ETV Bharat / state

ಟಿಪ್ಪು ಜಯಂತಿ ಕರಾಳದಿನ : ಮಡಿಕೇರಿಯಲ್ಲಿ ಕುಟ್ಟಪ್ಪ ಹುತಾತ್ಮ ದಿನಾಚರಣೆ

author img

By

Published : Nov 10, 2022, 6:04 PM IST

Updated : Nov 10, 2022, 9:06 PM IST

kuttappa-martyrdom-day-in-madikeri
ಟಿಪ್ಪು ಜಯಂತಿ ಕರಾಳದಿನ : ಮಡಿಕೇರಿಯಲ್ಲಿ ಕುಟ್ಟಪ್ಪ ಹುತಾತ್ಮ ದಿನಾಚರಣೆ

ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ವೇಳೆ ಉಂಟಾದ ಗಲಭೆಯ ಸಂದರ್ಭ ವಿಹೆಚ್​ಪಿ ಅಧ್ಯಕ್ಷ ಕುಟ್ಟಪ್ಪ ಮೃತಪಟ್ಟಿದ್ದರು. ಅವರ ಮೃತಪಟ್ಟ ದಿನದಂದು ಹಿಂದೂಪರ ಸಂಘಟನೆಗಳು ಕುಟ್ಟಪ್ಪ ಹುತಾತ್ಮ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿವೆ.

ಕೊಡಗು : ಮಡಿಕೇರಿಯಲ್ಲಿ ಈ ಹಿಂದೆ ನಡೆದ ಟಿಪ್ಪು ಜಯಂತಿ ಆಚರಣೆ ವೇಳೆ ಮೃತಪಟ್ಟ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕುಟ್ಟಪ್ಪ ಅವರ ಹುತಾತ್ಮ ದಿನದ ಅಂಗವಾಗಿ ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರು ನಗರದ ಓಂಕಾರೇಶ್ವರ ದೇವಾಲಯದಲ್ಲಿ ಶಾಂತಿ ಪೂಜೆ ನೆರವೇರಿಸಿದರು.

ಕುಟ್ಟಪ್ಪ ಹುತಾತ್ಮ ದಿನದ ಅಂಗವಾಗಿ ಓಂಕಾರೇಶ್ವರ ದೇವಸ್ಥಾನದಲ್ಲಿ ಹಿಂದೂಪರ ಸಂಘಟನೆಗಳು ಕುಟ್ಟಪ್ಪ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಹಿಂದೂಪರ ಸಂಘಟನೆಯ ಮುಖಂಡರಾಗಿದ್ದ ಕುಟ್ಟಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡಲಾಯಿತು.‌

ಕೊಡಗು ಜಿಲ್ಲೆಯ ಜನರ ವಿರೋಧದ ನಡುವೆ ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿದ್ದ ಕಾರಣ ಮಡಿಕೇರಿಯಲ್ಲಿ ಹಿಂದೂ ಮುಸ್ಲಿಂ ನಡುವೆ ದೊಡ್ಡ ಗಲಾಟೆ ನಡೆದಿತ್ತು. ಇದರಿಂದ ಕೊಡಗಿನಲ್ಲಿ ಪ್ರಕ್ಷುಬ್ಧ ‌ವಾತಾವರಣ ನಿರ್ಮಾಣವಾಗಿತ್ತು. ಘಟನೆಯಲ್ಲಿ ಕುಟ್ಟಪ್ಪ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು.

ಟಿಪ್ಪು ಜಯಂತಿಗೆ ವಿರೋಧ : ಕೊಡವರ ಮೇಲೆ ಕ್ರೌರ್ಯ ಎಸಗಿದ ಕಾರಣಕ್ಕಾಗಿ ಕೊಡಗಿನಲ್ಲಿ ಟಿಪ್ಪು ಜಯಂತಿಯನ್ನು ಆಚರಿಸಬಾರದು ಎಂದು ಕೊಡವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸರ್ಕಾರದ ಆದೇಶದ ಮೇರೆಗೆ ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಕೇರಳ ಮಂಗಳೂರು ಭಾಗದಿಂದ ಹಲವಾರು ಮುಸ್ಲಿಮರು ಮಡಿಕೇರಿ ನಗರಕ್ಕೆ ಬಂದಿದ್ದು, ಹಿಂದೂಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಮಡಿಕೇರಿ ಯ ಜನರಲ್​ ಕಾರ್ಯಪ್ಪ ವೃತ್ತದಲ್ಲಿ ಸಣ್ಣ ಗಲಾಟೆ ನಡೆದು ಪರಿಸ್ಥಿತಿ ಕೈಮೀರುವಾಗ ಪೊಲೀಸರಿಂದ ಲಾಠಿ ಚಾರ್ಜ್ ನಡೆದಿತ್ತು.

ಟಿಪ್ಪು ಜಯಂತಿ ಕರಾಳದಿನ : ಮಡಿಕೇರಿಯಲ್ಲಿ ಕುಟ್ಟಪ್ಪ ಹುತಾತ್ಮ ದಿನಾಚರಣೆ

ಈ ಸಮಯದಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಬಳಿಕ ನಿಂತಿದ್ದ ಕುಟ್ಟಪ್ಪ ಅವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಲಾಗಿತ್ತು. ಇದರಿಂದ ಕುಟ್ಟಪ್ಪ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಪೆಟ್ಟು ಬಿದ್ದು ರಕ್ತದ ನಡುವಿನಲ್ಲಿ ಬಿದ್ದಿದ್ದರು. ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಸಾವನ್ನಪ್ಪಿದರು. ಇದು ಹಿಂದೂಗಳನ್ನು ಮತ್ತಷ್ಟು ಕೆರಳಿಸಿದ್ದು ದೊಡ್ಡ ಮಟ್ಟದಲ್ಲಿ ಗಲಾಟೆ ನಡೆದಿತ್ತು. ಇಂದು ಅವರು ಮೃತಪಟ್ಟ ದಿನವಾಗಿದ್ದು, ಇಂದಿಗೂ ಕುಟ್ಟಪ್ಪ ಅವರ ನಿಧನ ದಿನವನ್ನು ಹುತಾತ್ಮ ದಿನವೆಂದು ಹಿಂದೂಪರ ಸಂಘಟನೆಗಳು ಅಚರಿಸಿಕೊಂಡು ಬರುತ್ತಿವೆ.

ಡಿಸೆಂಬರ್​ 13ರಂದು ಕರಾಳ ದಿನಾಚರಣೆ : 1785 ರ ಡಿ. 13 ರಂದು ಟಿಪ್ಪು ಸುಲ್ತಾನ್ ಸಾವಿರಾರು ಕೊಡವರನ್ನು ಭಾಗಮಂಡಲದ ಹತ್ತಿರ ಕಾಕೊಟ್ಟು ಪೆರಂಬು ಎಂಬ ಸ್ಥಳದಲ್ಲಿ ಸೇರಿಸಿ ಸಾಮೂಹಿಕವಾಗಿ ಹತೈ ಮಾಡಿದ್ದ ಎನ್ನಲಾಗುತ್ತದೆ. ಈ ಕಾರಣಕ್ಕೆ ಟಿಪ್ಪು ಕೊಡವರ ವಿರೋಧಿ ಎಂದು ಇಲ್ಲಿನ ಜನರು ನಂಬಿದ್ದಾರೆ. ಅಲ್ಲದೆ ದುರಂತ ಘಟನೆಯ ಕರಾಳ ನೆನಪಿನ ಡಿ.13ನ್ನು ಕರಾಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ಇದನ್ನೂ ಓದಿ : ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ: ಕೊನೆಗೆ ಭಾವಚಿತ್ರ ಸ್ಥಳಾಂತರ

Last Updated :Nov 10, 2022, 9:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.