ETV Bharat / state

ಮೆದುಳು ನಿಷ್ಕ್ರಿಯಗೊಂಡು ಸಾವು: ಅಂಗಾಂಗದಾನ ಮಾಡಿ ಸಾರ್ಥಕತೆ ಮೆರೆದ ಶಿಕ್ಷಕಿ

author img

By

Published : Oct 11, 2022, 10:53 PM IST

Updated : Oct 14, 2022, 6:53 AM IST

ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ ಶಿಕ್ಷಕಿಯೊಬ್ಬರು ಬಹು ಅಂಗಾಂಗದಾನ ಮಾಡುವ ಮೂಲಕ ಎಂಟು ಮಂದಿಯ ಬಾಳಿಗೆ ಆಸರೆಯಾಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸುದರ್ಶನ ಬಡಾವಣೆಯಲ್ಲಿ ನಡೆದಿದೆ.

teacher-donated-organs-after-death-in-madikeri
ಮೆದುಳು ನಿಷ್ಕ್ರಿಯಗೊಂಡು ಸಾವು : ಅಂಗಾಂಗದಾನ ಮಾಡಿ ಸಾರ್ಥಕತೆ ಮೆರೆದ ಶಿಕ್ಷಕಿ

ಕೊಡಗು: ವಿದ್ಯಾರ್ಥಿಗಳಿಗೆ ತನ್ನ ಜೀವನ ಮುಡಿಪಾಗಿಟ್ಟಿದ್ದ ಶಿಕ್ಷಕಿ ಅಕಾಲಿಕ ಮರಣ ಹೊಂದಿದ್ದು, ಬಹು ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಜಿಲ್ಲೆಯ ಮಡಿಕೇರಿ ತಾಲೂಕಿನ ಸುದರ್ಶನ ಬಡಾವಣೆ ನಿವಾಸಿ ಶಿಕ್ಷಕಿ ಆಶಾ ಎಂಬವರು ಅಂಗಾಂಗ ದಾನ ಮಾಡಿದ್ದಾರೆ. ಬಹು ಅಂಗಾಂಗ ದಾನ ಮಾಡುವ ಮೂಲಕ 8 ಮಂದಿಯ ಬಾಳಿಗೆ ಆಸರೆಯಾಗಿದ್ದಾರೆ.

ಮೆದುಳು ನಿಷ್ಕ್ರಿಯಗೊಂಡು ಸಾವು : ಅಂಗಾಂಗದಾನ ಮಾಡಿ ಸಾರ್ಥಕತೆ ಮೆರೆದ ಶಿಕ್ಷಕಿ

ಸುದರ್ಶನ ಬಡಾವಣೆಯಲ್ಲಿ ಕಳೆದ 18 ವರ್ಷಗಳಿಂದ ಮಕ್ಕಳ‌ ಆರೈಕಾ ಕೇಂದ್ರ ನಡೆಸಿಕೊಂಡು ಬಂದಿದ್ದ ಶಿಕ್ಷಕಿ ಆಶಾ ಮಕ್ಕಳ ಭವಿಷ್ಯ ಉಜ್ವಲ ಗೊಳಿಸಲು ಸಾಕಷ್ಟು ಶ್ರಮಪಟ್ಟಿದ್ದರು. ಹಲವು ವರ್ಷಗಳಿಂದ ಮಕ್ಕಳ ಆರೈಕೆಯಲ್ಲಿ ತೊಡಗಿದ್ದರು. ಆದರೆ, ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಮಗಳ ಮನೆಗೆ ತೆರಳಿದ್ದ ವೇಳೆ ಆಶಾರವರ ಮೆದುಳು ಪಾರ್ಶ್ವವಾಯುವಿಗೆ ಒಳಗಾಗಿತ್ತು.

ತಕ್ಷಣವೇ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದರು. ಹೀಗಾಗಿ ನಿನ್ನೆ ಶಿಕ್ಷಕಿ ಆಶಾ ಅವರ ಅಂಗಾಂಗ ದಾನ ಮಾಡಲಾಗಿದೆ. ಆಶಾ ಅವರ ಕಣ್ಣು, ಕಿಡ್ನಿ, ಹೃದಯ, ಯಕೃತ್ತು ದಾನ ಮಾಡುವುದರೊಂದಿಗೆ ಎಂಟು ಮಂದಿಯ ಬಾಳಿಗೆ ಬೆಳಕಾಗಿದ್ದಾರೆ. ಮನೆಯವರ ಒಪ್ಪಿಗೆಯ ಮೇರೆಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಬಹು ಅಂಗಾಂಗ ದಾನಮಾಡಲಾಗಿದೆ.

ಇದನ್ನೂ ಓದಿ : ಅಮಿತ್ ಶಾ ಧೋರಣೆ ಎಲ್ಲ ಪ್ರಾದೇಶಿಕ ಭಾಷೆ ತುಳಿಯುವ ಹುನ್ನಾರ : ವಾಟಾಳ್

Last Updated : Oct 14, 2022, 6:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.