ETV Bharat / state

ರಾಷ್ಟ್ರಪತಿ ಸ್ವಾಗತಕ್ಕೆ ಸಜ್ಜಾಗಿರುವ ಮಡಿಕೇರಿ: ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿರುವ ಮ್ಯೂಸಿಯಂ

author img

By

Published : Feb 6, 2021, 1:54 PM IST

ಮಡಿಕೇರಿಯ ತಿಮ್ಮಯ್ಯ ಮ್ಯೂಸಿಯಂ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಧ್ಯಾಹ್ನ 3 ಗಂಟೆಗೆ ಲೋಕಾರ್ಪಣೆ ಮಾಡಲಿದ್ದಾರೆ.

President Ramanath Kovind
ತಲಕಾವೇರಿಗೆ ತೆರಳಿರುವ ರಾಷ್ಟ್ರಪತಿ ಕೋವಿಂದ್

ಕೊಡಗು: ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಸ್ವಾಗತಕ್ಕೆ ಮಂಜಿನ ನಗರಿ ಮಡಿಕೇರಿ ಸಜ್ಜಾಗಿದೆ.

ಪುಷ್ಪಾಲಂಕಾರದಿಂದ ತಿಮ್ಮಯ್ಯ ಮ್ಯೂಸಿಯಂ ಕಂಗೊಳಿಸುತ್ತಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಧ್ಯಾಹ್ನ 3 ಗಂಟೆಗೆ ಲೋಕಾರ್ಪಣೆ ಮಾಡಲಿದ್ದಾರೆ.

ರಾಷ್ಟ್ರಪತಿ ಸ್ವಾಗತಕ್ಕೆ ಸಜ್ಜಾಗಿರುವ ಮಡಿಕೇರಿ: ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿರುವ ಮ್ಯೂಸಿಯಂ

ಮಡಿಕೇರಿಯ ಜ.ತಿಮ್ಮಯ್ಯ ರಸ್ತೆಯಲ್ಲಿರುವ ಮ್ಯೂಸಿಯಂ, ಮಿಗ್ 21 ಯುದ್ಧ ವಿಮಾನ, ಯುದ್ಧ ಟ್ಯಾಂಕರ್, ಯುದ್ಧ ಸ್ಮಾರಕ ಪ್ರಮುಖ ಆಕರ್ಷಣೆಯಾಗಿವೆ. ಮ್ಯೂಸಿಯಂ ಸುತ್ತ ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣು ಇರಿಸಿದ್ದು, ಯುದ್ಧ ಸ್ಮಾರಕಕ್ಕೆ ರಾಷ್ಟ್ರಪತಿಯವರು ಗೌರವ ಸಲ್ಲಿಸಿ ಬಳಿಕ ತಿಮ್ಮಯ್ಯ ಮನೆಯಲ್ಲಿ ತೂಗು ದೀಪ, ಪ್ರಜ್ವಲನೆ ದೀಪ ಬೆಳಗುವ ಮೂಲಕ ಸ್ಮಾರಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ತಲಕಾವೇರಿಗೆ ತೆರಳಿರುವ ರಾಷ್ಟ್ರಪತಿ ಕೋವಿಂದ್:

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗಮಂಡಲ ಹೆಲಿಪ್ಯಾಡ್​​ಗೆ ಆಗಮಿಸಿದ್ದಾರೆ. ಕಾವೇರಿ ಕಾಲೇಜು ಮೈದಾನದ ಹೆಲಿಪ್ಯಾಡ್​ಗೆ ಪತ್ನಿ ಸವಿತಾ ಕೋವಿಂದ್ ಜೊತೆ ಆಗಮಿಸಿದ ಅವರಿಗೆ ಕೊಡಗು ಉಸ್ತುವಾರಿ ಸಚಿವ ವಿ.ಸೋಮಣ್ಣ ಸಾಥ್​ ನೀಡಿದರು.

ಓದಿ: ತಲಕಾವೇರಿಗೆ ರಾಷ್ಟ್ರಪತಿ ಪೂಜೆ: ಮಡಿಕೇರಿಯಲ್ಲಿ ವಾರ್ ಮ್ಯೂಸಿಯಂ ಉದ್ಘಾಟಿಸಲಿರುವ ಕೋವಿಂದ್​

ತಲಕಾವೇರಿಯತ್ತ ಕಾರಿನಲ್ಲಿ ಪ್ರಯಾಣ:

ಮಡಿಕೇರಿ ತಾಲೂಕಿನ ಭಾಗಮಂಡಲ ಸಮೀಪ ಇರುವ ತಲಕಾವೇರಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ತಲಕಾವೇರಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪತ್ನಿ ಸವಿತಾ ಕೋವಿಂದ್ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಡಿಸಿ ಚಾರುಲತಾ ಸೋಮಲ್, ಎಸ್ಪಿ ಕ್ಷಮಾ ಮಿಶ್ರ ಭಾಗಿಯಾಗಿದ್ದರು.

Madikeri
ಮೇವು, ನೀರು ಇಲ್ಲದೆ ಪರದಾಡುತ್ತಿರುವ ಬಿಡಾಡಿ ದನಗಳು

ಬಿಡಾಡಿ ದನಗಳಿಗೆ ಉಪವಾಸ:

ಕೊಡಗು ಜಿಲ್ಲೆಗೆ ರಾಷ್ಟ್ರಪತಿ ಆಗಮನ ಹಿನ್ನೆಲೆ ಬಿಡಾಡಿ ದನಗಳು ಮೇವು, ನೀರು ಇಲ್ಲದೆ ಪರದಾಡುತ್ತಿವೆ. ರೋಡ್ ಕ್ಲಿಯರ್ ಮಾಡೋ ಹಿನ್ನೆಲೆ ದನಕರುಗಳನ್ನ ನಗರಸಭೆ ಸೆರೆ ಹಿಡಿದು, ಮಡಿಕೇರಿ ಮಾರುಕಟ್ಟೆ ಪ್ರಾಂಗಣದಲ್ಲಿ ಕೂಡಿ ಹಾಕಿದೆ ಎನ್ನಲಾಗ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.