ETV Bharat / state

ಹುಲಿಯ ಉಗುರು ಮಾರಾಟಕ್ಕೆ ಯತ್ನ.. ಏಳು ಮಂದಿ ಆರೋಪಿಗಳ ಬಂಧನ

author img

By

Published : Apr 4, 2022, 10:06 PM IST

ಹಂದಿಗಳಿಂದ ಬೆಳೆ ರಕ್ಷಣೆ ಮಾಡಲು ಹಾಕಿದ್ದ ಕರೆಂಟ್​ ತಂತಿಗೆ ಹುಲಿ ಸಿಲುಕಿ ವರ್ಷದ ಹಿಂದೆ ಸಾವನ್ನಪ್ಪಿತ್ತು. ಆ ಹುಲಿಯ ಉಗುರನ್ನು ಮಾರಾಟ ಮಾಡಲು ಪ್ರಯತ್ನಿಸಿದ ಏಳು ಜನರ ಗುಂಪನ್ನು ಪೊಲೀಸರು ಬಂಧಿಸಿದ್ದಾರೆ.

Seven accused arrested for trying to sell tiger toenails in Kodagu
ಹುಲಿಯ ಉಗುರು ಮಾರಾಟಕ್ಕೆ ಯತ್ನ: ಏಳು ಮಂದಿ ಬಂಧನ

ಕೊಡಗು: ವರ್ಷದ ಹಿಂದೆ ವಿದ್ಯುತ್ ಶಾಕ್‍ನಿಂದ ಮೃತಪಟ್ಟಿದ್ದ ಹುಲಿಯ ಕಾಲ್ಬೆರಳಿನ ಉಗುರುಗಳನ್ನು ಮಾರಾಟ ಮಾಡಲು ಯತ್ನಿಸಿದ ಏಳು ಮಂದಿ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಜಿಲ್ಲೆಯ ಕುಶಾಲನಗರ ತಾಲೂಕಿನ ಮರೂರು ಗ್ರಾಮದ ಗಣೇಶ್, ಯೋಗೇಶ್, ರಮೇಶ್, ನಟೇಶ್ ದೊರೇಶ್, ನವೀನ್, ಶೇಖರ್ ಮತ್ತು ರಮೇಶ್ ಬಂಧಿತ ಆರೋಪಿಗಳು.

ವರ್ಷದ ಹಿಂದೆ ಕಾಡು ಹಂದಿಗಳಿಂದ ಬೆಳೆ ರಕ್ಷಿಸಲು ತಂತಿ ಬೇಲಿಗೆ ಗಣೇಶ್ ಮತ್ತು ಯೋಗೇಶ್ ವಿದ್ಯುತ್ ಹರಿಸಿದ್ದರು. ಆದರೆ ಕಾಡು ಹಂದಿಗೆ ಇಟ್ಟಿದ್ದ ವಿದ್ಯುತ್ ಹುಲಿಗೆ ತಗುಲಿ ಸ್ಥಳದಲ್ಲಿಯೇ ಅದು ಮೃತಪಟ್ಟಿತ್ತು. ಹುಲಿ ಮೃತಪಟ್ಟಿರುವುದರ ಬಗ್ಗೆ ಯಾರಿಗೂ ಮಾಹಿತಿ ನೀಡದೇ, ಹುಲಿ ಉಗುರು ತೆಗೆದುಕೊಂಡು ಹುಲಿ ಕಾಲ್ಬೆರಳನ್ನು ಹೂತು ಹಾಕಿದ್ದರು. ಅಲ್ಲದೇ ವರ್ಷದ ಬಳಿಕ ಹುಲಿ ಉಗುರು ಮಾರಾಟಕ್ಕೆ ಯತ್ನಿಸಿದ್ದಾರೆ.

ಹುಲಿಯ ಉಗುರು ಮಾರಾಟಕ್ಕೆ ಯತ್ನ: ಏಳು ಮಂದಿ ಬಂಧನ

ಈ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ಸಂಚಾರಿ ಅರಣ್ಯ ದಳ ಪೊಲೀಸರು ದಾಳಿ ನಡೆಸುವ ಸಂದರ್ಭದಲ್ಲಿ 17 ಹುಲಿ ಉಗುರು, ಒಂದು ಕೋರೆ ಹಲ್ಲು, ಚರ್ಮದ ಚೂರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ಹುಲಿಯನ್ನು ಸಹ ಹೂತಿಟ್ಟಿರುವ ಬಗ್ಗೆಯೂ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ಈ ಮಹಾನಗರದಲ್ಲಿ ಹೆಚ್ಚಾಗುತ್ತಿದೆಯಾ ಡ್ರಗ್ಸ್​ ಹಾವಳಿ ? ಎಲ್ಲಿ.. ಹೇಗೆ ಮತ್ತು ಏಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.