ಬೈಕ್​ -ಟಿಪ್ಪರ್​ ನಡುವೆ ಡಿಕ್ಕಿ: ಲಗ್ನಪತ್ರಿಕೆ ಕೊಟ್ಟು ಬರುತ್ತಿದ್ದ ಇಬ್ಬರ ದುರ್ಮರಣ

author img

By

Published : Sep 6, 2021, 11:56 PM IST

two-died-in-accident-at-kodagu

ಬೈಕ್​ಗೆ ಟಿಪ್ಪರ್​ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇವರಿಬ್ಬರೂ ಮೈಸೂರಿನ ಮೂಲದವರು ಎಂದು ತಿಳಿದುಬಂದಿದೆ.

ಕೊಡಗು : ಬುಲೆಟ್ ಬೈಕ್ ಹಾಗೂ ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಬೈಕ್ ಸವಾರರು ಸಾವಿಗೀಡಾದ ಘಟನೆ ಜಿಲ್ಲೆಯ ಮಡಿಕೇರಿ ಹೊರ ವಲಯದ ಸಂಪಿಗೆ ಕಟ್ಟೆ ಬಳಿ ಘಟನೆ ಸಂಭವಿಸಿದೆ.

ಮೈಸೂರು ಮೂಲದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕೆ ನಗರ ಸಂಚಾರಿ ಪೊಲೀಸರು ಭೇಟಿನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಬೈಕ್​ನಲ್ಲಿ ವಿವಾಹದ ಲಗ್ನ ಪತ್ರಿಕೆ ಸಿಕ್ಕಿದ್ದು, ಮೈಸೂರು ಮೂಲದವರು ಎಂದು ತಿಳಿದುಬಂದಿದೆ.

ಲಗ್ನ ಪತ್ರಿಕೆ ಕೊಟ್ಟು ವಾಪಸ್​ ಮೈಸೂರಿಗೆ ಬರುವಾಗ ಮಡಿಕೇರಿ ಸಮೀಪದಲ್ಲಿ ಟಿಪ್ಪರ್ ಬಂದು ಡಿಕ್ಕಿ ಹೊಡೆದಿದೆ. ಮೃತ ದೇಹಗಳನ್ನು ಮಡಿಕೇರಿಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.