ETV Bharat / state

ಮಡಿಕೇರಿಯಲ್ಲಿ ದೈವ ಕೋಲ ಉತ್ಸವ: ಅಪರೂಪದ ಆಚರಣೆಗೆ ಹರಿದು ಬಂದ ಭಕ್ತಸಾಗರ

author img

By

Published : Mar 26, 2022, 9:53 AM IST

ಮಡಿಕೇರಿಯ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಅದ್ಧೂರಿಯಾಗಿ ದೈವದ ಕೋಲ ಉತ್ಸವ ನಡೆಯಿತು. ವಿಭಿನ್ನವಾದ ಆಚರಣೆ ವೀಕ್ಷಿಸಲು ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ್ದರು.

Grandly celebrated Daiva Kola fair in Madikeri
ಮಡಿಕೇರಿಯಲ್ಲಿ ನಡೆದ ದೈವ ಕೋಲ ಉತ್ಸವ

ಮಡಿಕೇರಿ: ಇಲ್ಲಿನ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ದೈವದ ಕೋಲ ಉತ್ಸವ ಅದ್ಧೂರಿಯಾಗಿ ನಡೆದಿದೆ. ಅಪರೂಪದ ಆಚರಣೆಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು.

ಮಡಿಕೇರಿಯಲ್ಲಿ ನಡೆದ ದೈವ ಕೋಲ ಉತ್ಸವ

ಮಡಿಕೇರಿಯ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಪ್ರತಿ ಮೂರು ವರ್ಷಕೊಮ್ಮೆ ಸಂಭ್ರಮದ ದೈವಗಳ ಕೋಲ ನಡೆಯುತ್ತದೆ. ಕೋವಿಡ್​ ಹಿನ್ನೆಲೆಯಲ್ಲಿ ಈ ಆಚರಣೆ ಕೇವಲ ಹರಕೆ ಒಪ್ಪಿಸುವುದಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, ಈ ಬಾರಿ ಅದ್ಧೂರಿಯಾಗಿ ದೈವ ಕೋಲ ನಡೆಯಿತು. ರಾತ್ರಿಯಿಡಿ ನಡೆದ ಈ ಕೋಲಕ್ಕೆ ಸಾವಿರಾರರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು.

ಪ್ರಮುಖವಾಗಿ ವಿಷ್ಣುಮೂರ್ತಿ ಕೋಲ, ಫಾಷಣಮೂರ್ತಿ,ರಕ್ತೇಶ್ವರಿ,ಗುಳಿಗನ ಕೋಲ, ಅಪ್ಪಚ್ಚೀರ ಮಂದಣ್ಣ ಸೇರಿದಂತೆ ಹಲವು ಬಗೆಯ ಕೋಲಗಳು ನಡೆದವು. ತೆರೆ ಕಟ್ಟಿದವರ ವೇಷಭೂಷಣಗಳು, ನೃತ್ಯಗಳು ನೋಡುಗರ ರೋಮಾಂಚನಗೊಳಸಿವಂತಿತ್ತು. ಇನ್ನೂ ವಿಷ್ಣುಮೂರ್ತಿಯು ಬೆಂಕಿಗೆ ಬೀಳುವ ದೃಶ್ಯವನ್ನು ನೋಡುವುದಕ್ಕಾಗಿಯೇ ಹೆಚ್ಚಿನ ಭಕ್ತಾದಿಗಳು ಕಾದು ಕುಳಿತ್ತಿದ್ದರು.

ಇನ್ನು ದೈವದ ಕೋಲ ಆಚರಣೆ ಮಾಡಲು ಅದರದ್ದೇ ಆದ ಇತಿಹಾಸ ಕೂಡ ಇದೆ. ರಾಜರ ಕಾಲದಿಂದಲೂ ನಡೆದುಕೊಂಡು ಬಂದಿರುವಂತಹ ಆಚರಣೆಯಾಗಿದೆ. ರಾಜರ ಕಾಲದಲ್ಲಿ ಭೀಕರ ಕಾಯಿಲೆಗಳು ಕಾಣಿಸಿಕೊಂಡಿದ್ದ ಸಂದರ್ಭ ಇಲ್ಲಿಯ ರಾಜರು ಕೇರಳ ರಾಜರಾದ ಮಲಯ ಹಾಗೂ ತಂಬರ ರಾಜರ ಮೋರೆ ಹೋಗಿದ್ದರು.

ಈ ಸಂದರ್ಭ ಅಲ್ಲಿಯ ಮಲಯರು ಕೊಡಗು ಜಿಲ್ಲೆಗೆ ವೈದ್ಯರೊಂದಿಗೆ ಆಗಮಿಸಿದ್ದರು. ಅಲ್ಲಿಯ ದೇವರುಗಳನ್ನು ಜಿಲ್ಲೆಗೆ ಕರೆತಂದು ಇಲ್ಲಿಯೇ ನೆಲೆನಿಂತರು ಎಂಬುದು ಇತಿಹಾಸ. ಆದ್ದರಿಂದ ಇಂದಿಗೂ ಮಲಯ ಜನಾಂಗದವರು ಆಗಮಿಸಿ ಈ ತೆರೆಯನ್ನು ಕಟ್ಟುತ್ತಾರೆ. ರಾಜರ ಕಾಲದಲ್ಲಿ ಆರಂಭವಾದ ಈ ಆಚರಣೆ ಇಂದಿಗೂ ನಡೆದುಕೊಂಡು ಬರುತ್ತಿದೆ.

ಇದನ್ನೂ ಓದಿ: ರಫ್ತು ಸನ್ನದ್ಧತೆ ಶ್ರೇಯಾಂಕ ಬಿಡುಗಡೆ: ಕರ್ನಾಟಕಕ್ಕೆ 3ನೇ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.