯ ಮುಖಂಡ)Conclusion:ಒಟ್ಟಾರೆ ಬಾಳಿ ಬದುಕಬೇಕೆಂದು ಕೊಂಡು ಒಬ್ಬರನೊಬ್ಬರು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿಕೊಂಡ ಪ್ರೇಮಿಗಳು, ಪ್ರೇಮಕ್ಕೆ ವಿರೋಧಿಸಿದವರನ್ನು ಎದುರಿಸಿ ಪ್ರಾಣ ಉಳಿಸಿಕೊಳ್ಳಲಾಗದೆ ಪ್ರಾಣ ಕಳೆದುಕೊಂಡಿದ್ದು ಮಾತ್ರ ದುರಂತವೇ ಸರಿ..

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.