ETV Bharat / state

ಗುಂಡಿಗೆ ಬಲಿಯಾಗಿದ್ದು ನರಹಂತಕ ಹುಲಿ ಅಲ್ಲ: ಪೊನ್ನಂಪೇಟೆ ಗ್ರಾಮಸ್ಥರ ಆರೋಪ

author img

By

Published : Mar 20, 2021, 8:23 PM IST

ಅರಣ್ಯ ಇಲಾಖೆ ಅಧಿಕಾರಿಗಳು ಹಾರಿಸಿದ ಗುಂಡಿಗೆ ನರಹಂತಕ ಹುಲಿ ಬಲಿಯಾಗಿದೆ ಎನ್ನಲಾಗುತ್ತಿದ್ದರೂ ಹುಲಿಯ ಸಾವಿನ ಸುತ್ತ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ಲಕ್ಕುಂದ ಜನರಲ್ಲಿ ಹಲವು ಅನುಮಾನಗಳು ಮೂಡಿವೆ.

Kodagu
ಗುಂಡಿಗೆ ಬಲಿಯಾಗಿದ್ದು ನರ ಹಂತಕ ಹುಲಿ ಅಲ್ಲ: ಸ್ಥಳೀಯರ ಆರೋಪ

ಕೊಡಗು: ದಕ್ಷಿಣ ಕೊಡಗಿನಲ್ಲಿ ಆತಂಕ ಸೃಷ್ಟಿಸಿದ್ದ ನರಹಂತಕ ಹುಲಿ ಕೊನೆಗೂ ಗುಂಡಿಗೆ ಬಲಿಯಾಗಿದೆ. ಸದ್ಯ ಕೊಂಚ ಮಟ್ಟಿಗೆ ನಿಮ್ಮದಿಯ ನಿಟ್ಟುಸಿರು ಬಿಡುವಂತಾದ್ರು ಕೂಡ ಗುಂಡಿಗೆ ಬಲಿಯಾಗಿದ್ದು ನರಹಂತಕ ಹುಲಿಯೇ? ಎಂಬ ಅನುಮಾನ ಗ್ರಾಮಸ್ಥರದ್ದಾಗಿದೆ.

ಗುಂಡಿಗೆ ಬಲಿಯಾಗಿದ್ದು ನರಹಂತಕ ಹುಲಿ ಅಲ್ಲ: ಸ್ಥಳೀಯರ ಆರೋಪ

ಅರಣ್ಯ ಇಲಾಖೆ ಅಧಿಕಾರಿಗಳು ಹಾರಿಸಿದ ಗುಂಡಿಗೆ ನರಹಂತಕ ಹುಲಿ ಬಲಿಯಾಗಿದೆ ಎನ್ನಲಾಗುತ್ತಿದ್ದರೂ ಹುಲಿಯ ಸಾವಿನ ಸುತ್ತ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ನಾಲ್ಕೇರಿ ಗ್ರಾಮದ ಲಕ್ಕುಂದ ಜನರಲ್ಲಿ ಹಲವು ಅನುಮಾನಗಳು ಮೂಡಿವೆ. ಕಳೆದ 25 ದಿ‌ನಗಳಿಂದ ಜಿಲ್ಲೆಯ ನಾಲ್ಕೇರಿ, ಹುದಿಕೇರಿ, ಬೆಳ್ಳೂರು, ಹರಿಹರ, ತಾವಳಗೇರಿ ಮುಂತಾದ ಕಡೆಗಳಲ್ಲಿ ಹುಲಿ ಹಾವಳಿ‌ ಹೆಚ್ಚಾಗಿದ್ದು, ಇಬ್ಬರನ್ನ ಬಲಿ ಪಡೆದಿತ್ತು. ಇದರಿಂದ ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆ ಅರಣ್ಯ ಇಲಾಖೆ ಕೂಬಿಂಗ್ ಮತ್ತಷ್ಟು ಚೂರುಕುಗೊಳಿಸಿತ್ತು. ಕಳೆದ ಮಾ. 8ರಂದು ಬೆಳ್ಳೂರು ಭಾಗದಲ್ಲಿ ಆನೆ ಕಾರ್ಯಾಚರಣೆ ವೇಳೆ ಹುಲಿಗೆ ಗುಂಡು ಹೊಡೆಯಲಾಗಿತ್ತು. ಆದ್ರೆ ಅದು ಗುಂಡು ಹಾರಿಸಿದ ಸ್ಥಳದಿಂದ ಸುಮಾರು 8ರಿಂದ 10 k.m ದೂರದಲ್ಲಿ ಸತ್ತು ಬಿದ್ದಿದೆ‌.

3 ಗುಂಡೇಟು ತಿಂದ‌ ಹುಲಿಯ ಕಳೇಬರ ನಾಗರಹೊಳೆ ಬಳಿಯ ಲಕ್ಕುಂದ ಎಸ್ಟೇಟ್ ಬಳಿ ಪತ್ತೆಯಾಗಿದೆ. ಮುಂಜಾನೆ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ದುರ್ವಾಸನೆ ಬಂದ ಹಿನ್ನೆಲೆ ಹುಡುಕಾಟ ನಡೆಸಿದ ಸಂದರ್ಭ ಹುಲಿ ಸಾವನಪ್ಪಿದ್ದು ಬೆಳಕಿಗೆ ಬಂದಿದೆ. ಸುಮಾರು 11 ವರ್ಷದ ಗಂಡು ಹುಲಿ ಇದಾಗಿದ್ದು, ಹುಲಿಯ ಐಡಿ Nagarahole 13_U285 ಆಗಿದೆ. ಅಲ್ಲದೇ ಇದರ ಮೈಯಲ್ಲಿ ಅರಣ್ಯ ಇಲಾಖೆ ಹಾರಿಸಿದ ಗುಂಡು ಕೂಡ ಪತ್ತೆಯಾಗಿದೆ ಎಂದು ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆದ್ರೆ ಹುಲಿಯ‌ ಸಾವಿನ ಸುತ್ತ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಮಾ. 8ರಂದು ಗುಂಡು ಹಾರಿಸಿದ್ದಾರೆಂಬ ವಿಚಾರವನ್ನ ಈಗ ಸ್ಪಷ್ಟಪಡಿಸುತ್ತಿರೋದಾದ್ರು ಯಾಕೆ? ಇಲ್ಲಿಯವರೆಗೆ ಎಲ್ಲೂ ಕೂಡ ಗುಂಡು ಹಾರಿಸಿದ ವಿಚಾರವನ್ನ ಬಹಿರಂಗ ಮಾಡದ ಅರಣ್ಯ ಇಲಾಖೆ ಕಳೆದ ಬಾರಿ ಕೂಡ ಇದೇ ನರಹಂತಕ ಹುಲಿ ಎಂದು ಬಿಂಬಿಸಿದ ಅರಣ್ಯ ಇಲಾಖೆ ಲ್ಯಾಬ್ ರಿಪೋರ್ಟ್ ಬಂದ ನಂತರ ಇದಲ್ಲ ಎಂಬುದನ್ನ ಸ್ಪಷ್ಟಪಡಿಸಿತ್ತು.

ಅಲ್ಲದೆ ಕಳೆದ 10 ದಿನಗಳ ಹಿಂದೆ ಹುಲಿಗೆ ಗುಂಡೇಟು ಬಿದ್ದು ಸಾವನ್ನಪ್ಪಿದ್ರು ಕೂಡ ಪೊನ್ನಂಪೇಟೆ ಭಾಗದಲ್ಲಿ ಜಾನುವಾರುಗಳು ಬಲಿಯಾಗುತ್ತಿರುವುದು ನಿಂತಿರಲಿಲ್ಲ‌. ಅಲ್ಲದೇ ನಾಲ್ವರ ಮೇಲೆ ಇದೇ ಹುಲಿ ದಾಳಿ ಮಾಡಿದೆ ಎಂಬುದು ಎಲ್ಲೂ ಸ್ಪಷ್ಟವಾಗಿಲ್ಲ. ಅಲ್ಲದೇ ಈ ಭಾಗದಲ್ಲಿ ಇನ್ನಷ್ಟು ಹುಲಿಗಳಿರುವ ಸಾಧ್ಯತೆಯಿದೆ. ಹೀಗಾಗಿ ಶಾಶ್ವತವಾಗಿ ನಮಗೆ ಹುಲಿಗಳಿಂದ ಮುಕ್ತಿ ಕೊಡಿಸಬೇಕು. ಹಾಗೆ ಅರಣ್ಯ ಇಲಾಖೆ ಇಲ್ಲಿಗೆ ತನ್ನ ಕಾರ್ಯಾಚರಣೆ ನಿಲ್ಲಿಸದೆ ಮುಂದುವರೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬೆಂಗಳೂರಿಗೆ ತೆರಳಿ ಅರಣ್ಯ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಅವರಿಗೆ ನಮ್ಮ ಅಹವಾಲು ನೀಡಿ ನಮ್ಮ ಹೋರಾಟ ಮುಂದುವರೆಸೋದಾ ಅಥವಾ ಕೈಬಿಡುವುದಾ? ಎಂಬುದರ ಬಗ್ಗೆ ತಿರ್ಮಾನ ಕೈಗೊಳ್ಳಲಾಗುವುದು. ಹಾಗಾಗಿ ಮುಂದಿನ ಸೋಮವಾರದವರೆಗೆ ಈ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಒಟ್ಟಿನಲ್ಲಿ ಇಷ್ಟು ದಿನಗಳ ಕಾಲ ಜನರಲ್ಲಿ ಭಯ ಹುಟ್ಟಿಸಿದ್ದ ನರ ಹಂತಕ ಬಲಿಯಾಗಿದ್ದು, ಅರಣ್ಯ ಇಲಾಖೆಗೆ ಕೊಮಚ ನೆಮ್ಮದಿ ಕೊಟ್ಟಿದ್ರೆ. ಆದರೆ ಜಿಲ್ಲೆಯ ನಾನಾ ಭಾಗದಲ್ಲಿ ಹುಲಿ ದಾಳಿ ನಡೆಸುತ್ತಿದ್ದು, ಜನತೆಯಲ್ಲಿ ಮತ್ತಷ್ಟು ಆತಂಕ ಮೂಡುವಂತೆ ಮಾಡಿದೆ.

ಓದಿ: ಕೊಡಗು: ನರಹಂತಕ ಹುಲಿ ಗುಂಡೇಟಿಗೆ ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.