ETV Bharat / state

ಅಪ್ಪಚ್ಚು ರಂಜನ್‌ಗೆ ಮಂತ್ರಿ ಸ್ಥಾನ ಕೊಡಿ: ಕೊಡವ ಸಮಾಜ ಆಗ್ರಹ

author img

By

Published : Aug 22, 2019, 8:12 AM IST

ಕೊಡವ ಸಮುದಾಯದ ಪ್ರಬಲ ನಾಯಕ, ಶಾಸಕ ಅಪ್ಪಚ್ಚು ರಂಜನ್​ಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಕೊಡವ ಸಮಾಜ ಆಗ್ರಹಿಸಿದೆ. ನಮಗೆ ಹೊರ ಜಿಲ್ಲೆಯ ಉಸ್ತುವಾರಿ ಸಚಿವರು ಬೇಡ. ನಮ್ಮ ಜಿಲ್ಲೆಯ ಇಬ್ಬರು ಶಾಸಕರು ಸಚಿವ ಸ್ಥಾನಕ್ಕೆ ಸಮರ್ಥರಿದ್ದಾರೆ. ಆದ್ದರಿಂದ ಅವರಿಗೆ ಸಚಿವ ಸ್ಥಾನ ನೀಡಿ ಎಂದು ಆಗ್ರಹಿಸಿದೆ.

ಅಪ್ಪಚ್ಚು ರಂಜನ್‌ಗೆ ಸಚಿವ ಸ್ಥಾನ ನೀಡಲು ಆಗ್ರಹ

ಕೊಡಗು: ಕೊಡವ ಸಮುದಾಯದ ಪ್ರಬಲ ನಾಯಕ ಎಂ.ಪಿ.ಅಪ್ಪಚ್ಚು ರಂಜನ್‌ಗೆ ಸಚಿವ ಸ್ಥಾನ ನೀಡುವಂತೆ ಕೊಡವ ಸಮಾಜ ಒಕ್ಕೂಟದ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಆಗ್ರಹಿಸಿದ್ದಾರೆ‌.

ಈ ಹಿಂದೆ 10 ತಿಂಗಳು ಉಸ್ತುವಾರಿ ಸಚಿವರಾಗಿದ್ದ ರಂಜನ್ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಉತ್ತಮವಾಗಿ ಜನರ ಸೇವೆ ಮಾಡಿದ್ದಾರೆ. ಕೊಡಗಿನಿಂದ 6 ಬಾರಿ ಸ್ಪರ್ಧಿಸಿ 5 ಬಾರಿ ಗೆಲುವು‌ ಸಾಧಿಸಿದ್ದಾರೆ. ಜಲಪ್ರಳಯ ಸಂಭವಿಸಿದ ಹಿನ್ನೆಲೆಯಲ್ಲಿ ಕೊಡಗಿನವರೇ ಉಸ್ತುವಾರಿ ಸಚಿವರು ಆಗುವುದು ಸೂಕ್ತ. ಆದ್ದರಿಂದ ಅಪ್ಪಚ್ಚು ರಂಜನ್‌ಗೆ ಮಂತ್ರಿ ಪಟ್ಟ ನೀಡಬೇಕು ಎಂದು ಒತ್ತಾಯಿಸಿದ್ದಾರೆ‌.

ಅಪ್ಪಚ್ಚು ರಂಜನ್‌ಗೆ ಸಚಿವ ಸ್ಥಾನ ನೀಡಲು ಆಗ್ರಹ

ನಮ್ಮ ಸಮಾಜದ ಶೇ. 95ರಷ್ಟು ಜನ ಬಿಜೆಪಿಗೆ ಮತ ಹಾಕಿದ್ದಾರೆ. ಪ್ರತಾಪ್ ಸಿಂಹ ಸಂಸದರಾಗಿ ಗೆಲುವು‌ ಸಾಧಿಸಲು ಕೊಡಗಿನ ಮತಗಳೇ ಕಾರಣವಾಗಿವೆ. ಹೀಗಿದ್ದರೂ ಕೊಡವ ಜನಾಂಗಕ್ಕೆ ಅನ್ಯಾಯ ಮಾಡಲಾಗುತ್ತಿದೆ. ನಮಗೆ ಹೊರ ಜಿಲ್ಲೆಯ ಉಸ್ತುವಾರಿ ಸಚಿವರು ಬೇಡ. ನಮ್ಮ ಜಿಲ್ಲೆಯ ಇಬ್ಬರು ಶಾಸಕರು ಸಚಿವ ಸ್ಥಾನಕ್ಕೆ ಸಮರ್ಥರಿದ್ದಾರೆ ಎಂದಿದ್ದಾರೆ.

Intro:ಅಪ್ಪಚ್ಚು ರಂಜನ್‌ಗೆ ಮಂತ್ರಿ ಸ್ಥಾನ ಕೊಡಿ: ಕೊಡವ ಸಮಾಜ ಆಗ್ರಹ

ಕೊಡಗು: ಕೊಡವ ಸಮುದಾಯದ ರಾಜಕೀಯ ನಾಯಕ
ಎಂ.ಪಿ.ಅಪ್ಪಚ್ಚು ರಂಜನ್‌ಗೆ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಕೊಡುವಂತೆ ಸಮಾಜದ ಒಕ್ಕೂಟದ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಆಗ್ರಹಿಸಿದ್ದಾರೆ‌.

ಕೊಡವ ಸಮುದಾಯದಿಂದ ಶಾಸಕರಾಗಿರುವ ಎಂ.ಪಿ. ಅಪ್ಪಚ್ಚು ರಂಜನ್‌ಗೆ ಮಂತ್ರಿ ಪಟ್ಟ ಕೊಡಬೇಕು‌.ಹಿಂದೆ 10 ತಿಂಗಳು ಉಸ್ತುವಾರಿ ಸಚಿವರಾಗಿದ್ದ ರಂಜನ್ ಯಾವುದೇ ಕಪ್ಪುಚುಕ್ಕೆಯಿಲ್ಲದೆ ಉತ್ತಮವಾಗಿ ಜನರ ಸೇವೆ ಮಾಡಿದ್ದಾರೆ.
ಕೊಡಗಿನಿಂದ 6 ಬಾರಿ ಸ್ಪರ್ಧಿಸಿ 5 ಬಾರಿ ಗೆಲುವು‌ ಸಾಧಿಸಿದ್ದಾರೆ.ಜಲಪ್ರಳಯ ಸಂಭವಿಸಿದ ಹಿನ್ನೆಲೆಯಲ್ಲಿ ಕೊಡಗಿನವರೇ ಉಸ್ತುವಾರಿ ಸಚಿವರು ಆಗುವುದು ಸೂಕ್ತವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಡವ ಜನಾಂಗ ಕ್ರೀಡೆ, ಸೇನೆಗೆ ಅಪಾರ ಕೊಡುಗೆ ನೀಡಿದೆ.
ಶೇ.95 ರಷ್ಟು ಜನಾಂಗ, ಬಾಂಧವರು ಬಿಜೆಪಿಗೆ ಮತ ಹಾಕಿದ್ದಾರೆ.ಪ್ರತಾಪ್ ಸಿಂಹ ಸಂಸದರಾಗಿ ಗೆಲುವು‌ ಸಾಧಿಸಲು ಕೊಡಗಿನ ಮತಗಳೇ ಕಾರಣವಾಗಿವೆ.ಹೀಗಿದ್ದರೂ ಕೊಡವ ಜನಾಂಗಕ್ಕೆ ಅನ್ಯಾಯ ಮಾಡಲಾಗುತ್ತಿದೆ.ನಮಗೆ ಹೊರ ಜಿಲ್ಲೆಯ ಉಸ್ತುವಾರಿ ಸಚಿವರು ಬೇಡ. ನಮ್ಮ ಜಿಲ್ಲೆಯ ಇಬ್ಬರು ಶಾಸಕರು ಸಚಿವ ಸ್ಥಾನಕ್ಕೆ ಸಮರ್ಥರಿದ್ದಾರೆ.ಶಾಸಕ ಎಂ ಪಿ ಅಪ್ಪಚ್ಚು ರಂಜನ್ ಗೆ ಮಂತ್ರಿ ಪದವಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.