ETV Bharat / state

ಅಗ್ನಿ ಅವಘಡ: ಸುಟ್ಟು ಕರಕಲಾದ ಮೆಡಿಕಲ್ ಸ್ಟೋರ್​​

author img

By

Published : Jun 3, 2021, 10:42 AM IST

ಪೊನ್ನಪೇಟೆ ತಾಲೂಕಿನ ಗೋಣಿಕೊಪ್ಪದ ಪಟ್ಟಣದ ಹೃದಯ ಭಾಗದಲ್ಲಿರುವ ಮಾನಸ ಮೆಡಿಕಲ್ ಸ್ಟೋರ್​ಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಮಾತ್ರೆ, ಔಷಧಿ ಸುಟ್ಟು ಭಸ್ಮವಾಗಿದೆ.

medical store catch fire
ಅಗ್ನಿ ಅವಘಡ

ಕೊಡಗು: ಮೆಡಿಕಲ್ ಸ್ಟೋರ್​​ಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ಮಾತ್ರೆ, ಔಷಧಿ ಸುಟ್ಟು ಕರಕಲಾದ ಘಟನೆ ಜಿಲ್ಲೆಯ ಗೋಣಿಕೊಪ್ಪಲು ಪಟ್ಟಣದಲ್ಲಿ ನಡೆದಿದೆ.

ಅಗ್ನಿ ಅವಘಡ: ಹೊತ್ತಿ ಉರಿಯುತ್ತಿರುವ ಮೆಡಿಕಲ್ ಸ್ಟೋರ್​​

ಪೊನ್ನಪೇಟೆ ತಾಲೂಕಿನ ಗೋಣಿಕೊಪ್ಪದ ಪಟ್ಟಣದ ಹೃದಯ ಭಾಗದಲ್ಲಿರುವ ಮಾನಸ ಮೆಡಿಕಲ್ ಸ್ಟೋರ್​ಗೆ ಮುಂಜಾನೆ 5.30 ಗಂಟೆಗೆ ಬೆಂಕಿ ಬಿದ್ದು ಧಗ ಧಗನೆ ಉರಿದುಹೋಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್​​​ನಿಂದ ಬೆಂಕಿ ಹತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಅವಘಡದಿಂದ ಲಕ್ಷಾಂತರ ರೂ. ಮೌಲ್ಯದ ಔಷಧಿ ಸುಟ್ಟು ಭಸ್ಮವಾಗಿದೆ.

ಮುಂಜಾನೆ ಬೆಂಕಿ ಬಿದ್ದ ಪರಿಣಾಮ ಜನರು ಯಾರೂ ನೋಡಿಲ್ಲ. ಹೀಗಾಗಿ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಬಳಿಕ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ಅಷ್ಟರಲ್ಲಿಯೇ ಮೆಡಿಕಲ್ ಸ್ಟೋರ್​​ನಲ್ಲಿದ್ದ ಔಷಧಿ, ಮಾತ್ರೆ ಸುಟ್ಟು ಕರಕಲಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.