ETV Bharat / state

ಲಾಕ್‌ಡೌನ್‌ ಎಫೆಕ್ಟ್.. ದುಬಾರೆ ಆನೆ ಶಿಬಿರ ಆಹಾರ ಪೂರೈಕೆಯಲ್ಲಿ ವ್ಯತ್ಯಯ..

author img

By

Published : Apr 7, 2020, 12:31 PM IST

ಕೊರೊನಾ ಎಫೆಕ್ಟ್​ ಇದೀಗ ಕೊಡಗಿನ ದುಬಾರೆ ಆನೆ ಶಿಬಿರದ ಮೇಲೂ ಬೀರಿದೆ. ಸರಿಯಾದ ಆಹಾರ ಪೂರೈಕೆ ಇಲ್ಲದೆ ಆನೆಗಳು ಮತ್ತು ಮಾವುತ, ಕಾವಾಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Lockdown impact on Dubare elephant camp
ದುಬಾರೆ ಆನೆ ಶಿಬಿರ ಆಹಾರ ಪೂರೈಕೆಯಲ್ಲಿ ವ್ಯತ್ಯಯ

ಕೊಡಗು : ಲಾಕ್‌ಡೌನ್ ಪರಿಣಾಮ ಇದೀಗ ಆನೆಗಳ ಮೇಲೂ ಬೀರಿದೆ. ದುಬಾರೆ ಆನೆ ಶಿಬಿರದಲ್ಲಿರುವ ಆನೆಗಳ ಆಹಾರಕ್ಕೆ ಸಮಸ್ಯೆ ಉಂಟಾಗಿದೆ. ಲಾಕ್‍ಡೌನ್​ನಿಂದಾಗಿ ಆನೆಗಳಿಗೆ ಸಮರ್ಪಕವಾಗಿ ಆಹಾರ ಸಾಮಗ್ರಿಗಳನ್ನು ಪೂರೈಸಲು ಆಗುತ್ತಿಲ್ಲ. ಇದರಿಂದ ಶಿಬಿರದಲ್ಲಿರುವ 30 ಆನೆಗಳಿಗೆ ಪ್ರತಿದಿನ ಕೊಡುತ್ತಿದ್ದ ಭತ್ತದ ಹುಲ್ಲು, ಬೆಲ್ಲದ ಕೊರತೆ ಕಾಡುತ್ತಿದೆ. ಜೊತೆಗೆ ಮಾವುತ, ಕವಾಡಿಗರಿಗೂ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ. ಪಡಿತರ ಅಂಗಡಿಯಿಂದ ಕೇವಲ ಅಕ್ಕಿ, ಗೋಧಿಗಳ ಪೂರೈಸಲಾಗುತ್ತಿದೆ. ತರಕಾರಿ ಪೂರೈಕೆಯೂ ಇಲ್ಲದೆ ಸುಮಾರು 90 ಕುಟುಂಬ ಪರಡಾಡುವ ಸ್ಥಿತಿ ನಿರ್ಮಾಣವಾಗಿದೆ.

ದುಬಾರೆ ಆನೆ ಶಿಬಿರಕ್ಕೆ ಲಾಕ್‌ಡೌನ್ ಎಫೆಕ್ಟ್..​

ಮಾವುತ ಹಾಗೂ ಕವಾಡಿಗರು ಸೇರಿ 90 ಆದಿವಾಸಿ ಕುಟುಂಬಗಳು ನದಿಯಿಂದ ಆಚೆ ಇರುವುದರಿಂದ ಅಗತ್ಯ ವಸ್ತುಗಳ ಪೂರೈಕೆಗೆ ಆದಿವಾಸಿ ಕುಟುಂಬಗಳೂ ಹೆಣಗಾಡುತ್ತಿವೆ. ಯಾರಾದರೂ ದಾನಿಗಳು ಹಾಗೂ ಜಿಲ್ಲಾಡಳಿತ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅವರು ಮನವಿ ಮಾಡಿದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.